ಕೇಂದ್ರ ಸರಕಾರದ ದೂರ ಸಂಪರ್ಕ ಇಲಾಖೆ ಹೊಸ ಸೌಲಭ್ಯವೊಂದನ್ನು ಜಾರಿಗೆ ತರಲಿದೆ. ಈ ಸೌಲಭ್ಯದಲ್ಲಿ ನೀವು ನೆಟ್ ವರ್ಕ್ ಇಲ್ಲದಿದ್ದರೂ ಕರೆ ಮಾಡುವ ಅವಕಾಶ ಪಡೆದುಕೊಳ್ಳುತ್ತೀರಿ. ಹೌದು ದೇಶದಲ್ಲಿ ಇಂಟ್ರಾ ಸರ್ಕಲ್ ರೋಮಿಂಗ್ (ಐಸಿಆರ್)ಸೌಲಭ್ಯವನ್ನು ದೂರ ಸಂಪರ್ಕ ಇಲಾಖೆ ಪ್ರಾರಂಭಿಸಿದೆ. ಈ ಸೌಲಭ್ಯದ ಅಡಿಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಈಗ ಕರೆಗಳನ್ನು ಮಾಡಲು 4G ಮೂಲಸೌಕರ್ಯವನ್ನು ತಮ್ಮ ನಡುವೆ ಹಂಚಿಕೊಳ್ಳಬೇಕಾಗುತ್ತದೆ. ಆಗ ನೀವು ಯಾವುದೇ ಕಂಪೆನಿಯ ಸಿಮ್ ಕಾರ್ಡ್ ಇದ್ದರೂ ನಿಮ್ಮ ಸ್ಥಳದಲ್ಲಿ ಲಭ್ಯವಿರುವ ಇತರ ಯಾವುದೇ ಕಂಪೆನಿಯ ನೆಟ್ ವರ್ಕ್ ಮೂಲಕ ಕರೆ ಮಾಡಬಹುದಾಗಿದೆ. ಈ ಸೌಲಭ್ಯವು ಸರ್ಕಾರದ ನೆರವಿನೊಂದಿಗೆ ಕಂಪನಿಗಳು ನಿರ್ಮಿಸುವ ಟವರ್‌ಗಳಿಗೆ ಮಾತ್ರ ಲಭ್ಯವಾಗಲಿದೆ.
ನಿಮ್ಮ ಮೊಬೈಲ್ ನಲ್ಲಿ ಸಿಗ್ನಲ್ ಇಲ್ಲದಿದ್ದರೂ ನೀವು ನೆಲೆಸಿರುವ ಜಾಗದಿಂದ ಇತರ ಯಾವುದಾದರೂ ಕಂಪೆನಿಗಳ ನೆಟ್ ವರ್ಕ್ ಸಿಕ್ಕರೆ ನೀವು ಕರೆ ಮಾಡಬಹುದಾಗಿದೆ.
ಈ ಹೊಸ ಸೌಲಭ್ಯದ ಅಡಿಯಲ್ಲಿ ಜಿಯೋ, ಬಿಎಸ್ಎನ್ಎಲ್ ಮತ್ತು ಏರ್ಟೆಲ್ ಬಳಕೆದಾರರು ತಮ್ಮ ಸ್ವಂತ ಸಿಮ್ ನೆಟ್‌ವರ್ಕ್ ಇಲ್ಲದಿದ್ದರೂ ಅಲ್ಲಿ ಲಭ್ಯವಿರುವ ಯಾವುದೇ ನೆಟ್‌ವರ್ಕ್‌ನಿಂದ ಕರೆ ಮಾಡ್ಬೋದು.
ಇದುವೇ ICR ವೈಶಿಷ್ಟ್ಯ ತಂತ್ರಜ್ಞಾನದ ಸ್ಪೆಷಾಲಿಟಿಯಾಗಿದೆ. ಡಿಜಿಟಲ್ ಭಾರತ್ ನಿಧಿ (DBN) ಸ್ಥಾಪಿಸಿದ 4G ಟವರ್‌ಗಳ ಶ್ರೇಣಿಯಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಿರುತ್ತದೆ. ಇಲಾಖೆ ಈಗಾಗಲೇ ದೇಶಾದ್ಯಂತ 35,400 ದೂರದ ಹಳ್ಳಿಗಳಲ್ಲಿ 27 ಸಾವಿರ ಟವರ್‌ಗಳನ್ನು ಸ್ಥಾಪಿಸಿದೆ. ಭವಿಷ್ಯದಲ್ಲಿ ಎಲ್ಲರಿಗೂ ಈ ಸೌಲಭ್ಯ ಸಿಗುದರಲ್ಲಿ ಅಚ್ಚರಿಯಿಲ್ಲ. ಹೀಗಾದರೆ ಭಾರತದ ಎಷ್ಟೋ ಪ್ರದೇಶಗಳಲ್ಲಿ ನೆಟ್ ವರ್ಕ್ ಇಲ್ಲ ಎನ್ನುವ ಸಮಸ್ಯೆಗೆ ಪರಿಹಾರ ಸಿಗಲಿದೆ. ಈ ಯೋಜನೆ ಕೆಲವೊಂದು ಪ್ರದೇಶದಲ್ಲಿ ಸಿಗುತ್ತಿದ್ದು ಭವಿಷ್ಯದಲ್ಲಿ ಎಲ್ಲೆಡೆ ಲಭ್ಯವಾಗುವ ನಿರೀಕ್ಷೆ ಇದೆ.












