ಹೊಸ ವರ್ಷದ ಸಂಭ್ರಮ : ಚಾಲಕ ಮತ್ತು ನಿರ್ವಾಹಕರಿಗೆ ಸಿಹಿಸುದ್ದಿ ಕೊಟ್ಟ ಬಿಎಂಟಿಸಿ

ಬೆಂಗಳೂರು ಹೊಸ ವರುಷದ ಆಚರಣೆ ಹಾಗೂ 25ನೇ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ತನ್ನ ಚಾಲಕ ಮತ್ತು ನಿರ್ವಾಹಕರಿಗೆ ಸಿಹಿಸುದ್ದಿ ನೀಡಿದೆ. ಹೌದು, ಬೆಂಗಳೂರು ಮಹಾನಗರ ಸಾರಿಗೆ ಬಿಎಂಟಿಸಿಯ ಚಾಲಕರ ಮತ್ತು ನಿರ್ವಾಹಕರ ಕೇಸ್​ಗಳು ಖುಲಾಸೆ ಮಾಡಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಆದೇಶ ಹೊರಡಿಸಿದ್ದು, ಇಂದಿನಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಬಿಎಂಟಿಸಿ ಬಸ್‌ ಚಾಲಕರು ಹಾಗೂ ನಿರ್ವಾಹಕರು ಚಾಲನೆ ವೇಳೆ ಮೊಬೈಲ್ ಬಳಕೆ, ಟಿಕೆಟ್ ಸರಿಯಾಗಿ ನೀಡದಿರುವುದು, ಗೈರು ಹಾಜರಿ, ಸಂಚಾರಿ ನಿಯಮ ಉಲ್ಲಂಘನೆ, ಬಸ್​ಗಳನ್ನು ಎಲ್ಲಂದರಲ್ಲಿ ನಿಲ್ಲಿಸುವುದು, ಡೋರ್ ಹಾಕದೆ ಬಸ್ ಚಾಲನೆ ಮಾಡಿದ್ದು, ಯೂನಿಫಾರಂ ಹಾಕದೆ ಡ್ಯೂಟಿ ಮಾಡಿರುವುದು ಇಂತಹ ಎಲ್ಲಾ ತಪ್ಪುಗಳಿಂದ ಶಿಕ್ಷೆಗೆ ಒಳಗಾಗಿದ್ದ ಚಾಲಕರ ಮತ್ತು ನಿರ್ವಾಹಕರ ಕೇಸ್​ಗಳನ್ನು ಬಿಎಂಟಿಸಿ ವಜಾ ಮಾಡಿದೆ. ಅಲ್ಲದೇ ಸಸ್ಪೆಂಡ್, ಡಿಸ್ಮಿಸ್ ಹಾಗೂ ಐದು ಸಾವಿರ ರುಪಾಯಿ ದಂಡ ಕಟ್ಟಬೇಕಿದ್ದ, ಇನ್ಕ್ರಿಮೆಂಟ್​ ಕಟ್ ಆಗುವ ಭಯದಲ್ಲಿದ್ದ 6960 ನೌಕರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ತಮ್ಮ ಮಾತು ಕೇಳಲಿಲ್ಲ, ಸಣ್ಣಪುಟ್ಟ ತಪ್ಪುಗಳಿಗೂ ಶಿಕ್ಷೆಗೆ ಒಳಗಾಗಿದ್ದ ಡ್ರೈವರ್ ಮತ್ತು ಕಂಡಕ್ಟರ್​ಗಳ ಕೇಸ್​ಗಳು ವಜಾ ಮಾಡಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಆದೇಶ ಹೊರಡಿಸಿದ್ದಾರೆ.