ಕಾರ್ಕಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಹಾಗೂ ಬೆಳಕು ಟ್ರಸ್ಟ್, ಮುಡಾರು ಗ್ರಾಮ ಬಜಗೋಳಿ ಇದರ ಆಶ್ರಯದಲ್ಲಿ ಇರ್ವತ್ತೂರು ಎಂಜಾಯ್ ಫ್ರೆಂಡ್ಸ್ ಸಭಾಂಗಣದಲ್ಲಿ ವಸಂತಿ ಕಡಂಬಳ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇರ್ವತ್ತೂರು ಗ್ರಾ, ಪಂ. ಅಧ್ಯಕ್ಷೆ ಪುಷ್ಪ ದೇವಾಡಿಗ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಎಂಜಾಯ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ನಿತಿನ್, ಬೆಳಕು ಟ್ರಸ್ಟ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಓಂ ಸಾಯಿ ಕ್ಲಬ್ ಬಜಗೋಳಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಎಂಜಾಯ್ ಫ್ರೆಂಡ್ಸ್ ಕ್ಲಬ್ ಸದಸ್ಯ ರಾಜೇಂದ್ರ ಪೂಜಾರಿ ಉಪಸ್ಥಿತರಿದ್ದರು. ವಸಂತಿ ಕಡಂಬಳ ವಂದಿಸಿದರು.