ಶಿವಣ್ಣನ ಬರ್ತ್ ಡೇಗೆ ‘BIG DADDY’‌ ಮೂಲಕ ಸ್ಪೆಷಲ್​ ಗಿಫ್ಟ್​​ ರೆಡಿ

“July 12 “BD”(BIG DADDY)” : ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು ‘ಘೋಸ್ಟ್’. ಶೀರ್ಷಿಕೆಯಿಂದಲೇ ಕನ್ನಡ ಮಾತ್ರವಲ್ಲದೇ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಸೌಂಡ್​ ಮಾಡುತ್ತಿರುವ ಸಿನಿಮಾ. ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಬ್ಲಾಕ್​ ಬಸ್ಟರ್ ಸಿನಿಮಾ ಬರಲಿದೆ ಎನ್ನುವ ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಿರೋ ಚಿತ್ರವಿದು. ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಘೋಸ್ಟ್‌ ಬಹುತೇಕ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಮೋಷನ್ […]

ಇದೇ ಮೊದಲ ಬಾರಿಗೆ ತೆಲುಗಿನಲ್ಲೇ ತೆಲಂಗಾಣ ಹೈಕೋರ್ಟ್‌ ತೀರ್ಪು

ಹೈದರಾಬಾದ್ (ತೆಲಂಗಾಣ): ಹಿರಿಯ ನ್ಯಾಯಮೂರ್ತಿ ಪಿ.ನವೀನ್ ರಾವ್ ಮತ್ತು ನ್ಯಾಯಮೂರ್ತಿ ನಾಗೇಶ್ ಭೀಮಪಾಕ ಅವರನ್ನೊಳಗೊಂಡ ಪೀಠವು ಆಸ್ತಿ ವಿವಾದದ ಪ್ರಕರಣದಲ್ಲಿ ಮಂಗಳವಾರ ತೆಲುಗಿನಲ್ಲಿ 44 ಪುಟಗಳ ತೀರ್ಪು ಪ್ರಕಟಿಸಿದೆನ್ಯಾಯಾಂಗದ ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲೂ ಪ್ರಕಟವಾಗಬೇಕೆಂಬ ಬಲವಾದ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದರ ನಡುವೆ ಇದೇ ಮೊದಲ ಬಾರಿಗೆ ತೆಲಂಗಾಣ ಹೈಕೋರ್ಟ್ ತೆಲುಗಿನಲ್ಲೇ ತೀರ್ಪು ನೀಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸ್ಥಳೀಯ ಭಾಷೆಗಳ ಪ್ರಾಮುಖ್ಯತೆಯನ್ನು ಗಮನಿಸಿ ಇತ್ತೀಚೆಗೆ ನ್ಯಾಯಾಲಯಗಳು ಮಾತೃಭಾಷೆಯತ್ತ ಒಲವು ತೋರಲು ಪ್ರಾರಂಭಿಸಿವೆ. ಸುಪ್ರೀಂ […]

ಕಾರ್ಕಳ ಕಾಂಗ್ರೆಸ್ ಸರ್ಕಾರಿ ಆಸ್ಪತ್ರೆಯ ವಿಚಾರವಾಗಿ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ: ನವೀನ್‌ ನಾಯಕ್‌

ಕಾರ್ಕಳ: ಒಬ್ಬ ಜನಪ್ರತಿನಿಧಿಯಾಗಿ ನಾಲ್ಕು ಬಾರಿ ಆಯ್ಕೆಯಾಗಿ ಜನ ಸೇವೆ ಮಾಡಿದ ಶಾಸಕರಿಗೆ, ಅಧಿಕಾರಗಳ ಸಭೆಯನ್ನು ಎಲ್ಲಿ ಯಾವಾಗ ಮಾಡಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ, ಒಬ್ಬ ಗ್ರಾಮ ಪಂಚಾಯತ್ ಸದಸ್ಯನ ಅರ್ಹತೆಯೂ ಇಲ್ಲದ ಕಾಂಗ್ರೆಸ್ಸಿನ ಪ್ರತಿನಿಧಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ ರಿವೀವ್ಯು ಸಭೆ ನಡೆಸಿದ ನಿಮ್ಮಂತವರಿಂದ ಪಾಠ ಕಲಿಯ ಬೇಕಾಗಿಲ್ಲ ಎಂದು ನವೀನ್‌ ನಾಯಕ್‌ ಹೇಳಿದರು. ಅಂದು ಕಾಂಗ್ರೆಸ್ಸಿನ ಸುಧೀರ್ಘ ಆಡಳಿತಾವಧಿಯಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲದೆ, ಕಟ್ಟಡಗಳಿಲ್ಲದೆ, ಸ್ವಚ್ಛತೆಯು ಸಹ ಇಲ್ಲದೆ  […]

ಹಿರಿಯಡಕದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನೂತನ ಕಚೇರಿ ಉದ್ಘಾಟನೆ

ಕಾಪು: ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಹಿರಿಯಡಕ ಶಾಸಕರ ಕಚೇರಿ ಉದ್ಘಾಟನಾ ಸಮಾರಂಭ ಇಂದು ನಡೆಯಿತು. ಶಾಸಕರು ಅಂಜಾರು, ಮರ್ಣಿ, ಮಣಿಪುರ, ಬೊಮ್ಮರಬೆಟ್ಟು ಗ್ರಾಮದ ಒಟ್ಟು 17 ಫಲಾನುಭವಿಗಳಿಗೆ 94/ಸಿ ಹಾಗೂ 94/ಸಿ.ಸಿ ಅಡಿ ಹಕ್ಕುಪತ್ರ ವಿತರಿಸಿ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನದ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿದ ಅವರು ವಾರದಲ್ಲಿ ಪ್ರತಿ ಸೋಮವಾರ ಹಿರಿಯಡಕ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುವುದಾಗಿ ತಿಳಿಸಿದರು. ಈ […]