ಮಾಹೆ : ಐದು ಜನ ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ

ಮಣಿಪಾಲ : ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ , ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್, ಮತ್ತು ಡಾ. ಟಿಎಂಎ ಪೈ ಫೌಂಡೇಶನ್ ಮಣಿಪಾಲವು ಸಮಾಜಕ್ಕೆ ಕಲೆ, ಸಂಸ್ಕೃತಿ,
ವೈದ್ಯಕೀಯ ಮತ್ತು ಕೃಷಿ ಕ್ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಗಳಿಗಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಣ್ಯ ವ್ಯಕ್ತಿಗಳಿಗೆ “ಹೊಸ ವರ್ಷದ ಪ್ರಶಸ್ತಿ 2024” ನೀಡಿ ಗೌರವಿಸಿತು.

ಸಂಸ್ಕೃತಿ, ವೈದ್ಯಕೀಯ, ಕೃಷಿ, ಮತ್ತು ಸಾಹಿತ್ಯದಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ಐವರು ಸಾಧಕರಿಗೆ ಈ ವರ್ಷ ಪ್ರಶಸ್ತಿಗಳನ್ನು ನೀಡಲಾಯಿತು.

ಈ ವರ್ಷ ಪ್ರಶಸ್ತಿಗೆ ಭಾಜನರಾದವರು : ಡಾ. ಎಂ ನರೇಂದ್ರ, ನಿವೃತ್ತ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌; ಡಾ ಜಯಮಾಲಾ ರಾಮಚಂದ್ರ, ಸಿನಿಮಾ ನಟಿ ಮತ್ತು ನಿರ್ಮಾಪಕಿ ; ಡಾ.ಎಚ್.ಮಂಜುನಾಥ ಹಂದೆ, ಪ್ರಾಧ್ಯಾಪಕ ಮತ್ತು ಘಟಕ ಮುಖ್ಯಸ್ಥ ವೈದ್ಯಕೀಯ ಶಾಸ್ತ್ರ ವಿಭಾಗ, ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ ; ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಡಾ.ಎಡ್ಕತೋಡಿ ಸಂಜೀವ ರೈ ಹಾಗೂ ಕೃಷಿಕ ಬಿ.ಕೆ.ದೇವರಾವ್ .

ಪ್ರಶಸ್ತಿ ಸ್ವೀಕರಿಸಿದವರೆಲ್ಲರೂ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಡಾ ಎಚ್ ಎಸ್ ಬಲ್ಲಾಳ್ ಸ್ವಾಗತಿಸಿದರು. ಲೆಫ್ಟಿನೆಂಟ್ ಜನರಲ್ (ಡಾ) ಎಂಡಿ ವೆಂಕಟೇಶ್ ಅಭಿನಂದನಾ ಭಾಷಣ ಮಾಡಿದರು. ಯೋಜನೆ ಮತ್ತು ಮೇಲ್ವಿಚಾರಣೆಯ ನಿರ್ದೇಶಕರಾದ ಡಾ ರವಿರಾಜ್ ಎನ್ ಎಸ್ ವಂದಿಸಿದರು.