ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದ ಅರ್ಥಪೂರ್ಣ ಆಚರಣೆಗೆ ಸಮರ್ಪಕ ಸಿದ್ಧತೆ ಮಾಡಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ಉಡುಪಿ: ಜಿಲ್ಲಾಮಟ್ಟದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಇದೇ ಡಿಸೆಂಬರ್ 3 ರಂದು ಆಚರಿಸಲಾಗುತ್ತಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ, ವ್ಯವಸ್ಥಿತಿ ರೀತಿಯಲ್ಲಿ ಆಚರಿಸಲು ಅಗತ್ಯವಿರುವ ಸಿದ್ಧತೆಯನ್ನು ಸಮರ್ಪಕವಾಗಿ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲಾಮಟ್ಟದಲ್ಲಿ ಡಿಸೆಂಬರ್ 3 ರಂದು ಬೆಳಗ್ಗೆ 10 ಗಂಟೆಗೆ ನಗರದ ಮಣಿಪಾಲ ರಜತಾದ್ರಿಯ ಅಟಲ್ […]
ಪೀಡಿಯಾಟ್ರಿಕ್ ಕಾರ್ಡಿಯಾಲಜಿ – ಬ್ಯಾಕ್ ಟು ಬೇಸಿಕ್ಸ್” ವಿಷಯದಲ್ಲಿ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್ಡೇಟ್

ಮಣಿಪಾಲ, 16 ನವೆಂಬರ್ 2026: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಹೃದ್ರೋಗ ವಿಭಾಗವು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ (ಮಾಹೆ) ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ನ (ಎಂಸಿಎಚ್ಪಿ) ಕಾರ್ಡಿಯೋವ್ಯಾಸ್ಕ್ಯುಲರ್ ಟೆಕ್ನಾಲಜಿ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್ಡೇಟ್ ಇಂದು ಮಾಹೆಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ನಡೆಯಿತು. ಈ ಬಾರಿಯ ವಿಷಯ “ಪೀಡಿಯಾಟ್ರಿಕ್ ಕಾರ್ಡಿಯಾಲಜಿ – ಬ್ಯಾಕ್ ಟು ಬೇಸಿಕ್ಸ್” (ಮಕ್ಕಳ ಹೃದ್ರೋಗಶಾಸ್ತ್ರ – ಮೂಲ ತತ್ವಗಳತ್ತ). ಕೇರಳದ ಶ್ರೀ ಚಿತ್ರಾ […]
ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ನರರೋಗ ತಜ್ಞ ಡಾ. ಶರತ್ ಅಡಿಗ ಅವರು ಸೇವೆಗೆ ಲಭ್ಯ

ಉಡುಪಿ: ಉಡುಪಿಯ ಅಂಬಲಪಾಡಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ಹಿರಿಯ ನರರೋಗ ತಜ್ಞ ಡಾ. ಶರತ್ ಅಡಿಗ ಮಂದಾರ್ತಿ ಅವರು ನ. 16, 2026ರಿಂದ ರೋಗಿಗಳ ಸೇವೆಗೆ ಲಭ್ಯರಾಗಲಿದ್ದಾರೆ. ಎಂ.ಡಿ. (ಇಂಟರ್ನಲ್ ಮೆಡಿಸಿನ್) ಹಾಗೂ ನಿಮ್ಹಾನ್ಸ್ನಿಂದ ಡಿ.ಎಂ. (ನ್ಯೂರಾಲಜಿ) ಪದವಿ ಪಡೆದಿರುವ ಡಾ. ಶರತ್ ಅಡಿಗ ಅವರು ನರರೋಗ ಚಿಕಿತ್ಸೆಯಲ್ಲಿ ಹಿರಿಯ ಸಲಹಾ ತಜ್ಞರಾಗಿ ಸೇವೆ ಸಲ್ಲಿಸಲಿದ್ದಾರೆ. ತಲೆನೋವು ಮತ್ತು ಮೈಗ್ರೇನ್, ಪಾರ್ಶ್ವವಾಯು, ಪಾರ್ಕಿನ್ಸನ್ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್ (ಎಂ.ಎಸ್.), ನರನೋವು ಮತ್ತು ನರದೌರ್ಬಲ್ಯ, ಅಲ್ಝೈಮರ್ ಹಾಗೂ ಬುದ್ಧಿಮಾಂದ್ಯತೆ, […]
ಉಡುಪಿ: ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಟೆಕ್ನಿಷಿಯನ್ ಹುದ್ದೆಗೆ ನೇಮಕಾತಿ – ಅರ್ಜಿ ಆಹ್ವಾನ

ಉಡುಪಿ: ಹಡಗು ನಿರ್ಮಾಣ ಉದ್ಯಮದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿಯ ಶಿಪ್ಯಾರ್ಡ್ ಘಟಕದಲ್ಲಿ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ತಂತ್ರಜ್ಞರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ವರ್ಕ್ ಮಿತ್ರ (Workmithra) ಸಂಸ್ಥೆಯ ಮೂಲಕ ಪವರ್ ನೆಟ್ ಟೆಕ್ನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಈ ನೇಮಕಾತಿ ನಡೆಯಲಿದೆ. ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ವಿಭಾಗದಲ್ಲಿ ಐಟಿಐ ಅಥವಾ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜತೆಗೆ ನಿರ್ವಹಣಾ ವಿಭಾಗದಲ್ಲಿ 2ರಿಂದ 3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ […]
ಓಲಾ, ಊಬರ್ ಕ್ಯಾಬ್ಗಳಿಗೆ ಮೀಟರ್ ಕಡ್ಡಾಯ: ಹಾಫ್ ಹೆಲ್ಮೆಟ್ ಬ್ಯಾನ್, ಫುಟ್ಪಾತ್ನಲ್ಲಿ ವಾಹನ ಓಡಿಸಿದರೆ ₹5 ಸಾವಿರ ದಂಡ, ರಾಜ್ಯದಲ್ಲಿನ್ನು ಕಠಿಣ ನಿಯಮಗಳು!

ಬೆಂಗಳೂರು: ರಾಜ್ಯದಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ. ಓಲಾ (Ola), ಊಬರ್ (Uber) ಕ್ಯಾಬ್ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸುವುದರ ಜತೆಗೆ ಹಾಫ್ ಹೆಲ್ಮೆಟ್ ಬಳಕೆಯನ್ನು ನಿಷೇಧಿಸಲು ಹಾಗೂ ಫುಟ್ಪಾತ್ನಲ್ಲಿ ವಾಹನ ಚಲಾಯಿಸುವವರಿಗೆ ಭಾರೀ ದಂಡ ವಿಧಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಲಾ ಮತ್ತು ಊಬರ್ ಕ್ಯಾಬ್ಗಳು ಆಟೋ ರಿಕ್ಷಾಗಳ ಮಾದರಿಯಲ್ಲಿ ಮೀಟರ್ […]