ಉಡುಪಿ: ಉಡುಪಿಯ ಅಂಬಲಪಾಡಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ಹಿರಿಯ ನರರೋಗ ತಜ್ಞ ಡಾ. ಶರತ್ ಅಡಿಗ ಮಂದಾರ್ತಿ ಅವರು ನ. 16, 2026ರಿಂದ ರೋಗಿಗಳ ಸೇವೆಗೆ ಲಭ್ಯರಾಗಲಿದ್ದಾರೆ.
ಎಂ.ಡಿ. (ಇಂಟರ್ನಲ್ ಮೆಡಿಸಿನ್) ಹಾಗೂ ನಿಮ್ಹಾನ್ಸ್ನಿಂದ ಡಿ.ಎಂ. (ನ್ಯೂರಾಲಜಿ) ಪದವಿ ಪಡೆದಿರುವ ಡಾ. ಶರತ್ ಅಡಿಗ ಅವರು ನರರೋಗ ಚಿಕಿತ್ಸೆಯಲ್ಲಿ ಹಿರಿಯ ಸಲಹಾ ತಜ್ಞರಾಗಿ ಸೇವೆ ಸಲ್ಲಿಸಲಿದ್ದಾರೆ.
ತಲೆನೋವು ಮತ್ತು ಮೈಗ್ರೇನ್, ಪಾರ್ಶ್ವವಾಯು, ಪಾರ್ಕಿನ್ಸನ್ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್ (ಎಂ.ಎಸ್.), ನರನೋವು ಮತ್ತು ನರದೌರ್ಬಲ್ಯ, ಅಲ್ಝೈಮರ್ ಹಾಗೂ ಬುದ್ಧಿಮಾಂದ್ಯತೆ, ನಿದ್ರಾ ಅಸ್ವಸ್ಥತೆಗಳು, ಸ್ನಾಯು ಕಾಯಿಲೆಗಳು, ಮೆದುಳು ಮತ್ತು ಬೆನ್ನುಹುರಿಯ ಸೋಂಕುಗಳು, ಅಪಸ್ಮಾರ ಹಾಗೂ ರೋಗಗ್ರಸ್ತವಾಗುವಿಕೆ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ.
ಐಎಸ್ಒ ಪ್ರಮಾಣೀಕೃತ ಹೈಟೆಕ್ ಮೆಡಿಕೇರ್ ಆಸ್ಪತ್ರೆಯು ರೋಗಿಗಳ ಅನುಕೂಲಕ್ಕಾಗಿ 24 ಗಂಟೆಗಳ ತುರ್ತು ವೈದ್ಯಕೀಯ ಸೇವೆಯನ್ನೂ ಒದಗಿಸುತ್ತಿದೆ.
ಎಲ್ಲಿದೆ ಆಸ್ಪತ್ರೆ? ಹೈಟೆಕ್ ಮೆಡಿಕೇರ್ ಆಸ್ಪತ್ರೆ, ಎನ್ಎಚ್ 66, ಅಂಬಲಪಾಡಿ, ಉಡುಪಿ,.
ನರರೋಗ ತಜ್ಞರ ಸಮಾಲೋಚನೆ ಪಡೆಯಲು ರೋಗಿಗಳು ಮುಂಗಡವಾಗಿ ಸಮಯ ನಿಗದಿಪಡಿಸಿಕೊಳ್ಳಲು ಕರೆ ಮಾಡಿ ಮೊಬೈಲ್: 7406868214, 0820-2533331, 0820-2533332, 0820-2533333, ವೆಬ್ಸೈಟ್: www.hmhospital.in















