ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ) : ವಾರ್ಷಿಕ ಮಹಾಸಭೆ

ಉಡುಪಿ : ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ) ,2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 19-09-2026 ರಂದು ಶ್ರೀಮತಿ. ಸುಮಿತ್ರ .ಆರ್ ಇವರ ಸಭಾಧ್ಯಕ್ಷತೆಯಲ್ಲಿ ಪುರಭವನದ ಮಿನಿಹಾಲ್ ನಲ್ಲಿ ಜರಗಿತು.
2025-26ನೇ ಸಾಲಿನಲ್ಲಿ ಸಂಘವು 125 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ವರದಿ ವರ್ಷಾಂತ್ಯಕ್ಕೆ 56 ಲಕ್ಷ ಪಾಲು ಬಂಡವಾಳ, ೩೪ ಕೋಟಿ 79ಲಕ್ಷ ಠೇವಣಿಯೊಂದಿಗೆ 26 ಕೋಟಿ 88ಲಕ್ಷ ಹೊರಬಾಕಿ ಸಾಲ ಇರುತ್ತದೆ. ವರ್ಷಾಂತ್ಯಕ್ಕೆ 48,39,072.೦8 ಲಾಭ ಹೊಂದಿದ್ದು, ಸದಸ್ಯರಿಗೆ 13% ಪಾಲು ಮುನಾಫೆ ಘೋಷಣೆ ಮಾಡಲಾಯಿತು.
ಪ್ರತಿ ವರ್ಷದಂತೆ ಸದಸ್ಯರ ಮಕ್ಕಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿ ಯು ಸಿ.ಯಲ್ಲಿ ಉತ್ತಮ ಅಂಕ ಪಡೆದ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಹಾಗೂ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಾಗೂ ಪ್ರೌಢಶಾಲಾ ವಿಭಾಗದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಗೀತ, ಚಿತ್ರ ಕಲಾವಿದ ಹಾಗೂ ರಕ್ತದಾನಿ ಶ್ರೀ ಅರುಣ್ ಕುಂದರ್ ಹಾಗೂ ವಿಶೇಷ ಚೇತನ ಮಕ್ಕಳ ವಿಕಸನದ ಶಕ್ತಿ ಶ್ರೀಮತಿ ದಿಲ್ದಾರ್ ಫಝ್ಲರ್ ರಹಿಮಾನ್‌ರವರಿಗೆ ಸನ್ಮಾನಿಸಲಾಯಿತು. ಸಂಘದ ಹಿರಿಯ ಸಹಕಾರಿ ಸದ್ಯಸ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು. ನೂರ್–ಉಲ್-ಫುರ್ ಖಾನ್ ವಿಶೇಷ ಶಾಲೆಗೆ ಗ್ರೆöಡರ್ ಹಾಗೂ ಕುಕ್ಕರ್ ಕೊಡುಗೆಯಾಗಿ ನೀಡಲಾಯಿತು. ಹಾಗೂ ಇಬ್ಬರು ಫಲಾನುಭವಿಗಳಿಗೆ ವೈದಕೀಯ ನೆರವು ನೀಡಲಾಯಿತು.
ಸಂಘದ ನಿರ್ದೇಶಕರಾದ ಶ್ರೀ.ಮೋಹನ್ ದೇವಾಡಿಗ, ಶ್ರೀ ಮೊಹಮ್ಮದ್ ಸದಾಖತ್, ಶ್ರೀಮತಿ ಗೀತಾ ನಾಗೇಶ್, ಶ್ರೀ. ಸ್ಟೀಫನ್ ಫೆರ್ನಾಂಡೀಸ್, ಶ್ರೀ. ಎಸ್ ವಸಂತ್ ಕುಮಾರ್. ಶ್ರೀ. ಜಾಯ್ ಜಾಕೋಬ್ ಶ್ರೀ ಪ್ರಭಾಕರ್ ಕೆ ಪೂಜಾರಿ, ಶ್ರೀ ದಯಾನಂದ ಡಿ.ಹಾಗೂ ಶ್ರೀ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕರಾದ ಶ್ರೀ.ಗಣೇಶ್ ಶೇರಿಗಾರ್ ವರದಿ ವಾಚಿಸಿ ಶ್ರೀಮತಿ ಮಲ್ಲಿಕಾ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕರಾದ ಶ್ರೀ. ಆಶ್ವಿನ್ ಕೆ.ವಿ ವಂದಿಸಿದರು.