ನೀಟ್ ಫಲಿತಾಂಶ: ಜ್ಞಾನಸುಧಾದ 93 ವಿದ್ಯಾರ್ಥಿಗಳಿಗೆ 500ಕ್ಕಿಂತ ಅಧಿಕ ಅಂಕ 

ಉಡುಪಿ : ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ) ನಡೆಸಿದ್ದ 2023ನೇ ಸಾಲಿನ ನೀಟ್ ಫಲಿತಾಂಶದಲ್ಲಿ ಜ್ಞಾನಸುಧಾದ 15 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು, 93 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು ಗಳಿಸಿದ್ದಾರೆ.

ಅಥಿರಾ ಕೃಷ್ಣ ನಾಯಕ್ 99.5988 ಪರ್ಸಂಟೈಲ್‍ನೊಂದಿಗೆ 646 ಅಂಕ, ದ್ರುವ ಪಿ.ಬಿ. 99.4039 ಪರ್ಸಂಟೈಲ್‍ನೊಂದಿಗೆ 635 ಅಂಕ, ರೋಹಿತ್ ಹೆಗ್ಡೆ 99.2302 ಪರ್ಸಂಟೈಲ್‍ನೊಂದಿಗೆ 626 ಅಂಕ, ಚೇತನ್ ಸಿ ಪಾಟೀಲ್ 99.2302 ಪರ್ಸಂಟೈಲ್‍ನೊಂದಿಗೆ 626 ಅಂಕ, ಅಂಕಿತಾ.ಪಿ.ಆಚಾರ್ಯ 99.0799 ಪರ್ಸಂಟೈಲ್‍ನೊಂದಿಗೆ 620 ಅಂಕ, ವಿಶ್ವಾಸ್.ಎಂ 99.0446 ಪರ್ಸಂಟೈಲ್‍ನೊಂದಿಗೆ 618 ಅಂಕ, ಅಮೂಲ್ಯ ಶೆಟ್ಟಿ 616 ಅಂಕ, ಪ್ರಣವ್ ಗುಜ್ಜರ್ 616 ಅಂಕ, ವೈಷ್ಣವಿ ಎಸ್.ಎಂ 615 ಅಂಕ, ಕನ್ನಿಕಾ ಕೆ.ಜೆ. 614 ಅಂಕ, ತ್ರಿಷಾ ಕಾಂತ್ 612 ಅಂಕ, ಎಂ.ಆರ್.ಯಶಸ್ ರೆಡ್ಡಿ 611 ಅಂಕ, ಅನುಬಿ.ಜಿ. 603 ಅಂಕ, ಚಿರಾಗ್ ಆರ್.ನಾಯಕ್ 600 ಅಂಕ, ತಿಲಕ್ ರಾವ್ 600 ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಸಿದ್ದಾರೆ.