ಮುದ್ರಾಡಿ: ಮಾ. 28ಕ್ಕೆ ಉಚಿತ ಕಣ್ಣಿನ ತಪಾಸಣಾ ಶಿಬಿರ

ಮುದ್ರಾಡಿ: ಮುದ್ರಾಡಿ ಗ್ರಾಪಂ ಹಾಗೂ ಹೆಬ್ರಿ ಕಣ್ಣಿನ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಮಾ. 28ರ ಭಾನುವಾರ ಬೆಳಿಗ್ಗೆ 9.30ರಿಂದ 1.30ರ ವರೆಗೆ ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ‌ ಆಯೋಜಿಸಲಾಗಿದೆ.

ಶಿಬಿರದಲ್ಲಿ ಕಣ್ಣಿನ ಪೊರೆ ತಪಾಸಣೆ, ಕಣ್ಣಿನ ಇತರ ಸಮಸ್ಯೆಗಳ ತಪಾಸಣೆ ಹಾಗೂ ಚಿಕಿತ್ಸೆ ಅಗತ್ಯವಿರುವ ಶಿಬಿರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಕನ್ನಡಕ ವ್ಯವಸ್ಥೆ ಮಾಡಿಕೊಡಲಾಗುವುದು. ಹಾಗೆ ಪೊರೆ ಶಸ್ತ್ರ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು.

ಕಣ್ಣಿನ ಪೊರೆ ಸಮಸ್ಯೆ ಇದ್ದವರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಎಂದು ಡಾ. ರೂಪಶ್ರಿ ರಾವ್ ಹಾಗೂ ಡಾ. ಹರಿಪ್ರಸಾದ್ ಓಕುಡ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 91416 99303 ಸಂಪರ್ಕಿಸಬಹುದು.