ಎಂಐಟಿ ವತಿಯಿಂದ ಹೈಸ್ಕೂಲ್ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಉಚಿತ 3D ಅನಿಮೇಷನ್ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಧ್ಯಮ ತಂತ್ರಜ್ಞಾನ ವಿಭಾಗ 6 ದಿನಗಳ ಉಚಿತ 3D ಅನಿಮೇಷನ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹೈಸ್ಕೂಲ್ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 3D ಬಗ್ಗೆ ಕಲ್ಪನೆಯನ್ನು ಪಡೆಯಲು ಅನುಕೂಲವಾಗುವಂತೆ 3D ಅನಿಮೇಷನ್ ಕಾರ್ಯಾಗಾರವನ್ನು ಏರ್ಪಡಿಸಿದೆ.

ಕಾರ್ಯಾಗಾರವು ಒಳಗೊಂಡಿರುವ ಪ್ರಮುಖ ವಿಷಯಗಳು: ಮಾಡೆಲಿಂಗ್ ಅನ್ನು ಒಳಗೊಂಡಿರುವ 3D ಅನಿಮೇಷನ್, ಟೆಕ್ಸ್ಚರಿಂಗ್, ಲೈಟಿಂಗ್ ಮತ್ತು ರಿಗ್ಗಿಂಗ್.

30 ವಿದ್ಯಾರ್ಥಿಗಳ ಗರಿಷ್ಠ ಸಾಮರ್ಥ್ಯವಾಗಿರುವುದರಿಂದ, ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಗೂಗಲ್ ಫಾರ್ಮ್‌ನಲ್ಲಿ ನೋಂದಣಿಗೆ ಕೊನೆಯ ದಿನಾಂಕ ಏಪ್ರಿಲ್ 7. ನೋಂದಣಿ ದೃಢೀಕರಣ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾರ್ಯಾಗಾರದ ವಿವರಗಳನ್ನು ಏಪ್ರಿಲ್ 8 ರಂದು ನೀಡಲಾಗುತ್ತದೆ. ಏಪ್ರಿಲ್ 10 ರಂದು ಕಾರ್ಯಾಗಾರ ಆರಂಭವಾಗಲಿದ್ದು, ಏಪ್ರಿಲ್ 15 ರಂದು ಮುಕ್ತಾಯಗೊಳ್ಳಲಿದೆ. ಸಮಯ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ.

ಅನಿಮೇಷನ್ ಕಾರ್ಯಾಗಾರಕ್ಕಾಗಿ ನೋಂದಣಿ ಲಿಂಕ್: https://forms.gle/ztHLBPDuwe8VDE8m8