ಕಾರ್ಕಳ: ಫೆ.6ರಂದು ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಾರ್ಕಳ ಬಿಜೆಪಿ ನೇತೃತ್ವದಲ್ಲಿ ಇದೇ ಫೆ.6ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ‌. ಬೆಲೆ ಏರಿಕೆ, ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸ ದಿರುವುದು, ಹಿಂದೂ ವಿರೋಧಿ ನೀತಿ, ಕಟ್ಟಡ ಸಾಮಗ್ರಿಗಳ ಪೂರೈಕೆಗೆ ತಡೆ, ರೇಷನ್ ಕಾರ್ಡ್ ರದ್ದತಿ, ಹಾಲಿನ ಸಬ್ಸಿಡಿ ಬಾಕಿ, ಅಕ್ರಮ ಸಕ್ರಮ ಅರ್ಜಿ ತಿರಸ್ಕೃತ, ಏಕ ವಿನ್ಯಾಸ ನಕ್ರೆ […]

ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದ 49ನೇ ವರ್ಷದ “ಭಜನಾ ಸಪ್ತಾಹ”

ಉಡುಪಿ: ಚೇಕಾರ್ಡಿ ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದ 49ನೇ ವರ್ಷದ “ಭಜನಾ ಸಪ್ತಾಹ ಕಾರ್ಯಕ್ರಮ” ಫೆ.9ರ ವರೆಗೆ ನಡೆಯಲಿದೆ. ಫೆ.5ರಂದು ರಾತ್ರಿ 8ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ ಮತ್ತು ಅನ್ನಸಂತರ್ಪಣೆ ಜರುಗಲಿದೆ.ಫೆ. 6ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, ಫೆ.7ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, ಫೆ.8ರಂದು ಬೆಳಿಗ್ಗೆ 9 ಗಂಟೆಯಿಂದ “ಸಪ್ತಜಾಮ ಅಖಂಡ ಭಜನೆ ಆರಂಭವಾಗಲಿದೆ. ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ.

ಉಡುಪಿ: ಫೆ.8ರಂದು ಜಿಲ್ಲಾ ರೈತ ಸಮಾವೇಶ

ಉಡುಪಿ: ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಈಸೀ ಲೈಫ್ ಎಂಟರ್‌ಪ್ರೈಸಸ್ ಹಾಗೂ ಎಸ್.ಆರ್.ಕೆ. ಲ್ಯಾಡರ್ಸ್ ಪುತ್ತೂರು ಇವರ ಸಹಯೋಗದಲ್ಲಿ ಜಿಲ್ಲಾ ರೈತ ಸಮಾವೇಶ -2025 ಅನ್ನು ಇದೇ ಫೆ.8ರಂದು ಉಡುಪಿ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10ಗಂಟೆಗೆ ಮಂಗಳೂರು ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ […]

ಉಡುಪಿ: ಫೆ.9ರಂದು ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಸಮಾರಂಭ

ಉಡುಪಿ: ಉಡುಪಿ ಜಿಲ್ಲಾ ಶ್ರೀ ವಿಶ್ವಕರ್ಮ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಇದೇ ಫೆ.9ರಂದು ಕುಂಜಿಬೆಟ್ಟುವಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಬಿಎ ಆಚಾರ್ಯ ಮಣಿಪಾಲ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2024-25ನೇ ಸಾಲಿನ ವಿದ್ಯಾರ್ಥಿವೇತನಕ್ಕೆ 205 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, 9.15 ರೂ. ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಗುವುದು. ಅಂದು 10 ಗಂಟೆಗೆ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ […]

Boys vs Girls ಶೋನಿಂದ ಬಿಗ್ ಬಾಸ್ ನ ಲಾಯರ್ ಜಗದೀಶ್ ಔಟ್!

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ರಂಪಾಟ ಮಾಡಿಕೊಂಡು ಕಿಕ್ ಔಟ್ ಆಗಿದ್ದ ಲಾಯರ್ ಜಗದೀಶ್ ‘ಬಾಯ್ಸ್ ವರ್ಸಸ್‌ ಗರ್ಲ್ಸ್’ ಶೋನಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಕೊಡಿಗೇಹಳ್ಳಿ ಗಲಾಟೆ ಕೇಸ್‌ನಲ್ಲಿ ಲಾಯರ್‌ ಜಗದೀಶ್‌ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಿಣಾಮ, ಅವರನ್ನ ಹೊಸ ಗೇಮ್‌ ಶೋದಿಂದ ಕೈಬಿಡಲಾಗಿದೆ. ‘’ನಾನು ಕರ್ನಾಟಕದ ಸಿಎಂ ಆಗ್ತೀನಿ. ‘ಬಿಗ್ ಬಾಸ್’ ಮೂಲಕ ಇನ್ನೂ ಹೆಚ್ಚು ಅಭಿಮಾನಿಗಳನ್ನ ಗಳಿಸ್ತೀನಿ’’ ಅಂತ ಹೇಳಿಕೊಂಡು ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮಕ್ಕೆ ಬಂದವರು ಲಾಯರ್ ಜಗದೀಶ್‌. ಆದರೆ, ‘ಬಿಗ್ […]