ಮೀನುಗಾರರ ಪತ್ತೆ ಕಾರ್ಯದಲ್ಲಿ ತೊಡಗಿಕೊಳ್ಳಿ, ಕರ್ನಾಟಕದ ನೆರೆ ರಾಜ್ಯಗಳಿಗೆ ಕೇಂದ್ರದ ಸೂಚನೆ

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿರುವ ಏಳು ಮಂದಿ ಮೀನುಗಾರರ ರಕ್ಷಣಾ ಕಾರ್ಯಾಚರಣೆಯಲ್ಲಿ ಕರ್ನಾಟಕದ ನೆರೆ ರಾಜ್ಯಗಳು ಕೂಡ ತೊಡಗಿಸಿಕೊಳ್ಳಬೇಕೆಂದು  ಕೇಂದ್ರದ ಗೃಹ ಸಚಿವಾಲಯ ಸೂಚನೆ ನೀಡಿದೆ. ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಕಾರ್ಯ ಸೂಕ್ತ ರೀತಿಯಲ್ಲಿ ಸಹಕಾರ ನೀಡುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್‌ ನೇತೃತ್ವದಲ್ಲಿ ಮೀನುಗಾರರ ಮುಖಂಡರು ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಕೇಂದ್ರ ಗೃಹ ಸಚಿವಾಲಯವು ತನ್ನ ಅಧೀನದಲ್ಲಿ ಬರುವ […]

ಮುಡಾರು:ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟನೆ

ಕಾರ್ಕಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಹಾಗೂ ಬೆಳಕು ಟ್ರಸ್ಟ್, ಮುಡಾರು ಗ್ರಾಮ ಬಜಗೋಳಿ ಇದರ ಆಶ್ರಯದಲ್ಲಿ ಇರ್ವತ್ತೂರು ಎಂಜಾಯ್ ಫ್ರೆಂಡ್ಸ್ ಸಭಾಂಗಣದಲ್ಲಿ ವಸಂತಿ ಕಡಂಬಳ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇರ್ವತ್ತೂರು ಗ್ರಾ, ಪಂ. ಅಧ್ಯಕ್ಷೆ ಪುಷ್ಪ ದೇವಾಡಿಗ ಶುಭ ಹಾರೈಸಿದರು.   ಮುಖ್ಯ ಅತಿಥಿಗಳಾಗಿ ಎಂಜಾಯ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ನಿತಿನ್, ಬೆಳಕು ಟ್ರಸ್ಟ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಓಂ ಸಾಯಿ ಕ್ಲಬ್ ಬಜಗೋಳಿ ಅಧ್ಯಕ್ಷ […]

ಕೋಟ ಜೋಡಿ ಕೊಲೆಗೆ ಪೊಲೀಸ್ ನಂಟು: ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ

ಕುಂದಾಪುರ: ಜಿಲ್ಲೆಯನ್ನೇ ತಲ್ಲಣಗೊಳಿಸಿದ ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೇದೆಗಳನ್ನು ಬಂಧಿsಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.  ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಬಂಧಿತ ಆರೋಪಿಗಳು. ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ. ಕೊಲೆಗಾರರಿಗೆ ಸಕಲ ವ್ಯವಸ್ಥೆ […]

ಕೋಟ ಜೋಡಿ ಕೊಲೆ ಪ್ರಕರಣದಲ್ಲಿ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ:ಸೊರಕೆ

ಕುಂದಾಪುರ: ಯಾವೊಬ್ಬ ವ್ಯಕ್ತಿ ಸತ್ತರೂ ಸ್ಥಳಕ್ಕೆ ಧಾವಿಸಿ ಆತ ಯಾವ ಜಾತಿ, ಧರ್ಮ ಎಂದು ವಿಚಾರಿಸಿಕೊಂಡು ಬೆಂಕಿ ಹಚ್ಚುವ ಕೆಲಸ ಮಾಡಿದವರೇ ಇಂದು ಕೋಟ ಜೋಡಿ ಕೊಲೆ ಕೃತ್ಯವನ್ನು ಮುಚ್ಚಿಡುವ ಕೆಲಸಕ್ಕೆ ಮುಂದಾಗಿದ್ದಾರೆ. ಕೋಟ ಜೋಡಿ ಕೊಲೆ ಪ್ರಕರಣದಲ್ಲಿ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು. ಬ್ಲಾಕ್ ಕಾಂಗ್ರೆಸ್ ಕೋಟ ವತಿಯಿಂದ ಜೋಡಿ ಕೊಲೆ ಪ್ರಕರಣ ಖಂಡಿಸಿ ಕೊಲೆಯಲ್ಲಿ ಭಾಗಿಯಾದ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರಿ ರಾಜೀನಾಮೆಗೆ ಆಗ್ರಹಿಸಿ […]

ಮಡಾಮಕ್ಕಿ ಮಹತೋಭಾರ ಶ್ರೀ ವೀರಭದ್ರ ಸನ್ನಿಧಿಯಲ್ಲಿ‌ ಸಂಭ್ರಮದ ಜಾತ್ರಾಮಹೋತ್ಸವ

ಹೆಬ್ರಿ: ಹೆಬ್ರಿ‌ ತಾಲೂಕಿನ ಮಡಾಮಕ್ಕಿ ಶ್ರೀ ಮಹತೋಭಾರ ವೀರಭದ್ರ ದೇವಸ್ಥಾನದ ವಾರ್ಷಿಕ ಜಾತ್ರಮಹೋತ್ಸವ ಹಾಗೂ ಕೆಂಡಸೇವೆ ಫೆ. 8ರಂದು ವಿಜೃಂಭಣೆಯಿಂದ ನಡೆಯಿತು.  ಆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಧಿವಿಧಾನಗಳು‌ ನಡೆಯಿತು. ಸಾವಿರಾರು ಮಂದಿ‌ ಭಕ್ತಾದಿಗಳು ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿದ್ದರು.