ಮೂಲ್ಕಿ: ಮೂಲ್ಕಿ- ಮೂಡಬಿದ್ರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ರಾಷ್ಟ್ರೀಯ ನಾಯಕಿ ಪ್ರಿಯಾಂಕ ಗಾಂಧಿ ಅವರು ಮುಲ್ಕಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದರು.ತುಳುನಾಡಿಗೆ ಪ್ರಿಯಾಂಕ ಗಾಂಧಿಯವರ ಮೊದಲ ಭೇಟಿ ಇದಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಹಳ ಉತ್ಸಾಹದಿಂದ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಟೀಲು ದುರ್ಗಾಪರಮೇಶ್ವರಿ ತಾಯಿಯ ಭಾವಚಿತ್ರ, ತುಳುನಾಡಿನ ಹುಲಿ ವೇಷದ ಪ್ರತಿಕೃತಿ ಮತ್ತು ಕಂಬಳದ ಬೆತ್ತವನ್ನು ಪ್ರಿಯಾಂಕ ಗಾಂಧಿಯವರಿಗೆ ನೀಡಿ ಗೌರವಿಸಲಾಯಿತು.