ಉಡುಪಿ: ಕೇರಳ ಕಲ್ಚರಲ್ ಆಂಡ್ ಸೋಶಿಯಲ್ ಸೆಂಟರ್ ಉಡುಪಿ ಇದರ 29ನೇ ವಾರ್ಷಿಕೊತ್ಸವ ಮತ್ತು ಓಣಂ ಹಬ್ಬ ಆಚರಣೆಯು ಸೆಪ್ಟೆಂಬರ್ 18 ಭಾನುವಾರದಂದು ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ ಎಂದು ಓಣಂ ಹಬ್ಬ ಆಚರಣೆಯ ಕಮಿಟಿ ಅಧ್ಯಕ್ಷ ಟಿ ಎ ರವಿರಾಜನ್ ಹೇಳಿದರು.
ಕೇರಳ ಕಲ್ಚರಲ್ ಆಂಡ್ ಸೋಶಿಯಲ್ ಸೆಂಟರ್ ಉಡುಪಿ ಇದರ 29ನೇ ವಾರ್ಷಿಕೊತ್ಸವ ಮತ್ತು ಓಣಂ ಹಬ್ಬ ಆಚರಣೆಯು ಸೆಪ್ಟೆಂಬರ್ 18 ಭಾನುವಾರದಂದು ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ ಕಾರ್ಯಕ್ರಮದ ಮೊದಲು ಈ ಸಾಲಿನ ಓಣಂ ಹಬ್ಬದ ಪ್ರಾತಹಕಾಲ ಪೂಕಳಂ ಸ್ಪರ್ಧೆ ಹಾಗೂ ಮನೋರಂಜನೆ ನಡೆಯಲಿದೆ ಬಳಿಕ ಸಭಾಕಾರ್ಯಕ್ರಮ ನಡೆಯಲಿದ್ದು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿಯಾದ ಕೂರ್ಮರಾವ್ ಎಂ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ರಘುಪತಿ ಭಟ್, ಕೆ ಎಸ್ ಹೆಗ್ಡೆ ಇನ್ಸಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ನಿಟ್ಟೆ ಇದರ ಡೈರೆಕ್ಟರ್ ಡಾ. ಶಂಕರ್ , ಕೇರಳ ಸಮಾಜಂ ಅಧ್ಯಕ್ಷ ಟಿ ಕೆ ರಾಜನ್ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಬ್ರಹ್ಮಾವರದ ಕ್ಲಾಸ್ ಲ್ಯಾಂಡ್ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ. ಸಾಮ್ಯುಲ್ ಕೆ ಸಾಮ್ಯೂಲ್ , ಸಮಾಜ ಸೇವಕ ಹರೇಕಳ ಹಾಜಬ್ಬ , ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಹಾಗೂ ವಿಶ್ವ ಗಿನ್ನೆಸ್ ದಾಖಲೆಗಾರ್ತಿ, ಯೋಗಾಸನದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾದ ಕುಮಾರಿ ತನುಶ್ರೀ ಯವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮಾತ್ರವಲ್ಲದೆ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ ಅತ್ಯಧಿಕ ಅಂಕಗಳಸಿ ಉತ್ತೀರ್ಣರಾಗಿರುವ ಸಂಘದ ಸದಸ್ಯರುಗಳ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷಲಯನ್ ಸುಗುಣ ಕುಮಾರ್, ಕಾರ್ಯದರ್ಶಿ ಬಿನೇಶ್ ವಿ ಸಿ ಉಪಾಧ್ಯಕ್ಷ ಗಣೇಶ್ ಸಾಮಾಜಿಕ ಸಂಯೋಜಕ ಥಾಮಸ್ ಮತ್ತಿತರರು ಉಪಸ್ಥಿತರಿದ್ದರು.












