ಉಡುಪಿ: ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ ‘ದಿ ಟ್ರೆಂಡ್ ಫೆಸ್ಟ್ – ದಿ ಕಾನ್ಸಿಯಸ್ ಕ್ಲೋಸೆಟ್’

ಉಡುಪಿ: ಪೋದಾರ್ ಅಂತರಾಷ್ಟ್ರೀಯ ಶಾಲೆ, ಉಡುಪಿಯಲ್ಲಿ ‘ದ ಕಾನ್ಸಿಯಸ್ ಕ್ಲೋಸೆಟ್’ (ILP – The Conscious Closet) ಪರಿಕಲ್ಪನೆಯಡಿ ಸುಸ್ಥಿರ ಫ್ಯಾಷನ್ ಪ್ರದರ್ಶನ ನಡೆಯಿತು. ಸುಸ್ಥಿರತೆ, ಮರುಬಳಕೆ, ಸೃಜನಶೀಲತೆ ಹಾಗೂ ಜವಾಬ್ದಾರಿಯುತ ಬಳಕೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾದ ಕದಿಕೆ ಟ್ರಸ್ಟ್ ಉಡುಪಿಯ ಅಧ್ಯಕ್ಷೆ ಶ್ರೀಮತಿ ಮಮತಾ ರೈ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜವಳಿ ತ್ಯಾಜ್ಯ ಹಾಗೂ ಸಿಂಥೆಟಿಕ್ ನೂಲುಗಳಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳ […]

ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಉಡುಪಿ: ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಸಾಮಾನ್ಯ ಸಭೆಯು ಸೆ.22ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಪೆರ್ಡೂರಿನ ಬಂಟರ ಸಮುದಾಯ ಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷರಾದ ಶಾಂತಾರಾಮ ಸೂಡ ಕೆ. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘದ ನಿರ್ದೇಶಕರಾದ ರಾಜ್ ಕುಮಾರ್ ಶೆಟ್ಟಿಯವರು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧೀರಜ್ ಶೆಟ್ಟಿ ಅವರು ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಶಾಂತಾರಾಮ ಸೂಡ […]

ಬ್ಯೂಟಿ & ವೆಲ್‌ನೆಸ್ ಕ್ಷೇತ್ರದಲ್ಲಿ ಬದುಕು ರೂಪಿಸಿಕೊಳ್ಳಲು ಇಲ್ಲಿದೆ ಚಾನ್ಸ್! ಮಣಿಪಾಲ MSDC- Orane International ವತಿಯಿಂದ ಲಭ್ಯವಿದೆ ಈ ಕೋರ್ಸ್ ಗಳು!

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ (MSDC) ಹಾಗೂ Orane International ವತಿಯಿಂದ ಬ್ಯೂಟಿ ಮತ್ತು ವೆಲ್‌ನೆಸ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಆಸಕ್ತರಿಗೆ ವಿವಿಧ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಡಿಪ್ಲೊಮಾ ಇನ್ ನೇಲ್ ಟೆಕ್ನಿಷಿಯನ್ ಕಾರ್ಯಕ್ರಮಕ್ಕೆ ದಾಖಲಾತಿ ನಡೆಯುತ್ತಿದ್ದು, ಇದರೊಂದಿಗೆ ಮ್ಯಾನಿಕ್ಯೂರ್ ಮತ್ತು ಪೆಡಿಕ್ಯೂರ್‌ನಲ್ಲಿ ಉಚಿತ ಪ್ರಮಾಣಪತ್ರ ಕೋರ್ಸ್ ಪಡೆಯುವ ಅವಕಾಶವಿದೆ. ಇದರ ಜೊತೆಗೆ ಕಾಸ್ಮೆಟಾಲಜಿ ಕೋರ್ಸ್‌ಗಳ ಶುಲ್ಕದಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಆಫರ್ ಸೆಪ್ಟೆಂಬರ್ 30ರವರೆಗೆ ಅನ್ವಯವಾಗಲಿದೆ. ಆಸಕ್ತರು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಾಕ್‌ಇನ್ […]

ರಾಜ್ಯದಲ್ಲಿ ಅಕ್ಕಿ ದರ ಮತ್ತೆ ಏರಿಕೆ: ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ

ಬೆಂಗಳೂರು: ಕರ್ನಾಟಕದಲ್ಲಿ ಅಕ್ಕಿ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಒಂದೇ ತಿಂಗಳಲ್ಲಿ ಸತತ ಎರಡನೇ ಬಾರಿ ಅಕ್ಕಿ ದರ ಹೆಚ್ಚಳವಾಗಿದ್ದು, ಕಳೆದ ಒಂದು ವಾರದಿಂದ ಬಹುತೇಕ ಎಲ್ಲಾ ವಿಧದ ಅಕ್ಕಿಯ ಬೆಲೆ ಏರಿಕೆಯಾಗುತ್ತಿದೆ. ಕೋಲಂ ಅಕ್ಕಿಯ ದರ ಕೆ.ಜಿಗೆ ₹75ರಿಂದ ₹100ಕ್ಕೆ ಏರಿಕೆಯಾಗಿದೆ. ಕೆಲವು ಅಕ್ಕಿ ತಳಿಗಳ ದರದಲ್ಲಿ ನಾಲ್ಕು ದಿನಗಳ ಅವಧಿಯಲ್ಲೇ ಕೆ.ಜಿಗೆ ಸುಮಾರು ₹20ರಷ್ಟು ಹೆಚ್ಚಳವಾಗಿದೆ. ಈ ದರ ಏರಿಕೆಗೆ ಸೂಕ್ತ ಇಳುವರಿ ಲಭ್ಯವಾಗದಿರುವುದು ಪ್ರಮುಖ ಕಾರಣ ಎಂದು […]

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ: ಪತ್ನಿ, ಪುತ್ರ ನಾಪತ್ತೆ; ತಡವಾಗಿ ಬೆಳಕಿಗೆ ಬಂದ ಪ್ರಕರಣ

ಉಡುಪಿ: ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ಶಾರ್ಜಾದಲ್ಲಿ ಅಮಾನವೀಯವಾಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಮೂಲದ ಪ್ರಕಾಶ್ ಕುಂದರ್ ಹತ್ಯೆಯಾದ ವ್ಯಕ್ತಿಯಾಗಿದ್ದು, ಕಳೆದ ಜುಲೈ ತಿಂಗಳಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.ಪ್ರಕಾಶ್ ಅವರು ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರನೊಂದಿಗೆ ಶಾರ್ಜಾದಲ್ಲಿ ನೆಲೆಸಿದ್ದರು. ಶಾರ್ಜಾ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು, ಜುಲೈ 20ರ ಸುಮಾರಿಗೆ ಸಹೋದರ ಪ್ರಶಾಂತ್ ಕುಂದರ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದರು. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಪ್ರಕಾಶ್, ಈ ಬಾರಿ […]