ಉಡುಪಿ: ಪ್ರೀತಿಗೆ ಭಾಷೆಯ ಹಂಗಿಲ್ಲ ಎಂಬುವುದಕ್ಕೆ ಉಡುಪಿ ಜಿಲ್ಲೆಯ ಮುದರಂಗಡಿಯ ಈ ಘಟನೆ ಸಾಕ್ಷಿ.
ಹೌದು, ಸಂತ ಫ್ರಾನ್ಸಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಯೊಬ್ಬಳು ಪ್ರತಿದಿನ ಬೆಳಿಗ್ಗೆ ಬಸ್ ಹತ್ತಲು ಹೋಗುವಾಗ ಮನೆಯ ಶ್ವಾನವು ಮಗುವಿನ ಜೊತೆಯಲ್ಲೇ ಬರುತ್ತದೆ. ಮಗು ಬಸ್ ಹತ್ತಿದ ಮೇಲೆ ಬಸ್ ಮೆಟ್ಟಿಲಿನ ಮೇಲೆ ನಿಂತು ಮಗು ಸೀಟಿನಲ್ಲಿ ಕುಳಿತಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಈ ಶ್ವಾನವು ಅಲ್ಲಿಂದ ಮರಳುತ್ತದೆ. ಈ ಶ್ವಾನದ ಕಾಳಜಿ ಮತ್ತು ಪ್ರೀತಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
















