ಅಮೇರಿಕಾದ ನ್ಯೂಜೆರ್ಸಿಯಲ್ಲಿ ಅತಿದೊಡ್ಡ ಹಿಂದೂ ದೇವಾಲಯ ಉದ್ಘಾಟನೆ

ಯುನೈಟೆಡ್ ಸ್ಟೇಟ್ಸ್ ನ ಅತಿದೊಡ್ಡ ಹಿಂದೂ ದೇವಾಲಯವು ನ್ಯೂಜೆರ್ಸಿಯಲ್ಲಿ ಭಾನುವಾರ ತನ್ನ ಬಾಗಿಲನ್ನು ಭಕ್ತರಿಗಾಗಿ ತೆರೆದಿದೆ. ರಾಬಿನ್ಸ್‌ವಿಲ್ಲೆಯ ಸಣ್ಣ ಟೌನ್‌ಶಿಪ್‌ನಲ್ಲಿ 183-ಎಕರೆ ಜಾಗದಲ್ಲಿ BAPS ಸ್ವಾಮಿನಾರಾಯಣ ಅಕ್ಷರಧಾಮ ಮಂದಿರವನ್ನು ಲೋಕಾರ್ಪಣೆ ಮಾಡಲಾಗಿದೆ. ಅಕ್ಟೋಬರ್ 8 ರಂದು ದೇವಾಲಯ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಅ.18 ರಿಂದ ಸಾರ್ವಜನಿಕರಿಗೆ ಪ್ರವೇಶ ದೊರೆಯಲಿದೆ. ಭಾರತೀಯ ಅಮೆರಿಕನ್ನರು ಮತ್ತು ಹಿಂದೂ ಅಮೆರಿಕನ್ನರಿಗೆ, ಇದು ಒಂದು ದೊಡ್ಡ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. #WATCH | The largest Hindu temple in the US – BAPS […]

ಶಾಸಕ ಪ್ರದೀಪ್​ ಈಶ್ವರ್​ ಸಾಥ್​ : ಹೊಸ ಪ್ರತಿಭೆಗಳ ‘ಲವ್​ ರೆಡ್ಡಿ’ ಸಿನಿಮಾ

ಶೀರ್ಷಿಕೆ ಹೇಳುವಂತೆ ಇದೊಂದು ಸುಂದರ ಪ್ರೇಮಕಥೆಯ ಜೊತೆಗೆ ಫ್ಯಾಮಿಲಿ ಎಮೋಷನಲ್​ ಡ್ರಾಮಾ. ಈ ಸಿನಿಮಾ ಮೂಲಕ ಗಡಿನಾಡ ಪ್ರತಿಭೆ ಅಂಜನ್​ ರಾಮಚಂದ್ರ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಾಯಕಿಯಾಗಿ ಶ್ರಾವಣಿ ನಟಿಸಿದ್ದಾರೆ. ಸ್ಯಾಂಡಲ್​ವುಡ್​ಗೆ ಟ್ಯಾಲೆಂಟ್​ ಇರುವ ಪ್ರತಿಭೆಗಳೇ ಎಂಟ್ರಿಯಾಗುತ್ತಿದ್ದಾರೆ. ಇದೀಗ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ‘ಲವ್​ ರೆಡ್ಡಿ’ ಎಂಬ ಸಿನಿಮಾ ಮಾಡಿದ್ದಾರೆ.ಹೊಸ ಪ್ರತಿಭೆಗಳ ‘ಲವ್​ ರೆಡ್ಡಿ’ ಚಿತ್ರದ ಫಸ್ಟ್​ ಝಲಕ್​ ಅನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಿಡುಗಡೆಗೊಳಿಸಿದ್ದಾರೆ. ಈ ವೇಳೆ‌ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, […]

ಕಚ್ಚಾ ತೈಲ ಬೆಲೆ ಏರಿಕೆ : ಇಸ್ರೇಲ್ – ಗಾಜಾ ಸಮರದ ಎಫೆಕ್ಟ್​

ನವದೆಹಲಿ: ಇಸ್ರೇಲ್ ಮತ್ತು ಗಾಜಾದಲ್ಲಿ ಯುದ್ಧ ಪರಿಸ್ಥಿತಿಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ತೈಲ ಉತ್ಪಾದನೆಗೆ ಅಡ್ಡಿಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಗಳು ಸೋಮವಾರ ಶೇಕಡಾ 4 ರಷ್ಟು ಏರಿಕೆಯಾಗಿವೆ.ಅಮೆರಿಕದ ತೈಲ ಬೆಲೆಯ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (ಡಬ್ಲ್ಯುಟಿಐ) ಬ್ಯಾರೆಲ್​ಗೆ 86 ಡಾಲರ್​ಗಿಂತ ಹೆಚ್ಚಾಗಿದೆ. ಹಾಗೆಯೇ ಬ್ರೆಂಟ್ ಕ್ರೂಡ್​ ತೈಲದ ಬೆಲೆಯೂ ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಏರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ ಸ್ಥಿತಿಯು ತೈಲ ಬೆಲೆಗಳ […]

ಉಚಿತ ಫುಡ್​ ಡೆಲಿವರಿ ಮತ್ತು ಡಿಸ್ಕೌಂಟ್​ : ಕಡಿಮೆ ದರದ ಸ್ವಿಗ್ಗಿ ಒನ್ ಲೈಟ್​ ಮೆಂಬರ್​ಶಿಪ್

ನವದೆಹಲಿ: ಉಚಿತ ಆಹಾರ ಡೆಲಿವರಿ, ವಿಶೇಷ ಆಫರ್​ಗಳು ಮತ್ತು ಡಿಸ್ಕೌಂಟ್​ಗಳಂಥ ಪ್ರಯೋಜನಗಳನ್ನು ನೀಡುವ ಸ್ವಿಗ್ಗಿ ಒನ್ ಲೈಟ್ ಮೆಂಬರ್​ಶಿಪ್ ಯೋಜನೆಯನ್ನು ಸ್ವಿಗ್ಗಿ ಸೋಮವಾರ ಪ್ರಕಟಿಸಿದೆ.ಇದಕ್ಕೆ ಮೂರು ತಿಂಗಳಿಗೆ 99 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಮೂರು ತಿಂಗಳ ಸದಸ್ಯತ್ವದೊಂದಿಗೆ, ಬಳಕೆದಾರರು 149 ರೂ.ಗಿಂತ ಹೆಚ್ಚಿನ ಆರ್ಡರ್ ಮೌಲ್ಯದ 10 ಉಚಿತ ಫುಡ್​ ಡೆಲಿವರಿ ಮತ್ತು ಇನ್​ಸ್ಟಾಮಾರ್ಟ್​ನಲ್ಲಿ 199 ರೂ.ಗಿಂತ ಹೆಚ್ಚಿನ ಆರ್ಡರ್ ಮೌಲ್ಯದ 10 ಉಚಿತ ಡೆಲಿವರಿಗಳನ್ನು ಪಡೆಯುತ್ತಾರೆ. ಉಚಿತ ಫುಡ್​ ಡೆಲಿವರಿ ನೀಡುವ ಸ್ವಿಗ್ಗಿ ಒನ್ ಲೈಟ್​ […]

ಎಸ್&ಪಿ ವರದಿ : ಏಷ್ಯಾ-ಪೆಸಿಫಿಕ್​ ವಲಯದಲ್ಲಿ ಭಾರತದ ಸರ್ಕಾರಿ ಬ್ಯಾಂಕುಗಳ ಷೇರುಗಳೇ ಬೆಸ್ಟ್

ನವದೆಹಲಿ: ಸೆಪ್ಟೆಂಬರ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಏಷ್ಯಾ-ಪೆಸಿಫಿಕ್ ಮೂಲದ ಬ್ಯಾಂಕ್​ಗಳಿಗಿಂತ ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಷೇರುಗಳು ಅತ್ಯುತ್ತಮವಾಗಿ ವಹಿವಾಟು ನಡೆಸಿವೆ. ಇದು ಈ ಬ್ಯಾಂಕ್​ಗಳ ಮೇಲೆ ಹೂಡಿಕೆದಾರರು ಇಟ್ಟಿರುವ ವಿಶ್ವಾಸ ಮತ್ತು ಅವುಗಳ ಹಣಕಾಸು ದೃಢತೆಯನ್ನು ಬಿಂಬಿಸುತ್ತದೆ ಎಂದು ಎಸ್ & ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ತಿಳಿಸಿದೆ.ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಷೇರುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ವರದಿ ಹೇಳಿದೆ. ಇಂಡೋನೇಷ್ಯಾದ ಪಿಟಿ ಬ್ಯಾಂಕ್ ನ್ಯಾಷನಲ್ ನೋಬು ಟಿಬಿಕೆ […]