ಬಡವರ ಅನ್ನಕ್ಕೂ ವಿಷ ಹಾಕಿದ ರಾಜ್ಯ ಸರಕಾರ; ದೀಪಕ್ ಕೋಟ್ಯಾನ್ ಆರೋಪ

ಉಡುಪಿ: ಬೆಳ್ಮಣ್‌ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ವಿತರಣೆಯಾದ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಗ್ರಾಮದ ಗ್ರಾಹಕರು ಮನೆಗೆ ಪಡಿತರ ತೆಗೆದುಕೊಂಡು ಹೋದ ಅಕ್ಕಿಯನ್ನು ನೀರಿನಲ್ಲಿ ಹಾಕಿ ತೊಳೆಯುತ್ತಿದ್ದಾಗ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಆಹಾರ ಇಲಾಖೆ ಮೂಲಕ ವಿತರಣೆ ಆಗುವ ಅಕ್ಕಿ ಬಹಳಷ್ಟು ಸಲ ಕಲಬೆರಕೆಯಿಂದ ಕೂಡಿರುವುದು ರಾಜ್ಯದ ಅಲ್ಲಾಲ್ಲಿ […]

ಉಡುಪಿ: ಅಪಘಾತದಲ್ಲಿ ಗಾಯಗೊಂಡಿದ್ದ ಸಾರಿಗೆ ಉದ್ಯಮಿ ಮೃತ್ಯು

ಉಡುಪಿ: ಕುರ್ಕಾಲು-ಸುಭಾಸ್‌ ನಗರ ಬಳಿ ಆಟೊ ರಿಕ್ಷಾ ಮತ್ತು‌ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ‌ ಗಂಭೀರ ಗಾಯಗೊಂಡಿದ್ದ ಪಾಂಗಾಳ ಜೆ. ಎನ್. ಮೋಟಾರ್ಸ್ ನ ಮಾಲೀಕ ಹರಿದಾಸ್ ಭಟ್ (65) ಚಿಕಿತ್ಸೆ ಫಲಕಾರಿಯಾಗದೇ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಶನಿವಾರ ಬೆಳಿಗ್ಗೆ ಕುರ್ಕಾಲು ಸುಭಾಸ್ ನಗರ ಸಮೀಪದ ದ್ವಾರದ ಬಳಿ ಬೈಕ್‌ ಹಾಗೂ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಹರಿದಾಸ್ ಭಟ್ ಅವರಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ […]

ಉಡುಪಿ: ಕೊರೊನಾ ಸೋಂಕಿನಲ್ಲಿ ಮತ್ತೆ ಏರಿಕೆ; ಐವರು ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಏರಿಕೆಕಂಡಿದ್ದು, 973 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 353, ಕುಂದಾಪುರ ತಾಲೂಕಿನಲ್ಲಿ 340, ಕಾರ್ಕಳ ತಾಲೂಕಿನಲ್ಲಿ‌ 273 ಹಾಗೂ ಹೊರ ಜಿಲ್ಲೆಯ ಏಳು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5866 ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಕೂಡ 5 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಉಡುಪಿ ತಾಲೂಕಿನ 55 ವರ್ಷದ ವ್ಯಕ್ತಿ, 56 ವರ್ಷದ ವ್ಯಕ್ತಿ, 70 ವರ್ಷದ ವೃದ್ಧೆ ಹಾಗೂ ಕುಂದಾಪುರ […]

ನಾಳೆಯಿಂದ ಮಾಹೆಯ ಗಾಂಧಿಯನ್ ಸೆಂಟರ್ ವತಿಯಿಂದ ತತ್ತ್ವಾಂಕುರ -2021 ಸಂವಾದ ಕಾರ್ಯಕ್ರಮ

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆನ್‌ಲೈನ್ ನಲ್ಲಿ ಆಯೋಜಿಸಿರುವ ವಿದ್ಯಾರ್ಥಿಗಳ ಅಂತರರಾಷ್ಟ್ರೀಯ ಉತ್ಸವ  ತತ್ತ್ವಾಂಕುರ -2021 ನ್ನು, ಖ್ಯಾತ ಬರಹಗಾರ ಜಯಂತ್ ಕಾಯ್ಕಿಣಿ ಅವರು ಮೇ 27, ಗುರುವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಖ್ಯಾತ ಗಾಯಕ ಮತ್ತು ಬರಹಗಾರ ಟಿ ಎಂ ಕೃಷ್ಣ ಅವರೊಂದಿಗೆ ಮೇ 28, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸಂವಾದ ಕಾರ್ಯಕ್ರಮವೂ ನಡೆಯಲಿದೆ. ಮಣಿಪಾಲ್‌ನ ಜಿಸಿಪಿಎಎಸ್ ಎರಡು ದಿನಗಳ ವಿದ್ಯಾರ್ಥಿಗಳ ಅಂತರರಾಷ್ಟ್ರೀಯ ಆನ್‌ಲೈನ್ ಉತ್ಸವ […]

ಬೊಮ್ಮರಬೆಟ್ಟು ಗ್ರಾಪಂ ವ್ಯಾಪ್ತಿಯ ಹಿರಿಯಡ್ಕ ಪಾಪುಜೆ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿರೋಧ

ಹಿರಿಯಡಕ: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಪುಜೆ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ಈಗಾಗಲೇ ಪಂಚಾಯತ್ ವತಿಯಿಂದ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವ ಬಗ್ಗೆ ಯೋಜನೆ ರೂಪಿಸಿದ್ದು ಈ ಬಗ್ಗೆ ಈ ಭಾಗದ ಸಾರ್ವಜನಿಕರಿಂದ ವಿರೋಧವಿದ್ದು ಇಲ್ಲಿ ಡಂಪಿಂಗ್ ಯಾರ್ಡ್ ಮಾಡುವ ಬಗ್ಗೆ ಪಂಚಾಯತ್ ಯೋಜನೆ ರೂಪಿಸಿದ್ದು 2005ರಲ್ಲಿ ಹಾಗೂ 2018ರಲ್ಲಿ ಗ್ರಾಮಸ್ಥರು ಸೇರಿ ಪ್ರತಿಭಟಿಸಿ ಅದಕ್ಕೆ ತಡೆ ನೀಡಿದ್ದೆವು.ಈಗ ಮತ್ತೆ ಪುನಹ ಅದೇ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ (ಎಸ್ ಆರ್ ಎಲ್ ಎಂ) ಘಟಕ ಮಾಡುವ […]