ಮಂಗಳೂರು/ಉಡುಪಿ: ಹೆಬ್ರಿಯ ದಕ್ಷ ವಲಯ ಅರಣ್ಯಾಧಿಕಾರಿ ಮುನಿರಾಜು ಅವರ ವರ್ಗಾವಣೆ ತಡೆಕೋರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಹೆಬ್ರಿ ತಾಲೂಕು ವಲಯ ಅರಣ್ಯಾಧಿಕಾರಿಯಾಗಿರುವ ಮುನಿರಾಜ್, ದಕ್ಷ ಅರಣ್ಯಾಧಿಕಾರಿಯಾಗಿ ಪರಿಸರಕ್ಕೆ ಕಂಟಕವಾಗಿರುವ ಪ್ರಭಾವಿ ರಾಜಕಾರಣಿಗಳನ್ನು ಯಾವ ಮುಲಾಜು ಇಲ್ಲದೇ ಮಟ್ಟ ಹಾಕಿದ್ದರು. ತಾಲೂಕಿನಲ್ಲಿ ಪ್ರಾಮಾಣಿಕವಾಗಿ, ಪರಿಸರದ ಪರ ಹೋರಾಡಿದ ಈ ಯುವ ಅಧಿಕಾರಿಗೀಗ ಉಡುಪಿ ಜಿಲ್ಲೆಯ ಶಾಸಕರುಗಳು ಸೇರಿ ವರ್ಗಾವಣೆ ಮಾಡಿಸಿದ್ದಾರೆ ಎನ್ನುವುದು ವಿವಿಧ ಮೂಲಗಳಿಂದ ಸಾಬೀತಾಗಿದೆ.
ಈ ಅಧಿಕಾರಿಯ ಕಾರ್ಯ ದಕ್ಷತೆ ಮತ್ತು ಕರ್ತವ್ಯ ನಿಷ್ಠೆಗೆ ಬೆಲೆ ಕೊಡದ ರಾಜಾಕಾರಣಿಗಳು ಇವರನ್ನು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಕಳೆದ 17 ವರ್ಷದ ಅವಧಿಯಲ್ಲಿ 16 ಬಾರಿ ವಿವಿಧ ಪ್ರದೇಶಗಳಿಂದ ವರ್ಗಾವಣೆ ಮಾಡಿದ್ದಾರೆ. ಹೆಬ್ರಿ ತಾಲೂಕಿಗೆ ಇವರು ಅಧಿಕಾರ ಹಿಡಿದ ಆರೇ ತಿಂಗಳಲ್ಲಿ ವರ್ಗಾವಣೆ ಮಾಡಿಸಿದ್ದಾರೆ. ಅಧಿಕಾರಿಗಳನ್ನು ಉಳಿಸಿಕೊಳ್ಳುವುದು ಪ್ರಜಾಪ್ರಭುತ್ವದ ಪ್ರಜೆಗಳ ಕರ್ತವ್ಯ. ಇಂತಹ ಅಧಿಕಾರಿಯನ್ನು ವರ್ಗಾವಣೆಯಾಗಲು ನಾವು ಬಿಡಬಾರದು ಎನ್ನುವ ಉದ್ದೇಶದಿಂದ ರಾಷ್ಟ್ರೀಯ ಪರಿಸರ ಒಕ್ಕೂಟ-(NECF)ನ ಸದಸ್ಯರು ತಮ್ಮ ಹಕ್ಕೊತ್ತಾಯ ಸರಕಾರದ ಮುಖ್ಯಸ್ಥರಿಗೆ ಮಂಡಿಸಲು ಈಗಾಗಲೇ ವಿವಿಧ ವೇದಿಕೆ ಸಿದ್ದಪಡಿಸಿಕೊಂಡಿದ್ದಾರೆ.
ದಕ್ಷ ಅಧಿಕಾರಿಯ ಕುರಿತು (NECF) ತಯಾರಿಸಿರುವ ವಿಡಿಯೋ ಇಲ್ಲಿದೆ:
ಪ್ರಾಮಾಣಿಕ ಅಧಿಕಾರಿಯನ್ನು ರಾಜಕೀಯ ಕಪಿಮುಷ್ಟಿ ಬಳಸಿ ವರ್ಗಾವಣೆ ಮಾಡಿರುವ ನಡೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ರಾಷ್ಟ್ರೀಯ ಪರಿಸರ ಒಕ್ಕೂಟ-(NECF)ನ ಮುಖ್ಯಸ್ಥರಾದ ಶಶಿಧರ್ ಶೆಟ್ಟಿ , ಮುನಿರಾಜು ಅವರಂತಹ ಅನೇಕ ಯುವ ಪ್ರತಿಭೆಗಳು ಕಾನೂನು ಬದ್ದವಾಗಿ ಕರ್ತವ್ಯ ನಿರ್ವಹಿಸಲು ಸರಕಾರಿ ಉದ್ಯೋಗಕ್ಕೆ ಸೇರುತ್ತಾರೆ, ಆದರೆ ಉಡುಪಿಯ ಶಾಸಕ ರಘುಪತಿ ಭಟ್, ಅರಗ ಜ್ನಾನೇಂದ್ರ, ಹಾಲಪ್ಪ, ರಮೇಶ್ ಕುಮಾರ್ ಮೊದಲಾದ ರಾಜಕಾರಣಿಗಳು ಮತ್ತು ಜಿಲ್ಲೆಯ ಕೆಲ ಶಾಸಕರುಗಳು ತಮ್ಮ ಕಾನೂನು ಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡದ ಮುನಿರಾಜುರಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡುವ, ಸಾರ್ವಜನಿಕವಾಗಿ ನಿಂದಿಸುವ, ಅವಹೇಳನ ಮಾಡುವ ಕೆಲಸ ಮಾಡುತ್ತಿರುವುದರಿಂದ ಆಡಳಿತ ವ್ಯವಸ್ಥೆಯನ್ನು ಅಳಿದುಳಿದ 3-4% ದಕ್ಷ ಅಧಿಕಾರಿಗಳು ಕೂಡ ಈ ದರಿದ್ರ ವ್ಯವಸ್ಥೆಗೆ ಬೇಸರ ಗೊಂಡು ಕರ್ತವ್ಯ ನಿಷ್ಠೆಯಿಂದ ಹಿಂದೆ ಸರಿಯುವ ಸಂಧರ್ಭ ಬಂದೊದಗತೊಡಗಿದೆ “ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಳು ರಾಜಕೀಯ ವ್ಯವಸ್ಥೆಯ ಕುರಿತು ಕಿಡಿಕಾರಿದ್ದಾರೆ.
ಜನರ ಪರವಾಗಿ,ಪರಿಸರದ ಪರವಾಗಿ ಕೆಲಸ ಮಾಡುವ ಮುನಿರಾಜು ಅವರಂತಹ ಪ್ರಾಮಾಣಿಕ ಅಧಿಕಾರಿಯನ್ನು ಉಳಿಸೋದು ಪ್ರಜೆಗಳಾದ ನಮ್ಮ ಕರ್ತವ್ಯ. ಈ ದಕ್ಷ ಅಧಿಕಾರಿಗೆ ಈ ಹಿಂದೆಯೇ ಉಡುಪಿ Xpress ಬೆಂಬಲವಾಗಿ ನಿಂತಿತ್ತು. ಈಗಲೂ ಬೆಂಬಲವಾಗಿ ನಿಲ್ಲಲಿದೆ. ನೀವೂ ಬೆಂಬಲ ನೀಡಿ ಇಂತಹ ಪ್ರಾಮಾಣಿಕ ಅಧಿಕಾರಿಯ ಉಳಿಸಬೇಕು ಎನ್ನುವುದು ನಮ್ಮ ವಿನಂತಿ
ಈ ದಕ್ಷ ಅಧಿಕಾರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದ್ವನಿ ಎತ್ತುವುದಾದಲ್ಲಿ- ಸಾಂವಿಧಾನಿಕ ಹಕ್ಕುಗಳನ್ನು ಬಳಸಿ ಪ್ರಶ್ನೆ ಕೇಳಿ/ಇ-ಮೇಲ್ ಮಾಡಿ/ಟ್ವೀಟ್ ಮಾಡಿ: ಸಂಪರ್ಕ ಇಲ್ಲಿದೆ.
- ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಗಳಾದ ಯಡಿಯೂರಪ್ಪ
Contact Number: 08187-222777/222256,08182-255233,
9449827633
Email:[email protected]
Twitter ;-https://mobile.twitter.com/CMofKarnataka
- T K Anilkumar, IAS Secretary to Govt, DPAR, Room No.246, Vidhana Soudha, Bengaluru
080 22033335 - Chief Secretary, Govt of Karnataka, Room No.321, Vidhana Soudha, Bengaluru. 080 22033300
- Dr. Sandeep Dave ಇ-ಮೇಲ್: [email protected] ಸಂಪರ್ಕ: 08022258393
- Shri. VIJAYKUMAR GOGI, l Secretary (Ecology) [email protected] 08022254434
- Smt. SMITA BIJJUR, IFSPrincipal Secretary (Forests) [email protected] 08022254434
- Smt Kusuma MPersonal Secretary to Additional Chief Secretary (Forest Office:080-22256722 And 22032509 Internal: 2509
- Anand Singh Minister
9901209999
Forest, Ecology and Environment [email protected] - ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ
ಸಂಜಯ್ ಮೋಹನ್ ರವರ ದೂರವಾಣಿ ಸಂಖ್ಯೆ:- 9341229947 - ಉಡುಪಿ ಜಿಲ್ಲಾ ಅರಣ್ಯಾಧಿಕಾರಿ – 9642991674
ಮೇಲಿನ ಎಲ್ಲಾ ದೂರವಾಣಿ ಸಂಖ್ಯೆ ಗಳಿಗೆ ಕರೆ / emails/ twitte ಮಾಡುವುದರ ಮೂಲಕ ದಕ್ಷ ಅಧಿಕಾರಿ ಮುನಿರಾಜು ಅವರ ವರ್ಗಾವಣೆ ಕ್ಯಾನ್ಸಲ್ ಮಾಡುವಂತೆ ಮತ್ತು ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಕರ್ನಾಟಕ ರಾಜ್ಯದ DPAR ನ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮನವಿ ಮಾಡಿ