ನಿಟ್ಟೆ: ಜೂ. 21 ರಿಂದ 26 ರವರೆಗೆ ಚಿತ್ರದುರ್ಗದ ಎಸ್.ಜೆ.ಎಂ ತಾಂತ್ರಿಕ ಕಾಲೇಜಿನಲ್ಲಿ ನಡೆದ ವಿ.ಟಿ.ಯು ಮಟ್ಟದ ಚೆಸ್ ಚ್ಯಾಂಪಿಯನ್ಶಿಪ್ ನಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಲ್ಕು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಿಟ್ಟೆ ಕಾಲೇಜಿನ ಮಹಿಳಾ ಚೆಸ್ ತಂಡವು ರೆಸ್ಟ್ ಆಫ್ ಬೆಂಗಳೂರು ಝೋನ್ ವಿಭಾಗದಲ್ಲಿ ಪ್ರಥಮ ಸ್ಥಾನ, ಇಂಟರ್ ಝೋನ್ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಪುರುಷ ತಂಡವು ರೆಸ್ಟ್ ಆಫ್ ಬೆಂಗಳೂರು ಝೋನ್ ಮತ್ತು ಇಂಟರ್ ಝೋನ್ ವಿಭಾಗಗಳೆರಡರಲ್ಲೂ ದ್ವಿತೀಯ ಸ್ಥಾನವನ್ನು ಗಳಿಸಿದೆ.