ಹಿರಿಯಡ್ಕ: ಎಂಡೋ ಸಲ್ಫಾನ್ ಪೀಡಿತರಿಗೆ ಸಮಾಜವು ಧೈರ್ಯ ಮತ್ತು ಶಕ್ತಿಯನ್ನು ತುಂಬಬೇಕು – ಸುರೇಶ್ ಶೆಟ್ಟಿ ಗುರ್ಮೆ

ಉಡುಪಿ: ಎಂಡೋ ಸಲ್ಫಾನ್ ಕುರಿತು ಮುಂದಿನ ದಿನಗಳಲ್ಲಿ ಜಾಗರುಕತೆಯಿಂದ ವರ್ತಿಸಬೇಕು. ಪೀಡಿತರಿಗೆ ಧೈರ್ಯ ಮತ್ತು ಶಕ್ತಿಯನ್ನು ತುಂಬುವಂತಹ ಕಾರ್ಯವನ್ನು ಸಮಾಜವು ಮಾಡಬೇಕಾಗಿದೆ. ಎಂಡೋ ಸಲ್ಫಾನ್ ನಂತಹ ಮಾರಕ ಕಾಯಿಲೆ ದೂರವಾದಂತೆ ಸುಸ್ತಿರ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು. ಅವರು ಇಂದು ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಸೀಸ್ ಪ್ಯಾಕೇಜಿಂಗ್ ಪಿ. ವಿ. ಟಿ ಹಿರಿಯಡ್ಕ ಮತ್ತು ಒನ್ ಗುಡ್ ಸ್ಟೆಪ್ ಸಂಸ್ಥೆಯ ವತಿಯಿಂದ ಫಿಸಿಯೋಥೆರಪಿ ಉಪಕರಣ ಹಸ್ತಾಂತರ ಕಾರ್ಯಕ್ರಮದಲ್ಲಿ […]

ಜ.22: ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಣಿಪಾಲ ಶಾಖೆ ಆರಂಭ

ಮಣಿಪಾಲ: ಕಾಲೂರ್ ಕೇರಳ ಮೂಲದ ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯೂ ಕಳೆದ 25 ವರುಷಗಳಿಂದ ಬೇರೆ ಬೇರೆ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಯನಾಸಕ್ತರಿಗೆ ವೀಸಾ ಸಂಸ್ಕರಣೆ, ದಸ್ತಾವೇಜುಗಳ ಪ್ರಕ್ರಿಯೆ ಮತ್ತು ಲೆಕ್ಕಪತ್ರಗಳ ಅಣಿಗೊಳಿಸುವಿಕೆ ಮತ್ತು ಪೂರೈಕೆ ಮುಂತಾದವುಗಳನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಒದಗಿಸುತ್ತಾ ಬಂದಿದೆ. ಸಂಸ್ಥೆಯು ಇದೀಗ ರಾಜ್ಯದ ಕರಾವಳಿ ಭಾಗದಲ್ಲಿನ ಮೊದಲ ಶಾಖೆಯನ್ನು ಕರಾವಳಿಯ ಸುಂದರ ಶೈಕ್ಷಣಿಕ ನಗರಿಯಾದ ಮಣಿಪಾಲದಲ್ಲಿ ಆರಂಭಿಸುತ್ತಿದೆ. ಇದರ ಉದ್ಘಾಟನೆಯು ಜನವರಿ 22ರಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ […]

ಪರಿಸರ ಪ್ರೇಮಿ ಪಾಂಗಾಳ ಗೋಪಾಲ್ ಕೃಷ್ಣ ನಾಯಕ್ ನಿಧನ

ಕಟಪಾಡಿ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಕಟಪಾಡಿ ನಾಯಕ್ ಮನೆತನದ ಹಿರಿಯರಾದ, ಸ್ವಾತಂತ್ರ್ಯ ಹೋರಾಟಗಾರ ಪಾಂಗಾಳ ಲಕ್ಷ್ಮೀ ನಾರಾಯಣ ನಾಯಕ್ ಅವರ ಪುತ್ರ ಪಾಂಗಾಳ ಗೋಪಾಲಕೃಷ್ಣ ನಾಯಕ್ (92) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಕಟಪಾಡಿಯಲ್ಲಿ ಹೆಸರಾಂತ ನಾಯಕ್ ಆಯುರ್ವೇದಾಶ್ರಮ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದ ಇವರು ಗಾಂಧಿ ತತ್ವದಡಿ ಸರಳ ಜೀವನ ನಡೆಸುತ್ತಿದ್ದವರು. ಅವಿವಾಹಿತರಾಗಿದ್ದ ಇವರು ಸದಾ ಕಾಲ ಖಾದಿ ಬಟ್ಟೆ ಧರಿಸಿ ದೇಶಿಯ ಆಹಾರ ಪದ್ಧತಿ ಯನ್ನು ಅನುಸರಿಸಿಕೊಂಡು ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಂಡು ಬಂದವರು. ಪ್ರಾಣಿ ಪಕ್ಷಿಗಳ […]

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ “ಪಥ್ಯಾಹಾರ ದಿನ” ಆಚರಣೆ

ಉಡುಪಿ: ಪ್ರತಿ ವರ್ಷ ಜನವರಿ 10 ಅನ್ನು ಪಥ್ಯಾಹಾರ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. “ಸಾರ್ವಜನಿಕ ಆರೋಗ್ಯ ಸಮಸ್ಯೆಗಳ ನಿರ್ವಹಣೆಯಲ್ಲಿ ಪಥ್ಯಾಹಾರ ತಜ್ಞರ ಪಾತ್ರ” ಎಂಬ ಈ ವರ್ಷದ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಎಂ.ಸಿ.ಎಚ್‌.ಪಿ ಕಾಲೇಜಿನ ಪಥ್ಯಾಹಾರ ವಿಭಾಗದ ವಿದ್ಯಾರ್ಥಿಗಳು ಮತ್ತು ಕಸ್ತೂರ್ಬಾ ಆಸ್ಪತ್ರೆಯ ಪಥ್ಯಾಹಾರ ತಜ್ಞರ ತಂಡವು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಪಥ್ಯಾಹಾರದ ಬಗ್ಗೆ ವಿಶೇಷ ಜಾಗೃತಿಯನ್ನು ಮೂಡಿಸುವ ಹಲವು ಬಗೆಯ ಆಟಗಳನ್ನು ಆಯೋಜಿಸಿತ್ತು . ಪೌಷ್ಟಿಕಾಂಶದ ಕುರಿತು ಸರಳವಾದ ಪ್ರಶ್ನೆಗಳನ್ನು ಕೇಳಿ ಉತ್ತರಿಸಿದವರಿಗೆ ಬಹುಮಾನವಾಗಿ ಹಣ್ಣುಗಳನ್ನು […]

ಉಚಿತ ಆರೋಗ್ಯಕರ ವೃದ್ಧಾಪ್ಯದ ಜಾಗೃತಿ ಮತ್ತು ಸ್ಕ್ರೀನಿಂಗ್ ಪರೀಕ್ಷೆ (ಸಮಗ್ರ ಆರೋಗ್ಯ ತಪಾಸಣೆ) ಕಾರ್ಯಕ್ರಮ

ಉಡುಪಿ: ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯು ಆರೋಗ್ಯವಂತ ವೃದ್ಧಾಪ್ಯದ ಅಧ್ಯಯನ ಕೇಂದ್ರ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಸಹಯೋಗದಲ್ಲಿ ಹಿರಿಯ ನಾಗರಿಕರ ಸಮುದಾಯಕ್ಕಾಗಿ ಮಹತ್ವದ ಕಾರ್ಯಕ್ರಮವನ್ನು ಪ್ರಕಟಿಸಿದೆ. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಿಗೆ ಉಚಿತ ಆರೋಗ್ಯಕರ ವೃದ್ಧಾಪ್ಯದ ಜಾಗೃತಿ ಮತ್ತು ಸ್ಕ್ರೀನಿಂಗ್ ಪರೀಕ್ಷೆ ಕಾರ್ಯಕ್ರಮವನ್ನು 2024 ರ ಜನವರಿ 23 ಮತ್ತು 24 ರಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯ ಮೂರನೇ […]