ಜನಪರ ಬಜೆಟ್ ಮಂಡಿಸಿದ ಸರ್ಕಾರಕ್ಕೆ ಮಹಿಳೆಯರ ಪರವಾಗಿ ಅಭಿನಂದನೆ: ನಯನಾ ಗಣೇಶ್

ಉಡುಪಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಮಹಿಳೆಯರ,ರೈತರ,ಎಲ್ಲಾ ವರ್ಗದ ಜನರ ಜನಪರ ಬಜೆಟ್ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಯನಾ ಗಣೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.

ರೈತರಿಗೆ ನೀಡುತ್ತಿದ್ದ ಬಡ್ಡಿ ರಹಿತ ಸಾಲ 5 ಲಕ್ಷಕ್ಕೆ ಏರಿಕೆ. ಸಣ್ಣ,ಅತೀ ಸಣ್ಣ ರೈತರಿಗೆ 80 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ಕಿಸಾನ್ ಯೋಜನೆ, ನೇತಾರ ಸಮ್ಮಾನ್ ಯೋಜನೆ 3 ಸಾವಿರದಿಂದ 5 ಸಾವಿರಕ್ಕೆ ಏರಿಕೆ, ನೇಕಾರರು,ಮೀನುಗಾರರಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ, ಕಾರ್ಮಿಕ ಮಹಿಳೆಯರಿಗೆ ಮಾಸಿಕ 500 ರೂಪಾಯಿ ಸಹಾಯಧನ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಮಹಿಳಾ ಸಂಘಟಿತ ಕಾರ್ಮಿಕರಿಗೆ ಉಚಿತ ಪಾಸ್, ತಾಯಿ ಮತ್ತು ಮಗು ಮನೆಗೆ ತಲುಪಿಸಲು ನಗು-ಮಗು ವಾಹನ, ಉಡುಪಿ ಜಿಲ್ಲೆಯಲ್ಲಿ ಯಕ್ಷ ರಂಗ ಸ್ಥಾಪನೆ, ಪಂಚಾಯತ್ ಸದಸ್ಯರು, ಬಿಸಿಯೂಟ ನೌಕರರು, ಅತಿಥಿ ಶಿಕ್ಷಕರು, ಗ್ರಂಥಾಲಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ, ಮೀನುಗಾರರ ಸುರಕ್ಷತೆಗಾಗಿ 17 ಕೋಟಿ ಅನುದಾನದಲ್ಲಿ ಬೋಟ್ ಗಳಿಗೆ ಜಿಪಿಎಸ್ ಅಳವಡಿಕೆ, ಮೀನುಗಾರಿಕೆಗೆ ನೀಡುತ್ತಿದ್ದ ಡೀಸೆಲ್ ಮಿತಿಯನ್ನು 1.5 ಕಿ.ಲೊ ಲೀಟರ್ ಗಳಿಂದ 2 ಲಕ್ಷ ಕಿ.ಲೋ ಲೀಟರ್ ಗಳಿಗೆ ಹೆಚ್ಚಳದಿಂದ ಎಲ್ಲಾ ವರ್ಗದ ಜನರ ಸರ್ವಸ್ಪರ್ಶಿ ಈ ಬಜೆಟ್ ನಲ್ಲಿ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಿದ್ದು ಸಂತಸ ತಂದಿದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ರಾಜ್ಯ ಸರ್ಕಾರಕ್ಕೆ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.