ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಜಿ.ಡಿ.ಮರ ಜಂಕ್ಷನ್‌ಗೆ ‘ಬ್ರಹ್ಮಶ್ರೀ ನಾರಾಯಣಗುರು ಜಂಕ್ಷನ್’ ನಾಮಕರಣ ಮತ್ತು ನಾಮಫಲಕ ಅನಾವರಣ ಕಾರ್ಯಕ್ರಮವು ಶುಕ್ರವಾರ ನಡೆಯಿತು. ಉದ್ಘಾಟನೆ ನೆರವೇರಿಸಿದ ಬಿಬಿಎಂಪಿ ಮಹಾಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳಂತಹ ಮಹಾಗುರುಗಳ ಹೆಸರನ್ನು ಈ ಜಂಕ್ಷನ್‌ಗೆ ಇಟ್ಟಿರುವುದು ಮಹಾನಗರ ಪಾಲಿಕೆಗೆ ಗೌರವ ತಂದು ಕೊಟ್ಟಿದೆ ಎಂದರು. ಶಾಸಕಿ ಸೌಮ್ಯಾರೆಡ್ಡಿ, ಪಾಲಿಕೆ ಸದಸ್ಯೆಯರಾದ ಲಕ್ಷ್ಮೀ ನಟರಾಜ್, ಭಾಗ್ಯಲಕ್ಷ್ಮೀ ಮುರಳಿ ಮಾತನಾಡಿದರು. ಬಿಬಿಎಂಪಿಯ ಜಂಟಿ ಆಯುಕ್ತರಾದ ಡಾ| ಸೌಜನ್ಯ, ಬಿಬಿಎಂಪಿ ಎಇ ಅಶೋಕ್, ಎಇಇ ನೀಲಕಂಠ, ಸಂಘದ ಹಿರಿಯ ಉಪಾಧ್ಯಕ್ಷ ಎಂ. ರಮೇಶ್ ಬಂಗೇರ, ಉಪಾಧ್ಯಕ್ಷ ಕೇಶವ ಪೂಜಾರಿ, ಅಸೋಸಿಯೇಶನ್ ಪ್ರ.ಕಾರ್ಯದರ್ಶಿ ಭಾಸ್ಕರ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಜಯರಾಮ್ ಉಪಸ್ಥಿತರಿದ್ದರು. ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಅಧ್ಯಕ್ಷ ಎಂ. ವೇದಕುಮಾರ್ ಸ್ವಾಗತಿದರು. ಕೃಷ್ಣಪ್ಪ ನಿರೂಪಿಸಿ, ವಂದಿಸಿದರು.