ರಕ್ಷಾ ಬಂಧನಕ್ಕಾಗಿ ಅಂಚೆ ಇಲಾಖೆಯಿಂದ ಆನ್ ಲೈನ್ ರಾಕಿ ಖರೀದಿ, ರವಾನೆ ಸೇವೆ

ಬೆಂಗಳೂರು: ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ಅಂಚೆ ಇಲಾಖೆ ಮಹಿಳೆಯರಿಗೆ ವಿಶೇಷವಾದ ಸೇವೆ ನೀಡಲು ಮುಂದಾಗಿದೆ. ಆಗಸ್ಟ್ 3 ರಂದು ನಡೆಯುವ ರಕ್ಷಾ ಬಂಧನಕ್ಕಾಗಿ ಇಲಾಖೆಯು ಆನ್ ಲೈನ್ ಮೂಲಕ ರಾಕಿ ಖರೀದಿ ಮತ್ತು ರವಾನೆ ಸೇವೆಯನ್ನು ಆರಂಭಿಸಿದೆ.
ಅಂಚೆ ಇಲಾಖೆಯ ವೆಬ್ ಸೈಟ್ ನಲ್ಲಿ ನಿಮಗೆ ಇಷ್ಟವಾದ ರಾಖಿಯನ್ನು ಆಯ್ಕೆ ಮಾಡಿಕೊಂಡು, ಆನ್ ಲೈನ್ ಮೂಲಕವೇ ಹಣ ಪಾವತಿಸಬೇಕು. ಹಾಗೆಯೇ ಮನೆಯ ವಿಳಾಸ ನೀಡಿದರೆ ರಕ್ಷಾ ಬಂಧನ ಹಬ್ಬದಂದು ರಾಖಿ ಮನೆ ತಲುಪುತ್ತದೆ ಕರ್ನಾಟಕ ಅಂಚೆ ಇಲಾಖೆ ಮಾಹಿತಿ ನೀಡಿದೆ.