ಕಾರ್ಕಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಆದ್ಯಾತ್ಮಿಕ ಕಾರ್ಯಕ್ರಮವು ಆನೆಕೆರೆಯ ಸದ್ಯೋಜಾತ ಉದ್ಯಾನವನದಲ್ಲಿಜರಗಿತು.
ಪರಮಾತ್ಮನ ಅವತರಣೆಯೆ ಸತ್ಯ ಶಿವರಾತ್ರಿ ಎಂದು ಕಾರ್ಕಳ ಸೇವಾ ಕೇಂದ್ರದ ಸಂಚಾಲಕಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾರ್ಕಳದ ಶ್ರೀ ಸಾಯಿ ಡಿಗ್ರಿ ಕಾಲೇಜಿನ ಸಂಸ್ಥಾಪಕರು, ಉದ್ಯಮಿ ಚಂದ್ರಹಾಸ ಸುವರ್ಣ, ಸತತ ಪರಿಶ್ರಮದಿಂದ ಹಾಗೂ ದೇವರ ಅನುಗ್ರಹದಿಂದ ಜೀವನದಲ್ಲಿ ಪ್ರಗತಿಯನ್ನು ಹೊಂದಬಹುದು ಎಂದು ತಿಳಿಸಿದರು.
ಕಾರ್ಕಳ ಜೇಸಿಐ ಇದರ ಅಧ್ಯಕ್ಷರಾದ ದಿವಾಕರ್ ಎಂ. ಬಂಗೇರ ಹಬ್ಬ ಹರಿದಿನಗಳ ಆಚರಣೆಯಿಂದ ಸನಾತನ ಸಂಸ್ಕೃತಿಯ ಅರಿವು ಮೂಡುತ್ತದೆ. ಈ ನಿಟ್ಟಿನಲ್ಲಿ ಈಶ್ವರೀಯ ವಿದ್ಯಾಲಯದ ಕಾರ್ಯವನ್ನು ಶ್ಲಾಘಿಸಿದರು. ದ.ಕ ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಶನ್ ಕಾರ್ಕಳ ವಲಯ ಅಧ್ಯಕ್ಷ ಭಾಸ್ಕರ್ ಕುಲಾಲ್ ಶುಭ ಹಾರೈಸಿದರು. ಕಾಳಿಕಾಂಬಾ ಜ್ಯೋತಿ ಯುವಕ ಮಂಡಲದ ಅಧ್ಯಕ್ಷ ನಾಗೇಶ್ ಹೆಗ್ಗಡೆ ಶುಭ ಹಾರೈಸಿದರು. ಭಾರತೀಯ ಸ್ಟೇಟ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಆರ್. ರಮೇಶ್ ಪ್ರಭು ಮಾತನಾಡಿದರು. ಬಿ. ಕೆ. ಹೇಮಲತಾ ಸಂಸ್ಥೆಯ ಪರಿಚಯ ನೀಡಿದರು. ಬಿ. ಕೆ. ಶಶಿಕಲಾ, ಬಿ.ಕೆ. ಇಂದಿರಾ ಸ್ವಾಗತಿಸಿದರು. ಬಿ.ಕೆ. ವರದರಾಯ ಪ್ರಭು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಭಕ್ತಿಗೀತೆ ಸ್ಫರ್ಧೆ ನಡೆಸಿ ಬಹುಮಾನ ನೀಡಲಾಯಿತು ಶ್ರೀ ನೃತ್ಯಾಲಯದ ಸುಬ್ರಹ್ಮಣ್ಯ ನಾವುಡ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.