ಕಾರ್ಕಳ: ಕಾರ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಅವರಿಂದ ಕೊನೆ ಕ್ಷಣದ ಪ್ರಚಾರ ಸಭೆ ಮತ್ತು ಮತಯಾಚನೆ ಭರ್ಜರಿಯಾಗಿ ನಡೆಯಿತು.
ಹೆಬ್ರಿ ತಾಲೂಕಿನ ಗೇರುಬೀಜ ಕಾರ್ಖಾನೆ, ಬಜಗೋಳಿಯ ಪೇಟೆ, ಬೆಳ್ಮಣ್ ಪೇಟೆ, ಇನ್ನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಇನ್ನಾ ಪೇಟೆ, ಹೆಬ್ರಿ ತಾಲೂಕಿನ ಶಿವಪುರದ ಕೋಮಲ್ ಗೇರುಬೀಜ ಕಾರ್ಖಾನೆ, ಮೊದಲಾದ ಕಡೆಗಳಲ್ಲಿ ಮುನಿಯಾಲು ಉದಯ್ ಶೆಟ್ಟಿ ಅವರು ಭರ್ಜರಿ ಪ್ರಚಾರ ನಡೆಸಿ,ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ತನ್ನನ್ನು ಬೆಂಬಲಿಸಿ ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿಸಿಕೊಂಡರು.