ಕೊಡವೂರು: ಕೊಡವೂರು ವಾರ್ಡ್ ನ 15ನೇ ಯ ಗ್ರಾಮ ಸಭೆ ವಿಪ್ರ ಶ್ರೀ ಸಭಾಭವನದಲ್ಲಿ ನಡೆಯಿತು.
ನಗರಸಭಾ ಸದಸ್ಯ ವಿಜಯ್ ಕೊಡವೂರು ಅವರ ಮುಂದಾಳತ್ವದಲ್ಲಿ ಹಿರಿಯರನ್ನು ಮುಂದಿಟ್ಟು ಅವರ ಮಾರ್ಗದರ್ಶನದ ಮುಖಾಂತರ ಹದಿನೈದು ಬಾರಿ ಗ್ರಾಮ ಸಭೆ ನಡೆಸಲಾಯಿತು. ನೆರೆ ಬಂದು ಒಂದು ವರ್ಷ ತುಂಬುವ ದಿನದಂದು ನೆರೆಯಿಂದ ಅನುದಾನ ಬಿಡುಗಡೆಯಾಗಿದೆ. ಮನೆ ನಿರ್ಮಾಣದ ಕಾಮಗಾರಿ ಮತ್ತು ಸಂಧ್ಯಾ ಸುರಕ್ಷಾ, ವ್ಯದಾಪ್ಯ ವೇತನ ಮತ್ತು ಮನೆಯ ಹಕ್ಕು ಪತ್ರದ ಬಗ್ಗೆ ಮತ್ತು ನಗರಸಭೆಯ ಯೋಜನೆಗಳ ಮಾಹಿತಿಯನ್ನು ಪ್ರಶ್ನೋತ್ತರ ರೂಪದಲ್ಲಿ ನೆರವೇರಿಸಲಾಯಿತು.
ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ಕೊಡವೂರಿನ ಜನರಿಗೆ ನ್ಯಾಯ ಕೊಡುವ ಉದ್ದೇಶದಿಂದ ವಿವಿಧ ಸಮಿತಿ ರಚಿಸಿ, ಆ ಮೂಲಕ ಕೆಲಸ ಮಾಡಲಾಗುತ್ತಿದೆ, ಉದ್ಯೋಗ ನೀಡುವ ಸಮಿತಿ, ರಕ್ತ ನಿಧಿ ಸಮಿತಿ, ಕೃಷಿಕರ ಸಮಿತಿ, ಸ್ವಂತ ಉದ್ಯೋಗ ಸಮಿತಿ, ದಿವ್ಯಾಂಗ ರಕ್ಷಣಾ ಸಮಿತಿ, ಮಹಿಳೆಯರ ರಕ್ಷಣೆಗಾಗಿ ಸಮಿತಿ ಹೀಗೆ 15 ಸಮಿತಿಯನ್ನು ರಚಿಸಲಾಗಿದೆ. ಕೊಡವೂರು ವಾರ್ಡ್ ಅನ್ನು ಮಾದರಿ ವಾರ್ಡ್ ಅನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಸಂಘ ಸಂಸ್ಥೆಗಳ ಸಹಕಾರದೊಂದು ಕೆಲಸ ಮಾಡಲಾಗುತ್ತಿದೆ ಎಂದರು.
ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕೇಯ ಬಟ್ ಮತ್ತು ನಗರಸಭೆಯ ಸಂಘಟನಾಧಿಕಾರಿ ನಾರಾಯಣ, ಗುರುಪ್ರಸಾದ್ ಉಪಸ್ಥಿತರಿದ್ದರು.
ಇದೇ ವೇಳೆ ಕೊಡವೂರು ಶಂಕರನಾರಾಯಣ ದೇವಸ್ಥಾನದ ಮುಂಭಾಗದಲ್ಲಿ ಮತ್ತು ರಿಕ್ಷಾ ನಿಲ್ದಾಣದಲ್ಲಿ ಹೂವಿನ ಗಿಡ ನೆಡಬೇಕೆಂಬ ಉದ್ದೇಶದಿಂದ ರಮೇಶ್ ಕೊಪ್ಪಳ್ ತೋಟ ಅವರು 50 ಹೂವಿನ ಚಟ್ಟಿಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕಡಿಮೆ ವೆಚ್ಚದಲ್ಲಿ ಅಫಿದವಿಟ್ ಮಾಡಿಕೊಡುತ್ತಿರುವ ಲಕ್ಷ್ಮೀ ಮತ್ತು ಕೊಡವೂರು ಸೇವಾ ಕೇಂದ್ರದಲ್ಲಿ ದಿನನಿತ್ಯ ಸೇವೆ ಮಾಡುತ್ತಿರುವ ವಾಣಿ ಅವರನ್ನು ಗೌರವಿಸಲಾಯಿತು. ವಿನಯ್ ಗರ್ಡೆ ಸ್ವಾಗತಿಸಿದರು. ಅಮಿತ್ ಗರ್ಡೆ ವಂದಿಸಿದರು.