ಕುಂದಾಪುರ: ಕುಂದಾಪುರ ಮಾತ್ರವಲ್ಲ, ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಸಹೃದಯಿ, ನಿಷ್ಟಾವಂತ ಮತ್ತು ಅತ್ಯಧಿಕ ಜನ ಮನ್ನಣೆಗಳಿಸಿ ಕುಂದಾಪುರದ ವಾಜಪೇಯಿ ಎಂದೇ ಕರೆಯಲ್ಪಡುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ.
ಸತತ ಐದು ಬಾರಿ ಚುನಾವಣೆಯಲ್ಲಿ ಗೆದ್ದಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಪಕ್ಷದ ಹೆಸರಿನ ಹಂಗಿಲ್ಲದೆ ಯೂ ತಮ್ಮ ಸ್ವಂತ ಬಲದಿಂದಲೇ ಗೆಲ್ಲುವ ಸಾಮರ್ಥ್ಯ ಉಳ್ಳ ಅಭ್ಯರ್ಥಿ. ಕುಂದಾಪುರದಲ್ಲಿ ಹಾಲಾಡಿಯವರಿಗೆ ಅಪಾರ ಜನ ಬೆಂಬಲವಿದೆ.
ಮತದಾರರು ಇದನ್ನು ಯಾವ ರೀತಿ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.