ಉಡುಪಿ: ಇಂದು 125 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಉಡುಪಿ: ಜಿಲ್ಲೆಯಲ್ಲಿ ಇಂದು 125 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 2122 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ಇನ್ನು ಸಹ 1251ಸಕ್ರಿಯ ಕೊರೊನಾ ಪ್ರಕರಣಗಳಿವೆ ಎಂದು ತಿಳಿಸಿದೆ.

ಉಡುಪಿಯಲ್ಲಿ ಇಂದು 170 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಇಂದು 170 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3388ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೃಷಿಯಲ್ಲೇ ಬದುಕು ಕಟ್ಟಿಕೊಂಡ ಕಾರ್ಕಳದ ಮುಂಡ್ಲಿಯ ಕೃಷಿಕ ಮಾಧವ ಗೌಡರ ಸಾಧನೆಯ ಕತೆ ಒಮ್ಮೆ ಕೇಳಿ!

ಕೃಷಿಯಲ್ಲಿ ವಿನೂತನವಾದ ಕೃಷಿ ವಿಧಾನವನ್ನು ಬಳಸಿಕೊಂಡು ಇಳುವರಿ ಪಡೆಯುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ ಕಾರ್ಕಳ ತಾಲೂಕಿನ ಜಾರ್ಕಳ ಮುಂಡ್ಲಿಯ ಕೃಷಿಕ ಮಾಧವ ಗೌಡ. ಅಡಿಕೆ, ಬಾಳೆ, ಕರಿಮೆಣಸು, ಭತ್ತ, ತೆಂಗು, ಸುವರ್ಣ ಗೆಡ್ಡೆ  ಮೊದಲಾದ ಬೆಳೆಗಳನ್ನು ಬೆಳೆಸುತ್ತಲೇ ಕೃಷಿಯಲ್ಲೇ ಬದುಕು ಕಟ್ಟಿಕೊಂಡವರು  ಮಾಧವ ಗೌಡರು. ಗೌಡರಿಗೆ ಸುಮರು ಎಂಟುವರೆ ಎಕರೆ ಜಾಗವಿದೆ. ಆ ಜಾಗವನ್ನು ಕ್ರಮವಾಗಿ ಬಳಸಿಕೊಂಡು ಕೃಷಿ ಮಾಡಿದ್ದಾರೆ. ಮಿಶ್ರ ಬೆಳೆಗೆ ಗೌಡರು ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡುತ್ತಿದ್ದು ಕ್ಯಾವೆಂಡಿಷ್ ಬಾಳೆ, ಕಾಳುಮೆಣಸು, ಸುವರ್ಣ ಗೆಡ್ಡೆ ಕೃಷಿಯನ್ನು […]

ರಕ್ಷಾ ಬಂಧನಕ್ಕಾಗಿ ಅಂಚೆ ಇಲಾಖೆಯಿಂದ ಆನ್ ಲೈನ್ ರಾಕಿ ಖರೀದಿ, ರವಾನೆ ಸೇವೆ

ಬೆಂಗಳೂರು: ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ಅಂಚೆ ಇಲಾಖೆ ಮಹಿಳೆಯರಿಗೆ ವಿಶೇಷವಾದ ಸೇವೆ ನೀಡಲು ಮುಂದಾಗಿದೆ. ಆಗಸ್ಟ್ 3 ರಂದು ನಡೆಯುವ ರಕ್ಷಾ ಬಂಧನಕ್ಕಾಗಿ ಇಲಾಖೆಯು ಆನ್ ಲೈನ್ ಮೂಲಕ ರಾಕಿ ಖರೀದಿ ಮತ್ತು ರವಾನೆ ಸೇವೆಯನ್ನು ಆರಂಭಿಸಿದೆ. ಅಂಚೆ ಇಲಾಖೆಯ ವೆಬ್ ಸೈಟ್ ನಲ್ಲಿ ನಿಮಗೆ ಇಷ್ಟವಾದ ರಾಖಿಯನ್ನು ಆಯ್ಕೆ ಮಾಡಿಕೊಂಡು, ಆನ್ ಲೈನ್ ಮೂಲಕವೇ ಹಣ ಪಾವತಿಸಬೇಕು. ಹಾಗೆಯೇ ಮನೆಯ ವಿಳಾಸ ನೀಡಿದರೆ ರಕ್ಷಾ ಬಂಧನ ಹಬ್ಬದಂದು ರಾಖಿ ಮನೆ ತಲುಪುತ್ತದೆ ಕರ್ನಾಟಕ […]

ಕಬ್ಬಿನಾಲೆ ಮತ್ತಾವು ಸೇತುವೆ ಪರಿಶೀಲನೆ

ಹೆಬ್ರಿ: ತಾಲೂಕಿನ ಮುದ್ರಾಡಿ ಗ್ರಾ ಪಂ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಮುಡ್ಲಾಂತು ರಸ್ತೆಯ ಮತ್ತಾವು ಸೇತುವೆ ಪಾರಿಕಲ್ಲು ವಿದ್ಯುತ್ ಸಂಪರ್ಕ ರಸ್ತೆ ಕುರಿತಾಗಿ ಐಟಿಡಿಪಿ ಸಮನ್ವಯಾಧಿಕಾರಿ ಹಾಗೂ ವಲಯ ಅರಣ್ಯ ಅಧಿಕಾರಿಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು, ಸಂಘಟನಾ ಕಾರ್ಯದರ್ಶಿ ಗಂಗಾಧರ ಗೌಡ ಈದು, ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಉಪಾಧ್ಯಕ್ಷ ಸುಂದರ ಗೌಡ ಮುದ್ರಾಡಿ, ಮಲೆಕುಡಿಯ ಸಂಘ ಹೆಬ್ರಿ ತಾಲೂಕು ಸಮಿತಿಯ […]