ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಕ್ಯಾಂಡಿಡೇಟ್ ಸೆಟ್ಟಿಂಗ್ ಕಾರ್ಯವನ್ನು ಸಹಾಯಕ ಚುನಾವಣಾಧಿಕಾರಿಗಳು ಕುಂದಾಪುರ ವಿಧಾನಸಭಾ ಕ್ಷೇತ್ರ ಇವರ ಮಾರ್ಗದರ್ಶನದಲ್ಲಿ ಬುಧವಾರ ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ ವಿವಿಧ ರಾಜಕೀಯ ಪಕ್ಷಗಳ ಏಜೆಂಟ್ ಸಮ್ಮುಖದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಅಗತ್ಯವಿರುವ 222 ಮತಗಟ್ಟೆಗಳಿಗೆ ಹಾಗೂ ಹೆಚ್ಚುವರಿಯಾಗಿ ಇವಿಎಂ ಮತಯಂತ್ರಗಳಿಗೆ ಕ್ಯಾಂಡಿಡೇಟ್ ಸೆಟ್ಟಿಂಗ್ ಬಗ್ಗೆ 26 ಸೆಕ್ಟರ್ ಅಧಿಕಾರಿಗಳು / ಮೇಲ್ವಿಚಾರಕರ ನೇತೃತ್ವದಲ್ಲಿ 26 ಟೇಬಲ್‍ಗಳಲ್ಲಿ ತಲಾ 10 ಸುತ್ತುಗಳಲ್ಲಿ ಒಟ್ಟು 270 ಮತಯಂತ್ರಗಳಿಗೆ ಕ್ಯಾಂಡಿಡೇಟ್ ಸೆಟ್ಟಿಂಗ್ ಕಾರ್ಯ ನಡೆಸಿ ಹಾಗೂ 15 ಮತಯಂತ್ರಗಳಲ್ಲಿ (ಒಟ್ಟು ಮತಯಂತ್ರದ ಶೇಕಡಾ 5 ರಷ್ಟು ಮತಯಂತ್ರ) 1000 ಅಣಕು ಮತದಾನ ನಡೆಸಿ ತದನಂತರ ಬಿಗು ಅರಕ್ಷಕರ ಬಂದೋಬಸ್ತಿನೊಂದಿಗೆ ಭದ್ರತಾ ಕೊಠಡಿಯಲ್ಲಿ ದಾಸ್ತಾನು ಇರಿಸಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ತಹಶೀಲ್ದಾರರು ಹಾಗೂ ಬ್ರಹ್ಮಾವರ ತಹಶೀಲ್ದಾರರು ಉಪಸ್ಥಿತರಿದ್ದರು.