ಮಲ್ಪೆ: ಇಲ್ಲಿನ ಲಕ್ಷ್ಮೀನಗರದ 7ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಗೀತಾ (52) ಎಂಬ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಪರೀತ ಕುಡಿತದ ಚಟ ಹೊಂದಿದ್ದ ಗೀತಾ, ಡಿ. 19ರಂದು ರಾತ್ರಿ ಕಂಠಪೂರ್ತಿ ಕುಡಿದಿದ್ದರು. ಮಲಗುವುದಾಗಿ ಕೋಣೆಗೆ ಹೋಗಿದ್ದ ಅವರು ರಾತ್ರಿ ಸುಮಾರು 10.30ಕ್ಕೆ ಮನೆಯವರು ನೋಡಿದಾಗ ಚೆಯರ್ ಮೇಲೆ ಕುಳಿತ ಸ್ಥಿತಿಯಲ್ಲಿದ್ದು, ಕುತ್ತಿಗೆಗೆ ನೈಲಾನ್ ಸೀರೆ ಕಟ್ಟಿ ಪ್ಯಾನ್ ಗೆ ನೇಣುಬಿಗಿದು ಕೊಂಡ ಸ್ಥಿತಿಯಲ್ಲಿದ್ದರು.
ನೇಣಿನಿಂದ ಬಿಡಿಸಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಗೀತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಗೀತಾ ಅವರ ವಿಪರೀತ ಮದ್ಯಸೇವನೆ ಮಾಡುವ ಅಭ್ಯಾಸ ಹೊಂದಿದ್ದು, ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.