ಉಡುಪಿ: ರಾಜೀವನಗರ ಕ್ರಿಕೆಟರ್ಸ್, ರಾಜೀವನಗರ–ಮಣಿಪಾಲ ಇವರ ಆಶ್ರಯದಲ್ಲಿ ಅಂಗವಿಕಲ ಮತ್ತು ಬಡಜನರ ಸಹಾಯಾರ್ಥವಾಗಿ ರಾಜೀವನಗರದ ಆರ್‌ಸಿ ಮೈದಾನದಲ್ಲಿ ಆಯೋಜಿಸಿದ್ದ ಎಂಟನೇ ವರ್ಷದ ‘ಆರ್‌ಸಿ ಟ್ರೋಫಿ-–2019’ ಕ್ರಿಕೆಟ್ ಟೂರ್ನಿಯಲ್ಲಿ ಪ್ರಕೃತಿ ವೀರಕೇಸರಿ ತಂಡ 44,444 ನಗದು ಪುರಸ್ಕಾರದೊಂದಿಗೆ ಆರ್‌ಸಿ ಟ್ರೋಫಿಯನ್ನು ಗೆದ್ದುಗೊಂಡಿತು. ಉದ್ಯಾವರದ ಶ್ರೀಗುರುಬ್ರಹ್ಮ ತಂಡ 22,222 ನಗದು ಪುರಸ್ಕಾರದೊಂದಿಗೆ ರನ್ನರ್‌ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಪ್ರಕೃತಿ ವೀರಕೇಸರಿ ತಂಡದ ಸಚಿನ್ ಕೋಟೇಶ್ವರ ಪಂದ್ಯ ಶ್ರೇಷ್ಠ ಹಾಗೂ ಅದೇ ತಂಡದ ಪ್ರದೀಪ್ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿ
ಪಡೆದುಕೊಂಡರು. ಶ್ರೀಗುರುಬ್ರಹ್ಮ ತಂಡದ ನಿತಿನ್ ಹೆಗ್ಡೆ ಉತ್ತಮ ದಾಂಡಿಗ ಪ್ರಶಸ್ತಿ
ಹಾಗೂ ವೀರಕೇಸರಿ ತಂಡದ ದೀಪಕ್ ಅಲೆವೂರು ಉತ್ತಮ ಎಸೆತಗಾರ ಪ್ರಸಸ್ತಿಯನ್ನು
ಗೆದ್ದುಕೊಂಡರು.
ಈ ಸಂದರ್ಭದಲ್ಲಿ ಆರ್‌ಸಿ ತಂಡದ ವತಿಯಿಂದ 7 ಮಂದಿ ಅಂಗವಿಕಲ ಹಾಗೂ ಅನಾರೋಗ್ಯ ಪೀಡಿತ ಬಡರೋಗಿಗಳಿಗೆ ಧನಸಹಾಯ ವಿತರಿಸಲಾಯಿತು. ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಗೆ ಆರ್‌ಸಿ ತಂಡ ಸಂಚಾಲಕ
ಸುನಿಲ್ ಶೇರಿಗಾರ್ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಮತ್ಸ್ಯೋದ್ಯಮಿ ಶಶಿ
ಮಲ್ಪೆ, ಉದ್ಯಮಿಗಳಾದ ದಿನೇಶ್ ಶಾನುಭಾಗ್, ದಿನೇಶ್ ಶೆಟ್ಟಿ ರಾಂಪುರ,
ವಿಜಯಕುಮಾರ್, ಮಲ್ಲೇಶ್, ಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆರ್‌ಸಿ ತಂಡದ ಮುಖ್ಯಸ್ಥ ನಾಗರಾಜ ಶೇರಿಗಾರ್, ಸದಸ್ಯರಾದ ಸುಧೀರ್, ಶಿವಪ್ರಸಾದ್,
ಧನಂಜಯ, ಕಲ್ಫಾನ್, ಸುಧೀರ್ ಶೇರಿಗಾರ್, ಸುಕೇತ್, ಸಂದೀಪ್, ಗಣೇಶ್ ನಾಯ್ಕ್,
ಕಾರ್ತಿಕ್, ಧೀರಾಜ್, ಸುಧೀರ್ ನಾಯಕ್, ಗಣೇಶ್ ಆಚಾರ್ಯ, ಉಮೇಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ReplyForward
|