ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ
ಮೀಸಲಾತಿ ಬೇಕೆಂಬ ಕೂಗು ಒಂದೆಡೆಯಾದರೆ, ಈ ಮೀಸಲಾತಿಯೇ ನಮ್ಮನ್ನು ಶೇೂಷಿಸುತ್ತಿದೆ ಎಂಬ ಕೂಗು ಇನ್ನೊಂದೆಡೆ. ಇದು ಆಶ್ಚರ್ಯವಾದರೂ ಸತ್ಯ. ಇದರ ಸಂಪೂರ್ಣ ಚಿತ್ರಣ ತಮ್ಮ ಮುಂದಿಡುವ ಪ್ರಯತ್ನ ಇಲ್ಲಿದೆ ಓದಿದ ಅನಂತರ ತಮಗೆ ಮೀಸಲಾತಿ ಬೇಕಾ? ಬೇಡವಾ? ಅನ್ನುವುದನ್ನು ಮತ್ತೆ ಆಲೇೂಚನೆ ಮಾಡಿ ತಿಳಿಸಿ.
ಮೀಸಲಾತಿಯ ಮುಖ್ಯ ಉದ್ದೇಶವೇ ಸಾಮಾಜಿಕ ನ್ಯಾಯ; ಲಿಂಗ ನ್ಯಾಯ; ಆರ್ಥಿಕ ನ್ಯಾಯ; ರಾಜಕೀಯ ನ್ಯಾಯ ಒದಗಿಸುವುದೇ ಆಗಿರುತ್ತದೆ.
ಕರಾವಳಿಯ ಪ್ರಮುಖ ಜಿಲ್ಲೆಗಳಾದ ಉಡುಪಿ ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಪಂಗಡಕ್ಕೆ ಸೇರಿದ (ಮರಾಠಿಗರು, ಮಲೆಕುಡಿಗರು, ಕೊರಗರು) ಪುರುಷರು ಈ ಎರಡೂ ಜಿಲ್ಲಾ ವ್ಯಾಪ್ತಿಯಲ್ಲಿ ರಾಜಕೀಯವಾಗಿ ಗ್ರಾಮೀಣ ಆಡಳಿತ ಯಂತ್ರಗಳಾದ ತಾಲೂಕು ಜಿಲ್ಲಾ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಸ್ಥಾನ ಮಾನ ಪಡೆಯಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇಂದಿನ ಜಿಪಂ, ತಾಪಂಗಳ ಪುನರ್ ವಿಂಗಡಣ ಜಾತಿ ಮೀಸಲಾತಿ ವಿಧಾನವೇ ಇದಕ್ಕೆ ಕಾರಣ.
2011ರ ಜನಗಣತಿಯ ಜನ ಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಗುಣಿಸಿ ಭಾಗಿಸಿ ಕೂಡಿಸಿ ನೇೂಡಿದಾಗ ಉಡುಪಿ ಜಿಲ್ಲೆಯಲ್ಲಿ ಈ ಪಂಗಡದ ಒಟ್ಟು ಜನಸಂಖ್ಯೆಯಲ್ಲಿ 4.49ರಷ್ಟು ಬರುವ ಕಾರಣ ಇವರಿಗೆ ಉಡುಪಿ ದ.ಕ.ಜಿಲ್ಲಾ ಪಂಚಾಯತ್ ನಲ್ಲಿ ಕೇವಲ ಒಂದು ಸ್ಥಾನ ಈ ಪಂಗಡದವರಿಗೆ ದಕ್ಕವಂತಾಗಿದೆ. ಮಾತ್ರವಲ್ಲ ಇನ್ನೊಂದು ವಿಶೇಷತೆ ಅಂದರೆ ಇದೂ ಕೂಡಾ ಮಹಿಳಾ ಮೀಸಲಾತಿಗೆ ಒಳಪಡುತ್ತದೆ. ಅಂದರೆ ಈ ಪಂಗಡಕ್ಕೆ ಸೇರಿದ ಪುರುಷರು ಇನ್ನು ಜೀವನ ಪರಿರ್ಯಾಂತ ಕೇವಲ ಮತದಾರರಾಗಿ ಮತ ಕಟ್ಟೆಗೆ ಬಂದು ಹೇೂಗಬಹುದೇ ವಿನಾ: ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಪ್ರವೇಶಕ್ಕೆ ಅವಕಾಶವಿಲ್ಲ ಅನ್ನುವುದನ್ನು ಕಾನುಾನಾತ್ಮಕವಾಗಿ ನಿಬ೯ಂಧ ಹೇರಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.
1997-98 ರಲ್ಲಿ ದ.ಕ.ಉಡುಪಿ ಜಿಲ್ಲಾ ಬೇಪ೯ಟ್ಟ ಕಾಲದಿಂದ ಅಂದರೆ ಸುಮಾರು ಮೂರು ದಶಕಗಳಿಂದ ಈ ಪಂಗಡದ ಪುರುಷರು ಇಂತಹ ಅವೈಜ್ಞಾನಿಕ ಮೀಸಲಾತಿಯ ನೇೂವುವನ್ನು ನುಂಗಿ ಕೊಂಡು ಬದುಕ ಬೇಕಾದ ಪರಿಸ್ಥಿತಿ ನಿಮಾ೯ಣವಾಗಿದೆ ಅಂದರೂ ತಪ್ಪಾಗಲಾರದು. ಒಟ್ಟಿನಲ್ಲಿ ಪರಿಶಿಷ್ಟ ಪಂಗಡದ ಪುರುಷರ ಬೇಡಿಕೆ ಅಂದರೆ ಒಟ್ಟು ಜನ ಸಂಖ್ಯೆಯ ಪ್ರಮಾಣದಲ್ಲಿ ಶೇ.4.49 ರಷ್ಟು ಇರುವ ನಮಗೆ ಕನಿಷ್ಠ ಪಕ್ಷ ಎರಡು ಸ್ಥಾನವಾದರೂ ನೀಡಿ ಅದರಲ್ಲಿ ಒಂದನ್ನು ಪುರುಷರಿಗೆ ಮೀಸಲು ಇಡುವ ಮೂಲಕ ಸಾಮಾಜಿಕ ಲಿಂಗ ನ್ಯಾಯ ವನ್ನು ನೀಡಿ ಅನ್ನುವುದು ಅವರ ಕಳಕಳಿಯ ಪ್ರಾಥ೯ನೆ ಮಾತ್ರವಲ್ಲ ಶೇ.6.41 ರಷ್ಟು ಇರುವ ಜಾತಿ /ವಗ೯ಗಳಿಗೆ ಮೂರು ಸ್ಥಾನ ನೀಡಲೂ ಬಯಸುವುದಾದರೆ ಶೇ. 4.49ರಷ್ಟು ಜನ ಸಂಖ್ಯೆ ಇರುವ ಪಂಗಡಕ್ಕೆ 2 ಸ್ಥಾನ ನೀಡುವದರಲ್ಲಿ ತಪ್ಪೇನುಂಟು ಅನ್ನುವುದು ಕೂಡಾ ಇವರ ಬೇಡಿಕೆಯೂ ಹೌದು.
ಈ ಪಂಗಡಕ್ಕೆ ಸೇರಿದ ಪುರುಷರ ಸ್ಥಿತಿ ಎಲ್ಲಿಗೆ ಬಂದಿದೆ ಅಂದರೆ “ನೀವು ಜನ ಸಂಖ್ಯೆಯ ಪ್ರಮಾಣದಲ್ಲಿ ಕಡಿಮೆ ಇದ್ದೀರಿ ಗುಣಿಸಿ ಭಾಗಿಸಿ ಕಳೆದಾಗ ನಿಮಗೆ ದಕ್ಕುವುದು ಒಂದೇ ಸ್ಥಾನ ಅದುಾ ಕೂಡಾ ಮಹಿಳೆಯರಿಗೆ. ನೀವು ಬೇಕಾದರೆ ಜನರಲ್ ಮೆರೀಟ್ ನಲ್ಲಿ ಸ್ಪಧಿ೯ಸಿ “ಅನ್ನುವ ಹೇಳಿಕೆ ಅಧಿಕಾರಸ್ಥರಿಂದ ಬರುವ ಪರಿಸ್ಥಿತಿ ಬಂದಿದೆ.ಅದೂ ಅಲ್ಲದೇ ನಮ್ಮ ಪಂಗಡಕ್ಕೆ ಸೇರಿದ ಅಭ್ಯರ್ಥಿ ಗಳಿಗೆ ಸಾಮಾನ್ಯ ಅಭ್ಯರ್ಥಿಗ್ಗಿಂತ ಹೆಚ್ಚಿನ ಗುಣ ಆಹ೯ತೆ ಇದ್ದಾಗಲೂ ಕೂಡಾ ಅದನ್ನು ಗುರುತಿಸಿ ಬೆಂಬಲಿಸುವ ಮನ:ಸ್ಥಿತಿ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇದೇಯೇ ಅನ್ನುವುದು ಇವರ ಇನ್ನೊಂದು ಮೂಲ ಭೂತ ಪ್ರಶ್ನೆ ಕೂಡಾ.
ಇದು ಇಂದಿನ ರಾಜಕೀಯ ಮೀಸಲಾತಿಯ ಅವೈಜ್ಞಾನಿಕ ಅಂಶ ಅನ್ನುವುದನ್ನು ಕಾನೂನು; ಸಂವಿಧಾನ ತಜ್ಞರು ಆಲೇೂಚನೆ ಮಾಡಲಿ ಅನ್ನುವುದು ನಮ್ಮ ನಿವೇದನೆಯೂ ಹೌದು ಅನ್ನುವುದು ಈ ಪಂಗಡದಪುರುಷರ ಧ್ವನಿ ಯೂ ಆಗಿದೆ.
ಆದುದರಿಂದ ಸಾಮಾಜಿಕ; ಜಾತಿ ;ಲಿಂಗ ತಾರತಮ್ಯದ ಕುರಿತು ಮಾತನಾಡುವ ಕಾನೂನು ಪರಿಣಿತರು; ಅಧಿಕಾರಿಗಳು; ರಾಜಕೀಯ ಅಧಿಕಾರಸ್ಥರು ಈ ನಿಟ್ಟಿನಲ್ಲಿ ಕೂಡಲೇ ಸ್ಪಂದಿಸಿ ಪರಿಶಿಷ್ಟ ಪಂಗಡದ ಮೂಲದ (ಮರಾಠಿ ;ಮಲೆಕುಡಿಗರು ಕೊರಗರು)ಪುರುಷರ ರಾಜಕೀಯ ಹಕ್ಕುಗಳನ್ನು ಸಂರಕ್ಷಣೆ ಮಾಡುವಲ್ಲಿ ಮುಂದಾಗಲಿ ಅನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ವಿಶ್ವಾಸ ವಿರುವರ ಒತ್ತಾಯ ಹೌದು.
???? ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ