ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ವತಿಯಿಂದ ಎಂಜಿನಿಯರ್ಸ್ ದಿನಾಚರಣೆ

ಉಡುಪಿ: ಸರ್ ಎಂ.ವಿಶ್ವೇಶ್ವರಯ್ಯನವರು ಒಂದು ಶಕ್ತಿಯಾಗಿ ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ಪ್ರಸ್ತುತ ಯುವ ಎಂಜಿನಿಯರ್‌ಗಳು ವಿಶ್ವೇಶ್ವರಯ್ಯಅವರನ್ನು ಆದರ್ಶವಾಗಿಟ್ಟುಕೊಂಡು ಪ್ರಾಮಾಣಿಕತೆ, ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮಾಂಡವಿ ಬಿಲ್ಡರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಡಾ ಜೆರ್ರಿ ವಿನ್ಸೆಂಟ್ ಡಯಾಸ್ ಹೇಳಿದರು. ಅವರು ಗುರುವಾರ ಅಸೋಸಿಯೇಶನ್ ಆಫ್ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಉಡುಪಿವತಿಯಿಂದ ಮಾಂಡವಿ ಟ್ರೇಡ್ ಸೆಂಟರ್‌ನಲ್ಲಿ ನಡೆದ ಎಂಜಿನಿಯರ್ಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಒಂದು ನಗರವನ್ನು ವ್ಯವಸ್ಥಿತ ರೀತಿಯಲ್ಲಿ ರೂಪಿಸಲು ನಿರ್ಮಾಣ ಕ್ಷೇತ್ರದ ಪಾತ್ರ ಬಹಳ ಮುಖ್ಯ. […]

ಕುಂದಾಪುರ: ಬಿಜೆಪಿ ಸೇವಾ ಪಾಕ್ಷಿಕದ ಅಂಗವಾಗಿ ಹಲವಾರು ಕಾರ್ಯಕ್ರಮ

ಕುಂದಾಪುರ: ಬಿಜೆಪಿ ಕುಂದಾಪುರ ಮಂಡಲದ ವತಿಯಿಂದ ಪ್ರಧಾನಿ ಮೋದಿ ಜನ್ಮದಿನದಿಂದ ಮಹಾತ್ಮಾ ಗಾಂಧಿಯವರ ಜನ್ಮದಿನದವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸೆ.17ರಂದು ರೆಡ್ ಕ್ರಾಸ್ ಸಹಕಾರದಲ್ಲಿ ರಕ್ತದಾನ ಶಿಬಿರ, ಸೆ.20ರಂದು ಮಹಿಳಾ ಮೋರ್ಚಾ ವತಿಯಿಂದ ಅಂಗನವಾಡಿ ದತ್ತು ಸ್ವೀಕಾರ ಕಾರ್ಯಕ್ರಮ, ಸೆ.22ರಂದು ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಚಿಕನ್ ಸಾಲ್ ಸ.ಪ್ರಾ.ಶಾಲಾ ವಠಾರದಲ್ಲಿ ಅರಳಿ ಗಿಡ ನೆಡುವ ಕಾರ್ಯಕ್ರಮ, ಸೆ.24ರಂದು ಕೋಟೇಶ್ವರ ಕೋಟಿಲಿಂಗೇಶ್ವರ ಕೆರೆ ಸ್ವಚ್ಛತಾ ಕಾರ್ಯಕ್ರಮ, ಸೆ.25ರಂದು ಎಸ್.ಟಿ ಮೋರ್ಚಾ ಹಾಗೂ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಕುಂದಾಪುರ […]

ಕಟಪಾಡಿ: ಬಸ್ ಅಪಘಾತ; ಸೈಕಲ್ ಚಲಾಯಿಸುತ್ತಿದ ಬಾಲಕನಿಗೆ ಏಟು

ಕಟಪಾಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ವೇಗದೂತ ಬಸ್ ಒಂದು ಸೈಕಲ್ ಚಲಾಯಿಸಿಕೊಂಡು ಬರುತ್ತಿದ್ದ 7 ನೇ ತರಗತಿ ಬಾಲಕನಿಗೆ ಗುದ್ದಿದ್ದು, ಬಾಲಕನ ತಲೆ ಬಸ್ಸಿನ ಮುಂದಿನ ಕಿಟಿಕಿಯ ಗಾಜಿಗೆ ಹೊಡೆದಿದೆ. ಘಟನೆಯಿಂದ ಬಾಲಕನ ತಲೆಗೆ ಪೆಟ್ಟಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

ಸೆ 18 ರಂದು ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಓಣಂ ಆಚರಣೆ

ಉಡುಪಿ: ಕೇರಳ ಕಲ್ಚರಲ್ ಆಂಡ್ ಸೋಶಿಯಲ್ ಸೆಂಟರ್ ಉಡುಪಿ ಇದರ 29ನೇ ವಾರ್ಷಿಕೊತ್ಸವ ಮತ್ತು ಓಣಂ ಹಬ್ಬ ಆಚರಣೆಯು ಸೆಪ್ಟೆಂಬರ್ 18 ಭಾನುವಾರದಂದು ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ ಎಂದು ಓಣಂ ಹಬ್ಬ ಆಚರಣೆಯ ಕಮಿಟಿ ಅಧ್ಯಕ್ಷ ಟಿ ಎ ರವಿರಾಜನ್ ಹೇಳಿದರು. ಕೇರಳ ಕಲ್ಚರಲ್ ಆಂಡ್ ಸೋಶಿಯಲ್ ಸೆಂಟರ್ ಉಡುಪಿ ಇದರ 29ನೇ ವಾರ್ಷಿಕೊತ್ಸವ ಮತ್ತು ಓಣಂ ಹಬ್ಬ ಆಚರಣೆಯು ಸೆಪ್ಟೆಂಬರ್ 18 ಭಾನುವಾರದಂದು ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ ಕಾರ್ಯಕ್ರಮದ ಮೊದಲು ಈ ಸಾಲಿನ […]

ಯುನೆಸ್ಕೋ ಶಾಂತಿ ಪೀಠದ ಮುಖ್ಯಸ್ಥ ಪ್ರೊ.ಎಂ.ಡಿ.ನಲಪತ್ ಜೊತೆ ಸಂವಾದ ಕಾರ್ಯಕ್ರಮ

ಮಣಿಪಾಲ: ನಾವು ಜೀವಿಸುತ್ತಿರುವ ನೈಜ ಪ್ರಪಂಚ ನೈತಿಕ ಮತ್ತು ಆದರ್ಶದ ಜಗತ್ತಲ್ಲ, ಆದರೆ ಶಾಂತಿಪ್ರಿಯ ನಾಗರಿಕರಾದ ನಾವು ಶಾಂತಿ ಸ್ಥಾಪನೆಗಾಗಿ ಸಾಮೂಹಿಕ ಪ್ರಯತ್ನ ಮಾಡಲೇಬೇಕು ಎಂದು ಯುನೆಸ್ಕೋ ಶಾಂತಿ ಪೀಠದ ಮುಖ್ಯಸ್ಥ ಪ್ರೊ.ಎಂ.ಡಿ.ನಲಪತ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸಂಪನ್ಮೂಲಗಳ ಮೇಲಿನ ಪ್ರಾಬಲ್ಯ ಮತ್ತು ನಿಯಂತ್ರಣ ಸಾಧಿಸುವ ಪ್ರಯತ್ನಗಳೇ ಈ ಹಿಂದೆ ಯುದ್ಧಗಳಿಗೆ ಕಾರಣವಾಗಿದೆ ಮತ್ತು ನೈಜ ಜಗತ್ತು ನೈತಿಕ ಜಗತ್ತಲ್ಲ ಆದರೆ ನಾವು […]