ಉಡುಪಿ, ಜೂ.28: ಉಡುಪಿ ಜಿಲ್ಲಾ ಧ್ವನಿ ಬೆಳಕು ಸಂಯೋಜಕರ ಸಂಘಟನೆ ಬ್ರಹ್ಮಾವರ ವಲಯ ಆಶ್ರಯದಲ್ಲಿ 8ನೇ ವಾರ್ಷಿಕೋತ್ಸವ ಜುಲೈ.1ರಂದು ಬೆಳಗ್ಗೆ 9 ಗಂಟೆಗೆ ಬ್ರಹ್ಮಾವರದ ಹೋಟೆಲ್ ಆಶ್ರಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಕೆ.ಬಾಲಕೃಷ್ಣ ಪೂಜಾರಿ ಸಾಸ್ತಾನ ಜೂ.28ರಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಬೆಳಗ್ಗೆ 9 ಗಂಟೆಯಿಂದ ಸಭಾ, ಸಮ್ಮಾನ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 4ರಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ. ಸಂಘಟನೆಯ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಉನ್ನತ ಶಿಕ್ಷಣಕ್ಕಾಗಿ ಧನಸಹಾಯ, ಹಿರಿಯ ಕಾರ್ಮಿಕರಿಗೆ, ಹಿರಿಯ ಸದಸ್ಯರಿಗೆ ಸನ್ಮಾನ, ಮರಣ ಹೊಂದಿದ ಸದಸ್ಯರ ಮನೆಯವರಿಗೆ ಧನಸಹಾಯ, ಆಕಸ್ಮಿಕ ಅಪಘಾತಕ್ಕೀಡಾದ ಸದಸ್ಯರ ಮನೆಯವರಿಗೆ ಧನಸಹಾಯ ಮೊದಲಾದ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ನಮ್ಮ ಸಂಘಟನೆ 2011ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಆರಂಭದಲ್ಲಿ 300 ಮಂದಿ ಸದಸ್ಯರೊಂದಿಗೆ ಕುಂದಾಪುರ, ಉಡುಪಿ, ಕಾರ್ಕಳ, ಕಾಪು, ಬ್ರಹ್ಮಾವರ, ಬೈಂದೂರು ಎಂಬ ಆರು ವಲಯಗಳಾಗಿ ಪ್ರಾರಂಭವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ. ಸಮಸ್ಯಗೊಳಗಾದ ಸದಸ್ಯರಿಗೆ ಸಹಾಯಹಸ್ತ, ಧನಸಹಾಯ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಶಿವರಾಜ್ ಮಲ್ಲಾರ್, ಪ್ರ.ಕಾರ್ಯದರ್ಶಿ ಕೆ.ದಾಮೋದರ್ ಪ್ರಮುಖರಾದ ಚಂದ್ರಶೇಖರ ಪೂಜಾರಿ, ರಾಮಕೃಷ್ಣ ಕುಂದರ್, ಸಂತೋಷ್ ಇದ್ದರು.












