ಉಡುಪಿ: ಮಳೆಗೆ ಕೊಚ್ಚಿ ಹೋಗಿದ್ದ ವ್ಯಕ್ತಿ; 9 ತಿಂಗಳ ಬಳಿಕ ಅಸ್ತಿಪಂಜರದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಉಡುಪಿ: ಒಂಭತ್ತು ತಿಂಗಳ ಹಿಂದೆ ಅಂದರೆ 2020ರ ಜುಲೈ 3ರಂದು ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹವು ಅಸ್ತಿಪಂಜರದ ಸ್ಥಿತಿಯಲ್ಲಿ ಇಂದು ಮಣಿಪುರದ ಮೂಡು ಕಲ್ಮಂಜೆ ಹೊಳೆಯ ಬದಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಶ್ರೀನಿವಾಸ ನಾಯ್ಕ(72) ಎಂದು ಗುರುತಿಸಲಾಗಿದೆ. ಇವರು 2020ರ ಜುಲೈ 3ರಂದು ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಹೊಳೆಯ ಸೇತುವೆ ಬಳಿ ಚಪ್ಪಲಿ ಮತ್ತು ಚೀಲ ಇಟ್ಟು ಕಾಣೆಯಾಗಿದ್ದರು. ಎಷ್ಟು ಹುಡುಕಾಟ ನಡೆಸಿದರೂ ಶ್ರೀನಿವಾಸ ಅವರು ಪತ್ತೆಯಾಗಿರಲಿಲ್ಲ. ಅಂದು ವಿಪರೀತ ಮಳೆ ಬರುತ್ತಿದ್ದ ಕಾರಣ ಹೊಳೆಯ ಬದಿಗೆ […]

ಕಾಪು ಮಂಡಲ ಬಿಜೆಪಿ ಯುವ ಮೋರ್ಚಾದಿಂದ ಹುತಾತ್ಮ ಯೋಧರಿಗೆ ನುಡಿನಮನ

ಕಾಪು: ಕಾಪು ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಛತ್ತಿಸ್ ಗಡದಲ್ಲಿ ನಕ್ಸಲರ ದಾಳಿಯಿಂದ ಬಲಿಯಾದ ಹುತಾತ್ಮರಾದ ಯೋಧರಿಗೆ ನುಡಿನಮನ ಮತ್ತು ಮೌನ ಮೆರವಣಿಗೆ ಇಂದು ಕಾಪು ಪೇಟೆಯಲ್ಲಿ ನಡೆಯಿತು. ನೂರಾರು ಬಿಜೆಪಿ ಕಾರ್ಯಕರ್ತರು ಮೊಂಬತ್ತಿ ಹಚ್ಚಿ ಮೌನ ಮೆರವಣಿಗೆ ನಡೆಸಿ ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್, ಕ್ಷೇತ್ರ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು […]

ನಾಳೆಯ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆ ಮುಂದೂಡಿಕೆ

ಮಂಗಳೂರು: ರಾಜ್ಯದಲ್ಲಿ ಕೆಎಸ್ ಆರ್ ಟಿಸಿ ಮುಷ್ಕರದ ಹಿನ್ನೆಲೆಯಿಂದ ನಾಳೆ (ಬುಧವಾರ) ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ರದ್ದು ಮಾಡಿ ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದೆ. ಎ.8 ರಿಂದ ಪರೀಕ್ಷೆಗಳು ನಿಗಧಿತ ದಿನಾಂಕಗಳಂತೆ ನಡೆಯಲಿದೆ.ಬುಧವಾರ ಪರೀಕ್ಷೆಯನ್ನು ಪರ್ಯಾಯ ದಿನಾಂಕದಂದು ನಿಗಧಿಪಡಿಸಲಾಗುವುದು ಎಂದು ಪರೀಕ್ಷಾಂಗ ಮುಖ್ಯಸ್ಥ ಪ್ರೊ.ಧರ್ಮಾ ತಿಳಿಸಿದ್ದಾರೆ.

ಉಡುಪಿ ಮೂಲದ ಹಿರಿಯ ನಟಿ ಪ್ರತಿಮಾ ದೇವಿ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಖ್ಯಾತ ನಿರ್ದೇಶಕ, ನಿರ್ಮಾಪಕ ದಿವಂಗತ ಶಂಕರ್‌ ಸಿಂಗ್‌ ಅವರ ಪತ್ನಿ ಪ್ರತಿಮಾ ದೇವಿ (88) ಅವರು ಮಂಗಳವಾರ ಮಧ್ಯಾಹ್ನ ನಿಧನ ಹೊಂದಿದರು. ಮೂಲತಃ ಉಡುಪಿಯ ಪ್ರತಿಮಾ ದೇವಿ ಸಣ್ಣಪ್ರಾಯದಲ್ಲೇ ರಂಗಭೂಮಿಗೆ ಹೆಜ್ಜೆ ಇಟ್ಟಿದ್ದರು. ಇವರ ಮೂಲ ಹೆಸರು ಮೋಹಿನಿ.1947ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಕೃಷ್ಣಲೀಲಾ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಜಗನ್ಮೋಹಿನಿ ಚಿತ್ರದ ಮುಖಾಂತರ ನಾಯಕಿಯಾಗಿ ಅವರು ಮಿಂಚಿದ್ದರು ಚಂಚಲ ಕುಮಾರಿ, ನಾಗಕನ್ಯಾ, ದಲ್ಲಾಳಿ, ಧರ್ಮಸ್ಥಳ ಮಹಾತ್ಮೆ, […]

ಕೋವಿಡ್ ಲಸಿಕೆಗಾಗಿ ವೈದ್ಯರಿಗೆ ದುಂಬಾಲು ಬಿದ್ದ ವಿದೇಶಿಗರು

ಗೋಕರ್ಣ: ಭಾರತದ ಕೋವಿಡ್ ಲಸಿಕೆಗೆ ವಿದೇಶಿಗರಿಂದಲೂ ಬೇಡಿಕೆ ಹೆಚ್ಚಿದೆ. ಗೋಕರ್ಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆಯಲು ವಿದೇಶಿ ಪ್ರಜೆಗಳು ವೈದ್ಯರಿಗೆ ದುಂಬಾಲು ಬೀಳುತ್ತಿದ್ದಾರೆ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಬರುವ ವಿದೇಶಿಗರು, ಬೇಕಿದ್ದರೆ ಹಣ ಪಾವತಿಸುತ್ತೇವೆ. ದಯವಿಟ್ಟು ಲಸಿಕೆ ನೀಡಿ ಎಂದು ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವಾರದಲ್ಲಿ 15ಕ್ಕೂ ಹೆಚ್ಚು ವಿದೇಶಿಗರು ಲಸಿಕೆ ಕೇಳಿಕೊಂಡು ಬಂದಿದ್ದು, ವಿದೇಶಿಗರಿಗೆ ಲಸಿಕೆ ನೀಡುವ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಆದೇಶ ಬಂದಿಲ್ಲದ ಕಾರಣ. ವೈದ್ಯರು […]