ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ; ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ಕೇಂದ್ರ ಸರ್ಕಾರ ಸೋಮವಾರ ಸಂಜೆ ಘೋಷಿಸಿತು. ಸಿಎಎ ಅಥವಾ ಪೌರತ್ವ ತಿದ್ದುಪಡಿ ಕಾಯ್ದೆಗೆ ಡಿಸೆಂಬರ್ 2019 ರಲ್ಲಿ ಸಂಸತ್ತು ಅನುಮೋದನೆ ನೀಡಿತ್ತು. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಪೀಡಿತ ಅಲ್ಪ ಸಂಖ್ಯಾತ ಹಿಂದೂಗಳು ದಶಕಗಳಿಂದ ಭಾರತದಲ್ಲಿ ಶರಣಾರ್ಥಿಗಳಾಗಿದ್ದು ಇಂಥವರಿಗೆ ಭಾರತೀಯ ಪೌರತ್ವ ನೀಡುವ ಕಾನೂನು ಇದಾಗಿದೆ. 1950 ರಲ್ಲಿ ಸಿ ಎ ಎ ಕಾನೂನು ಜಾರಿಗೊಳಿಸಲಾಗಿದ್ದರೂ ಕಳೆದ ಕೆಲವು ದಶಕಗಳಿಂದ ಶರಣಾರ್ಥಿಗಳಿಗೆ ಪೌರತ್ವ ನೀಡಲಾಗಿರಲಿಲ್ಲ. ಮೋದಿ ಸರ್ಕಾರ 2019 ರಲ್ಲಿ ಕಾನೂನಿಗೆ […]

ನೀರೆ ಗ್ರಾಮ ಪಂಚಾಯತ್ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

ಕಾರ್ಕಳ: ನೀರೆ ಗ್ರಾಮ ಪಂಚಾಯತ್ ನ ನೂತನ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಅರ್ಚಕ ಶ್ರೀಪತಿ ಭಟ್ ಇವರ ಪೌರೋಹಿತ್ಯದಲ್ಲಿ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಶಿಲಾನ್ಯಾಸ ನೆರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷಸಚ್ಚಿದಾನಂದ ಪ್ರಭು, ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಗ್ರಾಪಂ ಸದಸ್ಯರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷರಾದ ವಿಕ್ರಮ್ ಹೆಗ್ಡೆ, ಮಾಲಿನಿ ಜೆ. ಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರಮೇಶ್ ಕಲ್ಲೊಟ್ಟೆ ,ಸದಾನಂದ ಪ್ರಭು, ಪಂ.ಅ.ಅಧಿಕಾರಿ ಅಂಕಿತಾ, ಚರ್ಚಿನ ಧರ್ಮ ಗುರುಗಳಾದ ಹೆರಾಲ್ಡ್, ಮೈತ್ರಿ […]

ಗಂಗೊಳ್ಳಿ ಬೋಟ್ ದುರಂತ: ಮೀನುಗಾರರಿಗೆ ಪರಿಹಾರ ವಿತರಣೆ ಕಾರ್ಯಕ್ರಮ

ಕುಂದಾಪುರ: ಇತ್ತೀಚೆಗೆ ಗಂಗೊಳ್ಳಿಯಲ್ಲಿ ನಡೆದ ಬೋಟ್ ಅಗ್ನಿ ದುರಂತ ಹಾಗೂ ಶೀರೂರು ನಾಡದೋಣಿ ದುರಂತದಿಂದ ಸಂತ್ರಸ್ತರಾದ ಮೀನುಗಾರರಿಗೆ ಮೀನುಗಾರಿಕೆ ಇಲಾಖೆ ವತಿಯಿಂದ ಪರಿಹಾರ ವಿತರಣೆ ಹಾಗೂ ಇಲಾಖೆಯ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಶಾಸಕರಾದ ಯಶಪಾಲ್ ಸುವರ್ಣ ಭಾಗವಹಿಸಿದರು. ಸಮಾರಂಭವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಾಂಕಾಳ ಎಸ್. ವೈದ್ಯ ಉದ್ಘಾಟಿಸಿದರು. ಸಮಾರಂಭದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ್, ಅಪರ ಜಿಲ್ಲಾಧಿಕಾರಿಮಮತಾ ದೇವಿ, ಮೀನುಗಾರಿಕೆ […]

ರಾಜ್ಯದಲ್ಲಿ ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿಗೆ ನಿಷೇಧ; ಗೋಬಿ ಮಂಚೂರಿಗೆ ಬಣ್ಣ ಬಳಸಿದರೆ ಕಾನೂನು ಕ್ರಮ

ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆಯು ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್‌ನಲ್ಲಿ ರೋಡಮೈನ್-ಬಿ ಆಹಾರ ಬಣ್ಣ ಏಜೆಂಟ್ ಅನ್ನು ನಿಷೇಧಿಸಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಟನ್‌ ಕ್ಯಾಂಡಿ ಮಾರಾಟ, ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ ಮಾದರಿಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ ಹಾಗೂ ಬಳಕೆಯ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು […]

ಕುನೋ ಉದ್ಯಾನದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾ ಚಿರತೆ ಗಾಮಿನಿ

ಭೋಪಾಲ್: ದಕ್ಷಿಣ ಆಫ್ರಿಕಾದ ತ್ಸ್ವಾಲು ಕಲಹರಿ ಮೀಸಲು ಪ್ರದೇಶದಿಂದ ತರಲಾದ ಸುಮಾರು 5 ವರ್ಷ ಪ್ರಾಯದ ಹೆಣ್ಣು ಚಿರತೆ ಗಾಮಿನಿ 5 ಮರಿಗಳಿಗೆ ಜನ್ಮ ನೀಡಿದೆ. ಇದು ಭಾರತದಲ್ಲಿ ಜನಿಸಿದ ಮರಿಗಳ ಸಂಖ್ಯೆಯನ್ನು 13 ಕ್ಕೆ ಏರಿಸಿದೆ. ಇದು ಕಳೆದ ಕೆಲವು ತಿಂಗಳಲ್ಲಿ ಮರಿ ಇಟ್ಟ ನಾಲ್ಕನೇ ಪ್ರಕರಣವಾಗಿದೆ.