ಹಿರಿಯಡಕ: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಪುಜೆ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ಈಗಾಗಲೇ ಪಂಚಾಯತ್ ವತಿಯಿಂದ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವ ಬಗ್ಗೆ ಯೋಜನೆ ರೂಪಿಸಿದ್ದು ಈ ಬಗ್ಗೆ ಈ ಭಾಗದ ಸಾರ್ವಜನಿಕರಿಂದ ವಿರೋಧವಿದ್ದು ಇಲ್ಲಿ ಡಂಪಿಂಗ್ ಯಾರ್ಡ್ ಮಾಡುವ ಬಗ್ಗೆ ಪಂಚಾಯತ್ ಯೋಜನೆ ರೂಪಿಸಿದ್ದು 2005ರಲ್ಲಿ ಹಾಗೂ 2018ರಲ್ಲಿ ಗ್ರಾಮಸ್ಥರು ಸೇರಿ ಪ್ರತಿಭಟಿಸಿ ಅದಕ್ಕೆ ತಡೆ ನೀಡಿದ್ದೆವು.ಈಗ ಮತ್ತೆ ಪುನಹ ಅದೇ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ (ಎಸ್ ಆರ್ ಎಲ್ ಎಂ) ಘಟಕ ಮಾಡುವ ಯೋಜಗೆ ಪಂಚಾಯತ್ ಮುಂದಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಪಾಪುಜೆ ಗ್ರಾಮಸ್ಥರು ಮಾಧ್ಯಮದ ಮೂಲಕ ಪಂಚಾಯತ್ ಗೆ ಮನವಿ ಮಾಡಿದ್ದಾರೆ.
ಈ ಪ್ರದೇಶದಲ್ಲಿ ಸುಮಾರು 84 ಕ್ಕೂ ಮಿಕ್ಕಿ ಮನೆಗಳು ಸೇರಿದಂತೆ 250 ಕ್ಕೂ ಮಿಕ್ಕಿ ಜನ ವಾಸವಾಗಿದ್ದಾರೆ .ಇಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಿದರೆ ಪರಿಸರ ಮಾಲಿನ್ಯ ಜೊತೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರಿಗಿದೆ .ಪಕ್ಕದಲ್ಲಿಯೇ ಸುವರ್ಣಾನದಿ ಹರಿಯುತ್ತಿದ್ದು ಇಲ್ಲಿಯ ನೀರು ಮಣಿಪಾಲ ಹಾಗೂ ಉಡುಪಿ ನಗರಕ್ಕೆ ಸರಬರಾಜು ಆಗುತ್ತದೆ .ಅಲ್ಲದೆ ಪಕ್ಕದಲ್ಲಿ ಬ್ರಹ್ಮಸ್ಥಾನದ ಗುಡಿ ಇದ್ದು ತ್ಯಾಜ್ಯ ಹಾಕುವುದರಿಂದ ವಾಸನೆ ಬಂದು ಪರಿಸರ ಹಾಳಾಗುತ್ತದೆ .ಈ ಬಗ್ಗೆ 2ಬಾರಿ ಪ್ರತಿಭಟನೆ ಮಾಡಿ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪಂಚಾಯಿತಿ ಏಕಾಏಕಿಯಾಗಿ ಇಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಲು ಮುಂದಾಗಿದ್ದು ಈ ಬಗ್ಗೆ ಗ್ರಾಮಸ್ಥರ ವಿರೋಧವಿದೆ ಆದರೂ ಮುಂದುವರಿದಲ್ಲಿ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟಿಸಿದ ಬೇಕಾಗುತ್ತದೆ ಆದ್ದರಿಂದ ದಯವಿಟ್ಟು ಪಂಚಾಯತ್ ಕೂಡಲೇ ಈ ಕ್ರಮವನ್ನು ಕೈಬಿಟ್ಟು ಬೇರೆ ಕಡೆ ಜನವಸತಿ ಇಲ್ಲದ ಪ್ರದೇಶದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಲಿ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.