ಬೆಂಗಳೂರು: ಬಹುನಿರೀಕ್ಷಿತ ʻಪಿಂಕ್ ಲೈನ್ʼ ನಮ್ಮ ಮೆಟ್ರೋ (Pink Line Metro) ರೈಲು ಮಾರ್ಗವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಮತ್ತೊಂದು ಖ್ಯಾತಿಗೆ ಬೆಂಗಳೂರು ನಗರ ಪಾತ್ರವಾಗಲಿದೆ.
ಹೌದು. ಇಂದಿನಿಂದ ದೆಹಲಿ (Delhi) ಬಳಿಕ ಈಗ ದೇಶದ 2ನೇ ದೊಡ್ಡ ಮೆಟ್ರೋ ಜಾಲ ಹೊಂದಿದ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಲಿದೆ. ಮುಂಬೈ ಹಿಂದಿಕ್ಕಿ 2ನೇ ಸ್ಥಾನಕ್ಕೆ ಬೆಂಗಳೂರು ತಲುಪಿದಂತಾಗಲಿದೆ. ದೆಹಲಿ ಬಳಿಕ 2ನೇ ಸ್ಥಾನಕ್ಕೆ ಬೆಂಗಳೂರು ಏರಲಿದೆ. ಅತಿ ವೇಗವಾಗಿ ಬೆಳೆದ ಮೆಟ್ರೋ ಎಂಬ ಖ್ಯಾತಿ ಕೂಡ ಬೆಂಗಳೂರಿನ ಹೆಗಲಿಗೇರಲಿದೆ.
ಯಾವ ನಗರ ಎಷ್ಟನೇ ಸ್ಥಾನದಲ್ಲಿದೆ?
– ದೆಹಲಿ – ದೆಹಲಿ ಮೆಟ್ರೋ – 374.5 ಕಿ.ಮೀ.
– ಬೆಂಗಳೂರು -ನಮ್ಮ ಮೆಟ್ರೋ – 103.6 ಕಿ.ಮೀ.
– ಮುಂಬೈ – ಮುಂಬೈ ಮೆಟ್ರೋ – 102 ಕಿ.ಮೀ (ಮುಂಬೈ – 91 ಕಿ.ಮೀ. ಹಾಗೂ ನವಿ ಮುಂಬೈ – 11.1 ಕಿ.ಮೀ.) ಸೇರಿ.
– ಕೋಲ್ಕತ್ತಾ – ಕೋಲ್ಕತ್ತಾ ಮೆಟ್ರೋ – 73 – 74 ಕಿ.ಮೀ.
– ಹೈದರಾಬಾದ್ – ಹೈದರಾಬಾದ್ ಮೆಟ್ರೋ – 69 ಕಿ.ಮೀ.
– ಚೆನ್ನೈ – ಚೆನ್ನೈ ಮೆಟ್ರೋ – 68.7 ಕಿ.ಮೀ.
– ಅಹಮದಾಬಾದ್ – ಗಾಂಧಿನಗರ – ಅಹಮದಾಬಾದ್ ಮೆಟ್ರೋ – 65 ಕಿ.ಮೀ.
– ನಾಗ್ಪುರ- ನಾಗ್ಪುರ ಮೆಟ್ರೋ – 38.2 ಕಿ.ಮೀ.
– ಪುಣೆ – ಪುಣೆ ಮೆಟ್ರೋ – 33 ಕಿ.ಮೀ
ಗುಲಾಭಿ ಮಾರ್ಗದ ನಮ್ಮ ಮೆಟ್ರೋ ರೈಲು ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಪಿಂಕ್ ಲೈನ್ ಮೆಟ್ರೋವನ್ನ ಲೋಕಾರ್ಪಣೆ ಮಾಡಲಿದ್ದಾರೆ. ತಾವರೆಕರೆ ಮೆಟ್ರೋ ನಿಲ್ದಾಣ ಅಂದರೆ ಎಸ್.ಜಿ ಪಾಳ್ಯ ನಿಲ್ದಾಣದಿಂದ ಕಾಳೇನ ಅಗ್ರಹಾರವರೆಗಿನ ಪಿಂಕ್ ಲೈನ್ ಮಾರ್ಗವನ್ನು ಮೋದಿ ಉದ್ಘಾಟಿಸಲಿದ್ದಾರೆ.
6 ನಿಲ್ದಾಣಗಳಿರುವ 7.5 ಕಿಮೀ ಒಳಗೊಂಡ ಮಾರ್ಗ ಉದ್ಘಾಟನೆ
ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಲಿರುವ ಪಿಂಕ್ ಲೈನ್ ಮೆಟ್ರೋ ಮಾರ್ಗವು ಬರೋಬ್ಬರಿ 7.5 ಕಿಮೀ ಉದ್ದವಿದ್ದು, 6 ನಿಲ್ದಾಣಗಳನ್ನ ಒಳಗೊಂಡಿರಲಿದೆ. ಕಾಳೇನ ಅಗ್ರಹಾರ, ಹುಳಿಮಾವು, ಬಿಳೇಕಲ್ಲಹಳ್ಳಿ ಐಐಎಂಬಿ, ಎನ್.ಎಸ್ ಪಾಳ್ಯ ಜೆಪಿ ನಗರ 4ನೇ ಹಂತ, ಜಯದೇವ, ಎಸ್ಜಿ ಪಾಳ್ಯ ಮೆಟ್ರೋ ನಿಲ್ದಾಣ… ಹೀಗೆ 6 ನಿಲ್ದಾಣಗಳನ್ನು ಈ ಪಿಂಕ್ ಲೈನ್ ಒಳಗೊಂಡಿದೆ. ಇನ್ನು ಮೆಟ್ರೋ ಉದ್ಘಾಟನೆಗಾಗಿ ಇಂದು ಬೆಳಗ್ಗೆ 10ಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಪ್ರಧಾನಿ ಮೋದಿ ಕಾರ್ಯಕ್ರಮದ ಮಿನಿಟ್ To ಮಿನಿಟ್ ಡೀಟೆಲ್ಸ್
* ಬೆಳಗ್ಗೆ 7:20 – ದೆಹಲಿಯಿಂದ ಮೋದಿ ನಿರ್ಗಮನ
* ಬೆಳಗ್ಗೆ 10:05 – ದೆಹಲಿಯಿಂದ ಎಚ್ಎಎಲ್ಗೆ ಮೋದಿ
* ಬೆಳಗ್ಗೆ 10:45 – ಜಿಗಣಿ ಬಳಿಯ ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವದಲ್ಲಿ ಭಾಗಿ
* ಮಧ್ಯಾಹ್ನ 12.40 – ಎಸ್ಜಿ ಪಾಳ್ಯ ಮೆಟ್ರೋ ನಿಲ್ದಾಣಕ್ಕೆ ಆಗಮನ
* ಮಧ್ಯಾಹ್ನ 12.45 – ನಮ್ಮ ಮೆಟ್ರೋ ಪಿಂಕ್ ಲೈನ್ ಲೋಕಾರ್ಪಣೆ
* ಮೆಟ್ರೋ ಉದ್ಘಾಟನೆ ಬಳಿ ಮೆಟ್ರೋದಲ್ಲಿ ಮೋದಿ ಸಂಚಾರ
* ಮಧ್ಯಾಹ್ನ 12.45ರಿಂದ 1.05ರವರೆಗೆ ಮೆಟ್ರೋದಲ್ಲಿ ಸಂಚಾರ
* ಮಧ್ಯಾಹ್ನ 1.15 – ಐಐಎಂಬಿ ಆಡಿಟೋರಿಯಂನಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ
* ಮಧ್ಯಾಹ್ನ 2 – ವಂದೇ ಭಾರತ್ ರೈಲಿಗೆ ಚಾಲನೆ
* ಮಧ್ಯಾಹ್ನ 2.30 – ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ
* ಮಧ್ಯಾಹ್ನ 3.30 – ಮೈಸೂರಿನ ಕೆಸಿ ಲೇಔಟ್ ಪಾರ್ಕ್ನಲ್ಲಿ `ಭಾರತ್ ವ್ಯಾನ್’ ಕಾರ್ಯಕ್ರಮ
* ಸಂಜೆ 4 – ಮೈಸೂರು ಕಾಸ್ಮಾಸ್ ತಾರಾಲಯ ಉದ್ಘಾಟನೆ
* ಸಂಜೆ 6.05 – ಮೈಸೂರಿನಿಂದ ನೇರವಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಮೋದಿ ಸ್ವಾಗತಕ್ಕೆ ಎಸ್.ಜಿ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ.















