ಮಣಿಪಾಲ: ಭಾನುವಾರದಂದು ಶಿವಪಾಡಿಯ ಶಿವಭೂಮಿಯು ಬಾಲಶಿವರಿಂದ ಕಳೆಗಟ್ಟಿತು. ಅತಿರುದ್ರಯಾಗದ ಪ್ರಯುಕ್ತ ಶಿವಪಾಡಿಯ ಶ್ರೀ ಉಮಾ ಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಸಮರ್ಪಣಾ ದಿನದ ಅಂಗವಾಗಿ ನಡೆದ ಬಾಲಶಿವ ವೇಷಭೂಷಣ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ 150 ಕ್ಕೂ ಹೆಚ್ಚಿನ ಬಾಲಶಿವ ವೇಷಧಾರಿ ಮಕ್ಕಳು ಭಾಗವಹಿಸಿದರು.
ಶಿವಪಾಡಿಯೆಲ್ಲಾ ಶಿವಮಯವಾಗಿ ಭಕ್ತರು ಪುಳಕಿತಗೊಂಡರು.