ಎಂಎಲ್‌ಸಿ ಮಂಜುನಾಥ ಭಂಡಾರಿಗೆ ಸಚಿವ ಸ್ಥಾನ‌ ಖಚಿತ..! 

ಮಂಗಳೂರು: ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ದ.ಕ. ಜಿಲ್ಲೆಗೆ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ನ ಕೆಲ ಬಲ್ಲ‌ ಮೂಲಗಳಿಂದ ತಿಳಿದು ಬಂದಿದೆ. ಮಂಗಳೂರು ವಿಧಾನಸಭಾ ಶಾಸಕ ಯು.ಟಿ ಖಾದರ್ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಇತ್ತು. ಆದರೆ ಅನೀರಿಕ್ಷಿತ ಬೆಳವಣಿಗೆಯಲ್ಲಿ ಯು.ಟಿ. ಖಾದರ್ ಅವರಿಗೆ ಸಚಿವ ಸ್ಥಾನದ ಬದಲಾಗಿ ಸ್ಪೀಕರ್ ಸ್ಥಾನ ನೀಡಲಾಗಿದೆ. ಹೀಗಾಗಿ ಕರಾವಳಿಗೆ ಹೊರಭಾಗದವರಿಗೆ ಸಚಿವ ಸ್ಥಾನ ನೀಡುವ ಬದಲು ಇಲ್ಲಿನವರೇ ಆದ ಮಂಜುನಾಥ ಭಂಡಾರಿ ಅವರಿಗೆ ಆ ಸ್ಥಾನ ನೀಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ಸಜ್ಜನ‌ ರಾಜಕಾರಣಿ ಆಗಿರುವ ಮಂಜುನಾಥ ಭಂಡಾರಿ ಅವರು ಎಂಎಲ್ ಸಿ ಆಗಿಯೂ‌ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಹೀಗಾಗಿ ಅವರ ಹೆಸರೇ ಮುಂಚೂಣಿಯಲ್ಲಿದೆ.

ಅಧಿಕಾರಕ್ಕಾಗಿ ಲಾಭಿ‌ ಮಾಡಿದವನಲ್ಲ

ಈ ಮಧ್ಯೆ ಸಚಿವ ಸ್ಥಾನದ ಕುರಿತಾಗಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಕ್ಕಾಗಿ ನಾನು ಈ ಹಿಂದೆಯೂ ಯಾವುದೇ ಲಾಭಿ ಮಾಡಿದವನಲ್ಲ ಇನ್ನು ಮುಂದೆಯೂ ಯಾವುದೇ ಲಾಭಿ ಮಾಡುವುದಿಲ್ಲ‌. ಅಧಿಕಾರ ಬಂದಾಗ ಹಿಗ್ಗದೇ ಅಧಿಕಾರ ಇಲ್ಲದಿದ್ದಾಗ ಕುಗ್ಗದೇ ನಡೆದುಕೊಂಡು ಬಂದಿದ್ದೇನೆ. ಹೀಗಾಗಿ ಸಚಿವ ಸ್ಥಾನದ ಬಗ್ಗೆ ಲಾಭಿ ಮಾಡುವ ಪ್ರಮೇಯ ಬರುವುದಿಲ್ಲ ಎಂದು ವಿನಯರ್ಪೂರ್ವಕವಾಗಿ ಉತ್ತರಿಸಿದರು.