ಸಿಇಟಿ ಫಲಿತಾಂಶ: ಕಾರ್ಕಳ ಕ್ರಿಯೇಟಿವ್‌ ಪಿಯು ಕಾಲೇಜು ದ್ವಿತೀಯ ವರ್ಷವೂ ಅತ್ಯುತ್ತಮ ಸಾಧನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 2023 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಜಾಗೃತಿ ಕೆ ಪಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 17 ನೇ ರ‍್ಯಾಂಕ್‌, ಪಶುವೈದ್ಯಕೀಯದಲ್ಲಿ 107ನೇ ರ‍್ಯಾಂಕ್‌, ಬಿ. ಎನ್‌ ವೈ ಎಸ್‌ ನಲ್ಲಿ 53 ನೇ ರ‍್ಯಾಂಕ್‌ ಹಾಗೂ ಇಂಜಿನಿಯರಿಂಗ್‌ ವಿಭಾಗದಲ್ಲಿ 112 […]

ಮಣಿಪಾಲ ಟೈಗರ್ ಸರ್ಕಲ್ ನಲ್ಲಿ ಸಂಚಾರ ದಟ್ಟಣೆ: ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ

ಉಡುಪಿ: ಮಣಿಪಾಲ ನಗರದ ಹೃದಯ ಭಾಗವಾದ ಟೈಗರ್ ಸರ್ಕಲ್ ಬಳಿ ನಿತ್ಯ ಸಂಚಾರ ದಟ್ಟಣೆ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಗುರುವಾರ ನಗರಸಭೆ ಅಧಿಕಾರಿಗಳು, ಪೊಲೀಸ್ ಉಪನಿರೀಕ್ಷಕ ಹಾಗೂ ಸ್ಥಳೀಯ ನಗರ ಸಭಾ ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್, ಅವೈಜ್ಞಾನಿಕ ರೀತಿಯಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್, ಅಸಮರ್ಪಕ ಪ್ರಯಾಣಿಕರ ತಂಗುದಾಣ, ಫುಟ್ ಪಾತ್ ನಲ್ಲಿ ಬೀದಿ ಬದಿ ವ್ಯಾಪಾರದಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು […]

ಕೆ.ಸಿ.ಇ.ಟಿ ಫಲಿತಾಂಶ: ಜ್ಞಾನಸುಧಾದ 24 ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್‍ನಲ್ಲಿ ಸಾವಿರದೊಳಗಿನ ರ್ಯಾಂಕ್ 

ಉಡುಪಿ: ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸುಗಳಿಗೆ ನಡೆದ ಕೆ.ಸಿ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಜ್ಞಾನಸುಧಾದದ 24 ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿಭಾಗದಲ್ಲಿ ರ್ಯಾಂಕ್ ಗಳಿಸಿದ್ದು, ಪ್ರಣವ್ ಗುಜ್ಜರ್ ಬಿಎಸ್ಸಿ ಎಗ್ರಿಯಲ್ಲಿ 6ನೇ ರ್ಯಾಂಕ್, ಇಂಜಿನಿಯರಿಂಗ್‍ನಲ್ಲಿ 68ನೇ ರ್ಯಾಂಕ್, ಬಿ.ಎನ್.ವೈ.ಎಸ್‍ನಲ್ಲಿ 100ನೇ ರ್ಯಾಂಕ್, ವೆಟರ್ನರಿಯಲ್ಲಿ 134ನೇ ರ್ಯಾಂಕ್, ಬಿ.ಫಾರ್ಮದಲ್ಲಿ 202ನೇ ರ್ಯಾಂಕ್ ಗಳಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಧನ್ವಿತ್ ನಾಯಕ್ 87ನೇ ರ್ಯಾಂಕ್, ಶ್ರೇಯಸ್ ಆರ್ ಗೌಡ 325ನೇ ರ್ಯಾಂಕ್, ಪ್ರಭಂಜನ್ ಎಸ್ ಬಾಬು 341ನೇ ರ್ಯಾಂಕ್, ಸಮೃದ್ಧ್ ನೆಲ್ಲಿ 349ನೇ […]

ನಾವೆಲ್ಲರೂ ಆನ್​ಲೈನ್​ ದ್ವೇಷದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದ ವಿಶ್ವಸಂಸ್ಥೆ ಅಧ್ಯಕ್ಷರು

ಹೈದರಾಬಾದ್: ಆನ್‌ಲೈನ್ ದ್ವೇಷವನ್ನು ಹತ್ತಿಕ್ಕಲು ಮತ್ತು ಸಾಮಾಜಿಕ ಒಗ್ಗಟ್ಟಿನಲ್ಲಿ ನಿಮ್ಮನ್ನ ನೀವು ತೊಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ. “ದ್ವೇಷವು ಪ್ರತಿಯೊಬ್ಬರಿಗೂ ಅಪಾಯವನ್ನು ತಂದೊಡ್ಡಲಿದೆ. ಆದ್ದರಿಂದ ಅದರ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಕೆಲಸವಾಗಿರಬೇಕು ಎಂದು ಅವರು ಪ್ರತಿಪಾದಿಸಿದರು. ಭದ್ರತಾ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು. ಆನ್‌ಲೈನ್‌ನಲ್ಲಿ ಹರಡುತ್ತಿರುವ ದ್ವೇಷವನ್ನು ನಾವು ಹತ್ತಿಕ್ಕಲು ಪ್ರಯತ್ನಿಸಬೇಕು. ದ್ವೇಷವು ಮಾನವೀಯತೆಯ ಕೆಟ್ಟ ಪ್ರಚೋದನೆಗಳನ್ನು ತುಂಬುತ್ತದೆ. ಇದು ಧ್ರುವೀಕರಣ ಮತ್ತು ಆಮೂಲಾಗ್ರೀಕರಣಕ್ಕೆ ವೇಗವರ್ಧಕವಾಗಿದೆ ಮತ್ತು ದೌರ್ಜನ್ಯ […]

ಅಮೆರಿಕ ಕೇಂದ್ರ ಬ್ಯಾಂಕ್​ : ಸದ್ಯಕ್ಕೆ ರೆಪೋ ದರದಲ್ಲಿ ಯಥಾಸ್ಥಿತಿ, ವರ್ಷಾಂತ್ಯದಲ್ಲಿ 2 ಬಾರಿ ಏರಿಕೆ

ವಾಷಿಂಗ್ಟನ್ ( ಅಮೆರಿಕ): ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಸತತ 10 ಬಾರಿ ರೆಪೋ ದರ ಏರಿಕೆ ಮಾಡಿದ್ದ ಅಮೆರಿಕದ ಫೆಡರಲ್​ ರಿಸರ್ವ್​ ಬ್ಯಾಂಕ್​ ಈ ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಅಮೆರಿಕಕ್ಕೂ ಹಣದುಬ್ಬರ ಸಮಸ್ಯೆ ತಪ್ಪಿಲ್ಲ. ಇದರ ನಿಯಂತ್ರಣಕ್ಕಾಗಿ ಅಲ್ಲಿನ ಕೇಂದ್ರ ಬ್ಯಾಂಕ್​ ಹರಸಾಹಸ ಮಾಡುತ್ತಿದ್ದು, ಈ ಮಾಸಿಕದಲ್ಲಿ ಸಾಲಗಳ ಮೇಲಿನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ ಆದರೆ, ಮುಂದಿನ ತಿಂಗಳಿನಿಂದ ವರ್ಷಾಂತ್ಯದಲ್ಲಿ ಇನ್ನೂ 2 ಬಾರಿ ದರ ಏರಿಕೆ ಮಾಡುವ ಸೂಚನೆ ನೀಡಿದೆ. ಸದ್ಯಕ್ಕೆ ದೇಶದಲ್ಲಿ ರೆಪೋ ದರ […]