ಬೆಂಗಳೂರು: ಮಾರಕಾಸ್ತ್ರಗಳಿಂದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್ ನ ಗಂಗೋಡನಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಗಂಗೋಡನಹಳ್ಳಿಯ ಸಾಹಿಲ್ ಕೊಲೆಯಾದ ವ್ಯಕ್ತ. ಸಾಹೀಲ್ ಮನೆಯ ಸಮೀಪದ ಮಾರಮ್ಮನ ದೇವಸ್ಥಾನ ಬಳಿ ರಾತ್ರಿ 12 ಗಂಟೆಯ ವೇಳೆ ಮೂವರು ಯುವಕರ ನಡುವೆ ಕ್ಲುಲಕ ಕಾರಣಕ್ಕೆ ಜಗಳ ಉಂಟಾಗಿದೆ. ಗಲಾಟೆಯು ವಿಕೋಪಕ್ಕೆ ತಿರುಗಿದಾಗ, ಎದುರಾಳಿಗಳು ಸಾಹಿಲ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸಾಹಿಲ್ ನನ್ನು ಕಿಮ್ಸ್ ಅಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.