ಉಡುಪಿ: ಬಜೆ ಡ್ಯಾಂಗೆ ಸ್ವರ್ಣ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಬಂದಿದ್ದು, ಸದರಿ
ನೀರಿನಲ್ಲಿ ಬಂದ ಕಸ, ಕಡ್ಡಿಗಳನ್ನು ಗೇಟ್ ತೆಗೆದು ನದಿಯಿಂದ ಹೊರ ಬಿಡಲಾಗಿದೆ. ಅದೇ ನೀರನ್ನು ತೆಗೆದುಕೊಂಡು ಶುದ್ಧೀಕರಣ ಮಾಡಿ, ಸಾರ್ವಜನಿಕರಿಗೆ ಸರಬರಾಜು ಮಾಡಲಾಗಿರುತ್ತದೆ. ಇದು ಪ್ರಥಮ ಮಳೆಯಾಗಿರುವುದರಿಂದ ಆಲಂ ಪ್ರಮಾಣ ಈ ಹಿಂದೆ ನಿಗದಿಪಡಿಸಿದಂತೆ ಇರುವುದರಿಂದ ಸಾರ್ವಜನಿಕರಿಗೆ ಸ್ವಲ್ಪ ಪ್ರಮಾಣದಲ್ಲಿ ಕೆಂಪು ನೀರು ಸರಬರಾಜು ಆಗಿರುತ್ತದೆ.
ಈಗಾಗಲೇ ಆಲಂ ಪ್ರಮಾಣವನ್ನು ಸರಿಪಡಿಸಲಾಗಿದ್ದು, ನಗರಸಭೆ ನೀರು, ಸರಬರಾಜು ಮಾಡುತ್ತಿರುವ ನೀರಿನಲ್ಲಿ ಕಸ-ಕಡ್ಡಿಗಳು ಬಂದಿರುವುದಿಲ್ಲ. ನೀರಿನ ಬಣ್ಣ ಮಾತ್ರ ಬದಲಾವಣೆ ಆಗಿರುತ್ತದೆ. ಇದು ಹೆಚ್ಚು ಮಳೆ ಬಿದ್ದಾಗ ಸ್ವಾಭಾವಿಕವಾಗಿ ಸಂಪೂರ್ಣ ಬಣ್ಣ ತೆಗೆಯಲು ಸಾಧ್ಯವಾಗಿರುವುದಿಲ್ಲ. ಆದಾಗ್ಯೂ ಸಾರ್ವಜನಿಕರ ಸುರಕ್ಷತೆಗೋಸ್ಕರ ಸಂಪೂರ್ಣ ಶುದ್ದೀಕರಣ ಮಾಡಿ ನೀರು ವಿತರಿಸಲು ನಗರಸಭೆಯು ಕ್ರಮ ಕೈಗೊಳ್ಳಲಿದ್ದು , ಮಳೆಗಾಲ ಆಗಿರುವ ಕಾರಣ ನೀರನ್ನು ಕುದಿಸಿ ಕುಡಿಯುವಂತೆ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.