ಮುನಿಯಾಲ್ ಆಯುರ್ವೇದ ಕಾಲೇಜು ವತಿಯಿಂದ ಜುಲೈ 1 ರಿಂದ 7ರ ವರೆಗೆ ಮಕ್ಕಳಿಗಾಗಿ ಉಚಿತ ತಪಾಸಣಾ ಶಿಬಿರ

ಮಣಿಪಾಲ: ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯು ಕಳೆದ ಇಪ್ಪತೈದು ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಸಾವಿರಾರು ರೋಗಿಗಳಿಗೆ ಪ್ರಾಚೀನ ಆಯುರ್ವೇದ ಶಾಸ್ತ್ರದಿಂದ ಸೇವೆ ಸಲ್ಲಿಸಿ ಆಶಾಕಿರಣವಾಗಿದೆ.

ಈ ನಿಟ್ಟಿನಲ್ಲಿ ತನ್ನ ರಜತ ಮಹೋತ್ಸವದ ಸಂಭ್ರಮದ ಅಂಗ ವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಜುಲೈ 1 ರಿಂದ 7 ನೇ ತಾರೀಕಿನವರೆಗೆ ಬೆಳಿಗ್ಗೆ 9.00 ರಿಂದ ಅಪರಾಹ್ನ 4.00 ರವರೆಗೆ ಮಕ್ಕಳ ಉಸಿರಾಟ ಸಂಬಂಧಿ ರೋಗಗಳ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ–ಕುಮಾರ ಕಲ್ಪವನ್ನು ಮಕ್ಕಳ ವಿಭಾಗದಿಂದ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಉಚಿತ ತಪಾಸಣಾ ಮತ್ತು ಔಷಧ ಚಿಕಿತ್ಸೆಯು ಲಭ್ಯವಿದ್ದು ಇನ್ನಿತರ ಚಿಕಿತ್ಸೆಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಶ್ವಾಸಕೋಶ ಸಂಬಂಧಿ ಕಾಯಿಲೆಗಳಾದ ಕೆಮ್ಮು, ಶೀತ, ಅಸ್ತಮಾ,ನೆಗಡಿ, ಅಲರ್ಜಿ ಸೈನಸೈಟಿಸ್, ಗಂಟಲು ನೋವು ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಶಿಬಿರದ ಹೆಚ್ಚಿನ ಮಾಹಿತಿಗಾಗಿ 8123403233 ಸಂಪರ್ಕಿಸಿ.