ಉಡುಪಿ: ಮಲಬಾರ್ ಗೋಲ್ಡ್ & ಡೈಮಂಡ್ಸ್ ಗೆ ಮಹಿಳೆಯೊಬ್ಬರು ನಕಲಿ ಚಿನ್ನವನ್ನು ನೀಡಿ ವಂಚಿಸಿರುವ ಘಟನೆ ಮಂಗಳವಾರ ನಡೆದಿದೆ.
ಕಳೆದ ಮಂಗಳವಾರ ಸರಿತಾ ಪಂಡೆ ಎಂಬ ಹೆಸರು ಹೇಳಿಕೊಂಡು ಬಂದ ಮಹಿಳೆ 26.440 ಗ್ರಾಂ ಚಿನ್ನದ ಸರವನ್ನು ಕೊಟ್ಟು ಬದಲಿಗೆ ಒಂದು ಲಾಕೇಟ್, ಉಂಗುರ, ಕಿವಿಯೋಲೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅದನ್ನು ಮೇಶಿನ್ ನಲ್ಲಿ ಮ್ಯಾನೇಜರ್ ಪರೀಕ್ಷೆ ಮಾಡಿದ ಸಂದರ್ಭದಲ್ಲಿ ಆ ಚಿನ್ನದ ಸರವು 91.6 ಪರಿಶುದ್ದತೆಯನ್ನು ತೋರಿಸುತ್ತಿದ್ದು ಆ ಸರದಲ್ಲಿ ಹಾಲ್ ಮಾರ್ಕ್ಸ್ ಸಹ ಇರುವುದನ್ನು ಖಚಿತ ಪಡಿಸಿ 14.01 ಗ್ರಾಂ ಪೆಂಡೆಂಟ್, 4.0430 ಗ್ರಾಂ ಕಿವಿಯೋಲೆ ಹಾಗೂ 3.130 ಗ್ರಾಂ ಅನ್ ಕಟ್ ಡೈಮಂಡ್ ಉಂಗುರವನ್ನು ಖರೀದಿ ಮಾಡಿ ಉಳಿದ 2,750/- ರೂಪಾಯಿಯನ್ನು ಗ್ರಾಹಕರಾದ ಮಹಿಳೆಗೆ ನೀಡಿರುತ್ತಾರೆ. ಅದೇ ದಿನ ರಾತ್ರಿ ಮತ್ತೆ ಮರು ಪರೀಕ್ಷೆಯನ್ನು ಮಾಡುವಾಗ ಆ ಸರದಲ್ಲಿ ತಾಮ್ರದ ಅಂಶವು ಒಳಗಡೆ ಇರುವುದು ಕಂಡು ಬಂದಿದ್ದು, ಈ ಮಹಿಳೆಯು ಸಂಸ್ಥೆಗೆ ಹಾಲ್ ಮಾರ್ಕ ಚಿನ್ನವೆಂದು ನಂಬಿಸಿ ಮೋಸ ಮಾಡಿರುವುದಾಗಿ ಸಂಸ್ಥೆಯ ಮ್ಯಾನೇಜರ್ ಹಫೀಜ್ ರೆಹಮಾನ್ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.