ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ: ರೋಟರಿ ನಿಟ್ಟೆಯ ಪದಪ್ರದಾನ ಸಮಾರಂಭ

ನಿಟ್ಟೆ: ಕೋವಿಡ್-೧೯ ಎಂಬ ರೋಗ ಜಗತ್ತಿನಾದ್ಯಂತ ವ್ಯಾಪಿಸಿದ್ದು ಇದರಿಂದ ಬಹುತೇಕ ಎಲ್ಲರ ಜೀವನವೂ ಒಂದಲ್ಲಾ ಒಂದು ತೊಂದರೆಯನ್ನು ಅನುಭವಿಸಿಯೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಂಘಸಂಸ್ಥೆಗಳು ಅಗತ್ಯತೆಯನ್ನು ಪರಿಶೀಲಿಸಿ ಪರಿಹಾರ ಕಾರ್ಯವನ್ನು ನಡೆಸಬೇಕು’ ಎಂದು ರೋ. ಪಿ.ಎಚ್.ಎಫ್ ಅಲೆನ್ ವಿನಿಯ್ ಲೆವಿಸ್ ಅಭಿಪ್ರಾಯಪಟ್ಟರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಸಂಭ್ರಮ ಸಭಾಂಗಣದಲ್ಲಿ ಜೂನ್ ೨೫ ರಂದು ನಡೆದ ರೋಟರಿ ನಿಟ್ಟೆ ೨೦೨೦-೨೧ ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಪದಪ್ರದಾನಾಧಿಕಾರಿಯಾಗಿ ಪಾಲ್ಗೊಂಡು ನೂತನ ಅಧ್ಯಕ್ಷ ಸುರೇಶ್ ಶೆಟ್ಟಿ, ನೂತನ ಕಾರ್ಯದರ್ಶಿ ಅಲೆನ್ ರೋಶನ್ ಡಿಮೆಲ್ಲೋ ಮತ್ತು ತಂಡಕ್ಕೆ ಪದಪ್ರದಾನಗೊಳಿಸಿ ಅವರು ಮಾತನಾಡಿದರು.

ವಲಯ ೫ ರ ಸಹಾಯಕ ಗವರ್ನರ್ ರೋ.ಪಿಎಚ್‌ಎಫ್ ನವೀನ್ ಅಮೀನ್ ರೋಟರಿ ನಿಟ್ಟೆಯ ವಿಶೇಷ ಸಂಚಿಕೆ ‘ನಿರೂಪ’ವನ್ನು ಬಿಡುಗಡೆಗೊಳಿಸಿದರು. ವಲಯ ಸೇನಾನಿ ರೊ.ಡಾ.ಮಹದೇವೇ ಗೌಡ ಅವರು ನೂತನ ಪದಾಧಿಕಾರಿಗಳನ್ನು ಗೌರವಿಸಿದರು.

ಇದೇ ಸಂದರ್ಭದಲ್ಲಿ ಕೋವಿಡ್-19 ನ್ನು ಸಮರ್ಥವಾಗಿ ಎದುರಿಸಲು ಸಹಕರಿಸಿದ ಕೊರೋನಾ ವಾರಿಯರ್ಸ್‌ಗಳಾದ 9 ಮಂದಿ ನಿಟ್ಟೆ ಗ್ರಾಮದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಪುಸ್ತಕ ವಿತರಣಾ ಯೋಜನೆಗೆ ಚಾಲನೆನೀಡಲಾಯಿತು. ಉಚಿತ ಮಾಸ್ಕ್ ನೀಡಿದ ರೋ.ಯೋಗೀಶ್ ಹೆಗ್ಡೆ, ತಯಾರಿಕೆಗೆ ಸಹಕರಿಸಿದ ಪಾಲಿಟೆಕ್ನಿಕ್ ಕಾಲೇಜಿನ ಧನಲಕ್ಷ್ಮೀ ಹಾಗೂ ದುರ್ಗಾ ಟೈಲರ್‍ಸ್‌ನ ಪ್ರಭಾಕರ್ ಇವರನ್ನು ಸನ್ಮಾನಿಸಲಾಯಿತು.
ಕಳೆದ ಸಾಲಿನಲ್ಲಿ ಪಿ.ಎಚ್.ಡಿ ಪದವಿ ಪಡೆದ ರೋ.ಡಾ.ರೋಶನ್ ಫೆರ್ನಾಂಡಿಸ್, ರೋ.ಡಾ.ರಾಘವೇಂದ್ರ ಬಯರಿ, ಕೋವಿಡ್ ಸಂದರ್ಭದಲ್ಲಿ ಮಾಹಿತಿ ನೀಡುವ ವೆಬ್‌ಸೈಟ್ ಮಾಡಿದ ನಿಟ್ಟೆ ಕಾಲೇಜಿನ ಹಳೆವಿದ್ಯಾರ್ಥಿ ಆದಿತ್ಯ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸೇವಾಸಕ್ತ ಮತ್ತು ಸಮಾನಮನಸ್ಕತೆಯೊಂದಿಗೆ ರೋಟರಿ ಕ್ಲಬ್ ನಿಟ್ಟೆಗೆ ಸೇರ್ಪಡೆಗೊಂಡ ರೋ.ಶಿಲ್ಪಾ ಎಮ್.ಕೆ ಹಾಗೂ ರೋ. ಜಾಕಿಮ್ ಮೈಕಲ್ ಮೆನಸಿಸ್ ಅವರಿಗೆ ಪ್ರಮಾಣ ವಚನ ಬೋಧಿಸಲಾಯಿತು.

ರೋಟರಿ ಕ್ಲಬ್ ನಿಟ್ಟೆಯ ನಿರ್ಗಮನ ಅಧ್ಯಕ್ಷೆ ರೋ.ಪಿ.ಎಚ್.ಎಫ್. ಡಾ.ವೀಣಾದೇವಿ ಶಾಸ್ತ್ರೀಮಠ್ ಸ್ವಾಗತಿಸಿದರು. ಕಾರ್ಯದರ್ಶಿ ರೋ.ಅಲೆನ್ ರೋಶನ್ ಡಿಮೆಲ್ಲೋ ಕ್ಲಬ್‌ನ ವಾರ್ಷಿಕ ವರದಿ ವಾಚಿಸಿದರು. ಡಾ.ಎನ್.ಎಸ್.ಎ.ಎಂ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರೋ.ಅರವಿಂದ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.