ಏ. 06 ರಂದು ನಂದಳಿಕೆ ಅಯನೋತ್ಸವ ಸಿರಿಜಾತ್ರಾ ಮಹೋತ್ಸವ

ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯ ನಾಲ್ಕುಸ್ಥಾನ ನಂದಳಿಕೆ: ತಾ. 06/04/2023 ನೇ ಗುರುವಾರ ಸತ್ಯದಸಿರಿ ವರಪುಣ್ಯಕ್ಷೇತ್ರ ನಂದಳಿಕೆ ಶ್ರೀ ಮಹಾಲಿಂಗೇಶ್ವರ ಸ್ವಾಮೀ ಪುಣ್ಯ ಸನ್ನಿಧಾನದಲ್ಲಿ ನಂದಳಿಕೆ ಅಯನೋತ್ಸವ ಸಿರಿಜಾತ್ರಾ ಮಹೋತ್ಸವ ಆ ಪ್ರಯುಕ್ತ ಕುಂಭ ಪೌರ್ಣಮಿಯಿಂದ ಮೊದಲ್ಗೊಂಡು ಮೀನ ಪೌರ್ಣಮಿಯ ಸಹಿತ ಧ್ವಜಾರೋಹಣ ಪರ್ಯಂತ ಸಾಕಾರಗೊಳ್ಳಲಿರುವ ಈ ಸಕಲ ಪುಣ್ಯ ಫಲಪ್ರದ ಉತ್ಸವಾದಿ ಶುಭಾವಸರಗಳಲ್ಲಿ ಸ್ಥಳವಂದಿಗರೆಲ್ಲರೂ ಉಪಸ್ಥಿತರಿದ್ದು, ಸಾನ್ನಿಧ್ಯ ದೇವರುಗಳ ಶ್ರೀಗಂಧ ಪ್ರಸಾದವನ್ನು ಸ್ವೀಕರಿಸುವುದರೊಂದಿಗೆ, ಶ್ರೀ ಸನ್ನಿಧಾನದ ಮಹಿಮಾಪೂರ್ಣ ಮಹದನುಗ್ರಹಕ್ಕೆ ಭಾಜನರಾಗಬೇಕಾಗಿ ವಿನಂತಿಸುವ,

ಸುಹಾಸ್ ಹೆಗ್ಡೆ ನಂದಳಿಕೆ ಚಾವಡಿ ಅರಮನೆ 9845120969
ಕೆದಿಂಜೆ ನಂದಳಿಕೆ ಗ್ರಾಮಸ್ಥರು

ಯನ್. ಸುಂದರರಾಮ ಹೆಗ್ಡೆ ನಂದಳಿಕೆ ಚಾವಡಿ ಅರಮನೆ ಆನುವಂಶಿಕ ಆಡಳಿತ ಮೊಕ್ತೇಸರರು ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯ ನಾಲ್ಕುಸ್ಥಾನ, ನಂದಳಿಕೆ 8749008994

ತಾ.04/04/2023ನೇ ಮಂಗಳವಾರ ಮಧ್ಯಾಹ್ನ ಘಂ.1.00ರಿಂದ ಕೆದಿಂಜೆ ಮೂಲಸ್ಥಾನ ಮುಜಲೊಟ್ಟು ಶ್ರೀ ಉರಿಬ್ರಹ್ಮ ಸನ್ನಿಧಿಯಿಂದ ಹಸಿರುವಾಣಿ ಹೊರೆ, ಫಲಕಾಣಿಕೆಗಳ ಮಹಾಮೆರವಣಿಗೆ ಆರಂಭ.
ಉದಾರಿಗಳ ಸರ್ವರೀತಿಯ ಸಹಾಯಗಳನ್ನು ಕೃತಜ್ಞತಾಪೂರ್ವಕ ಸ್ವೀಕರಿಸಲಾಗುವುದು.

ಕಾರ್ಯಕ್ರಮಗಳು
02/04/2023 ರವಿವಾರ ಬೆಳಿಗ್ಗೆ ಗಂಟೆ 10.00 ರಿಂದ ಕೆದಿಂಜೆ ಮೂಲಸ್ಥಾನ ಮುಜಲೊಟ್ಟು ಶ್ರೀ ಅಬ್ಬಗ- ದಾರಗ ಸಾನ್ನಿಧ್ಯದಲ್ಲಿ ಶ್ರೀ ಕುಮಾರ, ಅಬ್ಬಗ- ದಾರಗ ದರ್ಶನ

03/04/2023 ಸೋಮವಾರ ರಾತ್ರಿ ಗಂಟೆ 10.00ಕ್ಕೆ ಧ್ವಜಾರೋಹಣ, ಮಹಾರಂಗ ಪೂಜೆ, ಉತ್ಸವ ಬಲಿ ಇತ್ಯಾದಿ.

04/04/2023 ಮಂಗಳವಾರ ಬೆಳಗ್ಗೆ 8.30ಕ್ಕೆ ಆರೋಗಣ ಬಲಿ, ಮಧ್ಯಾಹ್ನ ಗಂಟೆ 1.00ರಿಂದ ಶ್ರೀ ಉರಿಬ್ರಹ್ಮ ದೇವರ ಸನ್ನಿಧಿಯಿಂದ ಹಸಿರುವಾಣಿ ಹೊರೆ ಫಲಕಾಣಿಕೆಗಳ ಮಹಾಮೆರವಣಿಗೆಯ ಮೇಳಾರಂಭ ರಾತ್ರಿ ಗಂಟೆ 9.00ಕ್ಕೆ ಒರಿಬಲಿ ಉತ್ಸವ.

05/04/2023 ಬುಧವಾರ ಬೆಳಿಗ್ಗೆ ಗಂಟೆ 9.00ಕ್ಕೆ ಕ್ಷೇತ್ರದ ನಾಲ್ಕು ಬನಗಳ ಸಾನ್ನಿಧ್ಯ ಅಭಿವೃದ್ಧಿಗೆ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಸೇವೆ, (ಪೂಜೆಯೊಂದರ ರೂ. 500/-), ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 9.30ಕ್ಕೆ ಅಂಬೊಡಿ ಜಾತ್ರೆ, ಅಂಬೊಡಿ ಉತ್ಸವ ಬಲಿ.

06/04/2023 ಗುರುವಾರ ನಂದಳಿಕೆ ಅಯನೋತ್ಸವ ಸಿರಿ ಜಾತ್ರಾ ಮಹೋತ್ಸವ ಬೆಳಿಗ್ಗೆ ಗಂಟೆ 8.00ರಿಂದ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಅಬ್ಬಗ- ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ದತಿಯಂತೆ ಪರ್ಯಟಿಸಿ ಮಧ್ಯಾಹ್ನ ಶ್ರೀ ಆಲಡೆಯಲ್ಲಿ ಶ್ರೀ ಅಣ್ಣಪ್ಪ ದರ್ಶನ, ‘ಹಸಿಮಡಲುಪ್ಪರ ಕಟ್ಟೆಪೂಜಾ ಸೇವೆ’. ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ.

ಗಂಟೆ 1.00ರಿಂದ 8.00ರವರೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ರಾತ್ರಿ ಗಂಟೆ 9.00ಕ್ಕೆ ನಂದಳಿಕೆ ಚಾವಡಿ ಅರಮನೆಯಿಂದ ಶ್ರೀ ಹೆಗ್ಡೆಯವರ ಆಗಮನದ ಪರಂಪರಾಗತ ಅದ್ದೂರಿಯ ಮೆರವಣಿಗೆ ರಾತ್ರಿ ಗಂಟೆ 10.30ರಿಂದ ಅಯನೋತ್ಸವ ಬಲಿ, ವೈಭವೋಪೇತ ಕೆರೆದೀಪೋತ್ಸವ. ‘ಶ್ರೀ ಕೆರೆದೀಪ ಕಟ್ಟೆಪೂಜಾ ಮಹೋತ್ಸವ’ ರಾತ್ರಿ ಗಂಟೆ 11.00ರಿಂದ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಾನದಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ- ದಾರಗ ದರ್ಶನಾವೇಶಾಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿಜಾತ್ರೆ. ಪ್ರಾಚೀನ ವಿಧಿವೈಭವಗಳು. ಬೆಳ್ಳಂ ಜಾವ ಗಂಟೆ 4.00ರಿಂದ ಬ್ರಹ್ಮಮಂಡಲ ಸೇವೆ, ಬೆಳಗಿನ ಬಲಿ, ಭೂತ ಬಲಿ ಇತ್ಯಾದಿ.

07/04/2023 ಶುಕ್ರವಾರ ಊರ ಅಯನೋತ್ಸವ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ

08/04/2023 ಶನಿವಾರ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 8.00ಕ್ಕೆ ಬಾಕಿಮಾರು ದೀಪೋತ್ಸವ

09/04/2023 ರವಿವಾರ ಬೆಳಿಗ್ಗೆ ಗಂಟೆ 9.00ರಿಂದ ಶ್ರೀ ದೇವರಿಗೆ ಮಹಾರುದ್ರಯಾಗ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 8.00ಕ್ಕೆ ಮೂಡುಸವಾರಿ ಉತ್ಸವ

10/04/2023 ಸೋಮವಾರ ಶ್ರೀಮನ್ಮಹಾರಥೋತ್ಸವ ಬೆಳಿಗ್ಗೆ 7.30ರಿಂದ ಶ್ರೀ ದೇವರಿಗೆ ಶತರುದ್ರಾಭಿಷೇಕ ಬೆಳಿಗ್ಗೆ 11.45ಕ್ಕೆ ರಥಾರೋಹಣ ಮಧ್ಯಾಹ್ನ 1.00 ಮಹಾ ಅನ್ನಸಂತರ್ಪಣೆ ಸಂಜೆ ಗಂಟೆ 6.00ರಿಂದ ಭೂತರಾಜರಿಗೆ ದಂಡೆ ಬಲಿಸೇವೆ, ರಾತ್ರಿ ಗಂಟೆ 8.00ಕ್ಕೆ ಚಾವಡಿ ಅರಮನೆಯಿಂದ ಹೆಗ್ಡೆಯವರ ಆಗಮನ, ರಾತ್ರಿ ಗಂಟೆ 8.00ಕ್ಕೆ ಮಹಾರಥೋತ್ಸವ ಶ್ರೀ ದೇವರ ಬಲಿ ಉತ್ಸವ, ಕವಾಟಬಂಧನ

11/04/2023 ಮಂಗಳವಾರ ಬೆಳಗ್ಗೆ ಗಂಟೆ 6.30ಕ್ಕೆ ಕವಾಟೋದ್ಘಾಟನೆ, ಬೆಳಿಗ್ಗೆ ಗಂಟೆ 10.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ಮಧ್ಯಾಹ್ನ ಗಂಟೆ 3.30ಕ್ಕೆ ಪಡುಸವಾರಿ, ಅವಭೃತ, ಧ್ವಜಾರೋಹಣ.

12/04/2023 ಬುಧವಾರ ಮಹಾಸಂಪ್ರೋಕ್ಷಣೆ, ಮಂಗಳ ಮಂತ್ರಾಕ್ಷತೆ.

22/04/2023 ಶನಿವಾರ ಸಾಮೂಹಿಕ ಶ್ರೀ ಶನಿಪೂಜಾ ಮಹೋತ್ಸವ, ಅನ್ನಸಂತರ್ಪಣೆ (ಪೂಜೆಯೊಂದರ ರೂ.150/-)

ತಾ.02/05/2023 ಮಂಗಳವಾರ ಶ್ರೀ ರಾಶಿಪೂಜಾ ಮಹೋತ್ಸವ
ಬೆಳಿಗ್ಗೆ ಗಂಟೆ 9.00ರಿಂದ ಮರುದಿನ ಬೆಳಗ್ಗೆ 6.30ರ ತನಕ ನಿರಂತರ ಭಜನಾ ಸೇವೆ.
ಬೆಳಿಗ್ಗೆ ಗಂಟೆ 10.00 ರಿಂದ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಾನದಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ-ದಾರಗ ದರ್ಶನಾರಂಭ
ಗಂಟೆ 12.00ರಿಂದ ಮಹಾಪೂಜೆ, ಮಹೋತ್ಸವ ಬಲಿ, ಪಲ್ಲಪೂಜೆ, ಪ್ರಸಾದ ವಿತರಣೆ.
ಗಂಟೆ 2.00ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ

ದಿನಾಂಕ 21/08/2023ನೇ ಸೋಮವಾರ ಶ್ರೀ ನಾಗರಪಂಚಮಿ ಮಹೋತ್ಸವ.

ಶ್ರೀ ಕ್ಷೇತ್ರ ಭಕ್ತಾದಿಗಳ ಗಮನಕ್ಕೆ 2024 ನೇ ಇಸವಿಯಲ್ಲಿ 25 ಮಾರ್ಚ್ ಸೋಮವಾರ ನಂದಳಿಕೆ ಅಯನೋತ್ಸವ ಸಿರಿಜಾತ್ರಾ ಮಹೋತ್ಸವ.