ಚುನಾವಣಾ ನಿವೃತ್ತಿ ಘೋಷಿಸಿದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ

ಕುಂದಾಪುರ: ಕುಂದಾಪುರ ಮಾತ್ರವಲ್ಲ, ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಸಹೃದಯಿ, ನಿಷ್ಟಾವಂತ ಮತ್ತು ಅತ್ಯಧಿಕ ಜನ ಮನ್ನಣೆಗಳಿಸಿ ಕುಂದಾಪುರದ ವಾಜಪೇಯಿ ಎಂದೇ ಕರೆಯಲ್ಪಡುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಸತತ ಐದು ಬಾರಿ ಚುನಾವಣೆಯಲ್ಲಿ ಗೆದ್ದಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಪಕ್ಷದ ಹೆಸರಿನ ಹಂಗಿಲ್ಲದೆ ಯೂ ತಮ್ಮ ಸ್ವಂತ ಬಲದಿಂದಲೇ ಗೆಲ್ಲುವ ಸಾಮರ್ಥ್ಯ ಉಳ್ಳ ಅಭ್ಯರ್ಥಿ. ಕುಂದಾಪುರದಲ್ಲಿ ಹಾಲಾಡಿಯವರಿಗೆ ಅಪಾರ ಜನ ಬೆಂಬಲವಿದೆ. ಮತದಾರರು ಇದನ್ನು ಯಾವ ರೀತಿ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ […]

ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ: ಜಾಮೀನು ವಿಸ್ತರಣೆ; ಏಪ್ರಿಲ್ 13 ರಂದು ಮುಂದಿನ ವಿಚಾರಣೆ

ನವದೆಹಲಿ: ಸೂರತ್ ಸೆಷನ್ಸ್ ನ್ಯಾಯಾಲಯವು ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜಾಮೀನನ್ನು ವಿಸ್ತರಿಸಿದೆ ಮತ್ತು ಮುಂದಿನ ವಿಚಾರಣೆಗೆ ಏಪ್ರಿಲ್ 13 ರಂದು ದಿನಾಂಕ ನಿಗದಿಪಡಿಸಿದೆ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ತನಗೆ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಮೇಲ್ಮನವಿ ಸಲ್ಲಿಸಿದ ನಂತರ ನ್ಯಾಯಾಲಯವು ಜಾಮೀನು ವಿಸ್ತರಿಸಿದೆ. 2019 ರ ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್ ನಾಯಕ ಇಂದು ಮಧ್ಯಾಹ್ನ 3 ಗಂಟೆಗೆ ಸೂರತ್ ಸೆಷನ್ಸ್ ನ್ಯಾಯಾಲಯವನ್ನು ತಲುಪಿದರು. […]

ದೊಡ್ಡಣ್ಣಗುಡ್ಡೆ: ಏ. 6 ರಂದು ದುರ್ಗಾ ಆದಿಶಕ್ತಿ ಕ್ಷೇತ್ರ ಸತ್ಯನಾರಾಯಣ ವ್ರತ ಕಲ್ಪೋಕ್ತ ಪೂಜೆ ಉದ್ಯಾಪನಾ ಮಹೋತ್ಸವ

ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ವ್ರತ ಕಲ್ಪೋಕ್ತ ಪೂಜೆಯ ಉದ್ಯಾಪನಾ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಏ. 6 ಗುರುವಾರದಂದು ಹುಣ್ಣಿಮೆಯ ಪರ್ವಕಾಲದಲ್ಲಿ ಮಹಾ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಳ್ಳಲಿರುವುದು. ಆ ಪ್ರಯುಕ್ತ ಕ್ಷೇತ್ರದಲ್ಲಿ ಏ. 5 ರಂದು ಗಂಟೆ 5 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಋತ್ವಿಜರ ಸ್ವಾಗತ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ […]

ಏ. 06 ರಂದು ನಂದಳಿಕೆ ಅಯನೋತ್ಸವ ಸಿರಿಜಾತ್ರಾ ಮಹೋತ್ಸವ

ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯ ನಾಲ್ಕುಸ್ಥಾನ ನಂದಳಿಕೆ: ತಾ. 06/04/2023 ನೇ ಗುರುವಾರ ಸತ್ಯದಸಿರಿ ವರಪುಣ್ಯಕ್ಷೇತ್ರ ನಂದಳಿಕೆ ಶ್ರೀ ಮಹಾಲಿಂಗೇಶ್ವರ ಸ್ವಾಮೀ ಪುಣ್ಯ ಸನ್ನಿಧಾನದಲ್ಲಿ ನಂದಳಿಕೆ ಅಯನೋತ್ಸವ ಸಿರಿಜಾತ್ರಾ ಮಹೋತ್ಸವ ಆ ಪ್ರಯುಕ್ತ ಕುಂಭ ಪೌರ್ಣಮಿಯಿಂದ ಮೊದಲ್ಗೊಂಡು ಮೀನ ಪೌರ್ಣಮಿಯ ಸಹಿತ ಧ್ವಜಾರೋಹಣ ಪರ್ಯಂತ ಸಾಕಾರಗೊಳ್ಳಲಿರುವ ಈ ಸಕಲ ಪುಣ್ಯ ಫಲಪ್ರದ ಉತ್ಸವಾದಿ ಶುಭಾವಸರಗಳಲ್ಲಿ ಸ್ಥಳವಂದಿಗರೆಲ್ಲರೂ ಉಪಸ್ಥಿತರಿದ್ದು, ಸಾನ್ನಿಧ್ಯ ದೇವರುಗಳ ಶ್ರೀಗಂಧ ಪ್ರಸಾದವನ್ನು ಸ್ವೀಕರಿಸುವುದರೊಂದಿಗೆ, ಶ್ರೀ ಸನ್ನಿಧಾನದ ಮಹಿಮಾಪೂರ್ಣ ಮಹದನುಗ್ರಹಕ್ಕೆ ಭಾಜನರಾಗಬೇಕಾಗಿ ವಿನಂತಿಸುವ, ಸುಹಾಸ್ ಹೆಗ್ಡೆ ನಂದಳಿಕೆ ಚಾವಡಿ […]

ಫ್ಯಾಶನ್ ಆಧುನಿಕ ಜಗತ್ತಿನ ಆದ್ಯತೆಯಾಗಬೇಕು: ಡಿ ಆರ್ ರಾಜು

ಕಾರ್ಕಳ: ಫ್ಯಾಶನ್ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಮಾನ್ಯತೆಯನ್ನು ಪಡೆಯುತ್ತಿದೆ. ಜನರು ಫ್ಯಾಶನ್ ಲೋಕಕ್ಕೆ ಮರಳಾಗುತ್ತಿದ್ದಾರೆ. ಆದರೂ ಗ್ರಾಮಾಂತರ ಜನರಲ್ಲಿ ಫ್ಯಾಶನ್ ಬಗ್ಗೆ ಜನರಿಗೆ ಜ್ಞಾನದ ಕೊರತೆ ಇದೆ. ಕೇವಲ ತುಂಡು ಬಟ್ಟೆಯನ್ನು ಧರಿಸುವುದು ಮಾತ್ರ ಫ್ಯಾಶನ್ ಅಲ್ಲ. ಭಾರತೀಯ ವಿವಿಧ ಸಂಸ್ಕ್ರತಿಯನ್ನು ಬಿಂಬಿಸುವ ಬಟ್ಟೆಗಳನ್ನು ಧರಿಸುವುದು ನಿಜವಾದ ಫ್ಯಾಶನ್. ಈ ಫ್ಯಾಶನ್ ಆಧುನಿಕ ಜಗತ್ತಿನ ಆದ್ಯತೆಯಾಗಬೇಕು ಎಂದು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ ಆರ್ ರಾಜು ತಿಳಿಸಿದರು ಅವರು ಸುಮೇಧಾ ಫ್ಯಾಶನ್ ಇನ್ಟಿಟ್ಯೂಟ್ […]